ಮಂಡ್ಯ

ನೀರಲ್ಲಿ ಮುಳುಗಿದ ಆಶ್ರಮ: ಗೌತಮ ಆಶ್ರಮದ ಗಜಾನನ ಸ್ವಾಮೀಜಿ ರಕ್ಷಣೆ

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆಯಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಕಾವೇರಿ ನದಿ ತೀರದಲ್ಲಿರುವ ಗೌತಮ ಆಶ್ರಮವು ಜಲಾವೃತಗೊಂಡಿದ್ದು, ಆಶ್ರಮದ ಗಜಾನನ ಸ್ವಾಮೀಜಿಯನ್ನು ರಕ್ಷಣೆ ಮಾಡಲಾಗಿದೆ.

ಕಾವೇರಿ ನದಿಯ ನೀರಿನ ಹೊರಹರಿವು ಹೆಚ್ಚಿದ್ದರಿಂದ ಆಶ್ರಮವು ದ್ವೀಪವಾಗಿ ಮಾರ್ಪಟ್ಟಿದ್ದು, ಸ್ವಾಮೀಜಿ ಸೇರಿದಂತೆ ಇಬ್ಬರನ್ನು ಅಗ್ನಿಶಾಮಕ ತಂಡ, ತುರ್ತು ಸೇವೆ ಇಲಾಖೆ ಹಾಗೂ ಎಮ್ಇಜಿ ತಂಡಗಳು ಸೇರಿ ರಕ್ಷಣೆ ಮಾಡಿ ದಡಕ್ಕೆ ಕರೆತರಲಾಯಿತು.

ಈ ಕಾರ್ಯಚರಣೆಯು ಮೈಸೂರು ವಿಭಾಗದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ ಎಸ್ ಜಯರಾಮ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ ಕೆ ಪಿ, ರಾಘವೇಂದ್ರ ಬಿಎಮ್, ರಮೇಶ್.ಸಿ ಅವರ ನೇತೃತ್ವದಲ್ಲಿ ಸುಮಾರು 25 ಜನ ಸಿಬ್ಬಂದಿಯರಿದ್ದರು.

ಈ ಹಿಂದೆಯು ಸಹ ಆಶ್ರಮವು ಜಲಾವೃತಗೊಂಡಿತ್ತು. ಪ್ರವಾಹ ಬಂದರೂ ಗಜಾನನ ಸ್ವಾಮೀಜಿ ಆಶ್ರಮದಲ್ಲೇ ಉಳಿದುಕೊಂಡಿದ್ದರು. ಬಳಿಕ ಎನ್‌ಡಿಆರ್‌ಆಫ್‌ ಹಾಗೂ ತಾಲೂಕು ಆಡಳಿತ ಸ್ವಾಮೀಜಿಯ ಮನವೊಲಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರ ಮಾಡಲಾಗಿತ್ತು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮೈಸೂರಿಗೆ ಮತ್ತೊಂದು ಗರಿ: ಅತ್ಯಾಧುನಿಕ ತಾರಾಲಯ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ!

ಮೈಸೂರು: ಮೈಸೂರಿನ ವಿಜ್ಞಾನ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಗರಿ ಸೇರ್ಪಡೆಯಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ನಿರ್ಮಿಸಿರುವ ಅತ್ಯಾಧುನಿಕ ಟಿಲ್ಟೆಡ್‌…

13 hours ago

ಬೆಳ್ಳಿತೆರೆಗೆ ಸೋನಿಯಾ ಗಾಂಧಿ ಬದುಕಿನ ಕಥೆ! ಆತ್ಮಚರಿತ್ರೆ ಆಧರಿಸಿ ಸಿನಿಮಾ ಘೋಷಣೆ

ನವದೆಹಲಿ: ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಇದೀಗ ಸಿನಿಮಾ ರೂಪದಲ್ಲಿ ಬರಲಿದೆ ಎಂದು ವರದಿಯಾಗಿದೆ. ನವೆಂಬರ್‌…

23 hours ago

ಹಾಸನಾಂಬ ಜಾತ್ರೆಯಲ್ಲಿ ದಾಖಲೆ! ₹29.55 ಕೋಟಿ ಆದಾಯ, 30 ಲಕ್ಷಕ್ಕೂ ಹೆಚ್ಚು ಭಕ್ತರ ದರ್ಶನ

ಹಾಸನ: ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ ಹೊಸ ದಾಖಲೆ ಬರೆದಿದೆ! ಒಟ್ಟು 30 ಲಕ್ಷದ 6 ಸಾವಿರ ಭಕ್ತರು…

24 hours ago

ಯುಪಿಐ ಬಳಕೆದಾರರಿಗೆ ರಿಲೀಫ್‌! ಸದ್ಯಕ್ಕಿಲ್ಲ ಎಂಡಿಆರ್‌ ಶುಲ್ಕ

ನವದೆಹಲಿ: ಯುಪಿಐ ಮೂಲಕ ಪಾವತಿ ಮಾಡುವವರಿಗೆ ಹಾಗೂ ವ್ಯಾಪಾರಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌,…

24 hours ago

ಚಳಿಗೆ ನಡುಗಿದ ದಾವಣಗೆರೆ! ಕನಿಷ್ಠ ತಾಪಮಾನ 10.3°C

ದಾವಣಗೆರೆ: ಕರ್ನಾಟಕದಲ್ಲಿ ಚಳಿಯ ಅನುಭವ ಹೆಚ್ಚುತ್ತಿದೆ. ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 10.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ರಾಜ್ಯದ ಬಯಲು ಪ್ರದೇಶಗಳಲ್ಲೇ…

24 hours ago