ಮಂಡ್ಯ

ದೆಹಲಿಯಿಂದ ಮಂಡ್ಯದ ಕೊಕ್ಕರೆ ಬೆಳ್ಳೂರಿಗೆ ಬಂದ ಪಾರಿವಾಳ

ಅಣ್ಣೂರು ಸತೀಶ್

ಭಾರತೀನಗರ: ಸಾಕಷ್ಟು ಜನರು ಪಾರಿವಾಳವನ್ನು ಸಾಕುತ್ತಾರೆ. ಅದರಲ್ಲಿ ಕೆಲವರು ರೇಸ್‌ಗಾಗಿ ಪಾರಿವಾಳವನ್ನು ಸಾಕುವವರಿದ್ದಾರೆ. ಹಲವೆಡೆ ಈ ಪಾರಿವಾಳ ರೇಸ್ ದೊಡ್ಡ ಕ್ರೇಜ್ ಆಗಿದೆ. ರೇಸ್‌ಗಾಗಿಯೇ ಕೋಟ್ಯಂತರ ರೂ. ಖರ್ಚು ಮಾಡಿ ಪಾರಿವಾಳವನ್ನು ಖರೀದಿಸುವವರಿದ್ದಾರೆ.

ಇದೀಗ ಇಂತಹದ್ದೇ ಒಂದು ರೇಸ್‌ನಲ್ಲಿ ಪಾಲ್ಗೊಂಡಿದ್ದ ಪಾರಿವಾಳ ೫೨ ದಿನ, ೧೭೯೦ ಕಿ.ಮೀ. ಕ್ರಮಿಸಿ ತನ್ನ ಮಾಲೀಕನನ್ನ ಹುಡುಕಿಕೊಂಡು ಬಂದು ದಾಖಲೆ ಬರೆದಿದೆ. ಇಂತಹ ಅಚ್ಚರಿ ಘಟನೆಗೆ ಮಂಡ್ಯ ಜಿಲ್ಲೆಯ ಕೊಕ್ಕರೆಬೆಳ್ಳೂರಿನಲ್ಲಿ ಸಾಕ್ಷಿಯಾಗಿದೆ.

ದೆಹಲಿಯಿಂದ ಮಂಡ್ಯಕ್ಕೆ ಬಂದ ಪಾರಿವಾಳ: ಮಾಲೀಕನನ್ನ ಹುಡುಕಿಕೊಂಡು ದೆಹಲಿಯಿಂದ ಮಂಡ್ಯಕ್ಕೆ ಬರುವ ಮೂಲಕ ಒಂದು ವರ್ಷ ವಯಸ್ಸಿನ ಅಭಿಮನ್ಯು ಹೆಸರಿನ ಪಾರಿವಾಳ ವಿಶೇಷ ದಾಖಲೆ ನಿರ್ಮಿಸಿದೆ. ೫೨ ದಿನದಲ್ಲಿ ೧೭೯೦ ಕಿ.ಮೀ ಕ್ರಮಿಸಿದ ಅತಿ ಚಿಕ್ಕ ವಯಸ್ಸಿನ ಅಭಿಮನ್ಯು(ಈ ಪಾರಿವಾಳ) ಸಾಧನೆ ಮಾಡಿದೆ.

ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್‌ನಿಂದ ಡೆಲ್ಲಿ ರೇಸ್ ಆಯೋಜಿಸಲಾಗಿತ್ತು. ಈ ರೇಸ್‌ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸೇರಿ ಒಟ್ಟು ೨೨ ಪಾರಿವಾಳಗಳು ಭಾಗವಹಿಸಿದ್ದವು. ಎಲ್ಲ ಪಾರಿವಾಳಕ್ಕೂ ರೇಸ್‌ಗೂ ಮುನ್ನವೇ ರಿಂಗ್ ಅಳವಡಿಕೆ ಮಾಡಲಾಗಿತ್ತು. ಏಪ್ರಿಲ್.೫ ರಂದು ದೆಹಲಿಯಿಂದ ಪಾರಿವಾಳಗಳನ್ನ ಹಾರಿಬಿಡಲಾಗಿತ್ತು.

ಡೆಲ್ಲಿ ರೇಸ್‌ನಲ್ಲಿ ಭಾಗವಹಿಸಿದ್ದ ಮಂಡ್ಯದ ಕೊಕ್ಕರೆ ಬೆಳ್ಳೂರಿನ ಶ್ರೀಧರ್ ಎಂಬುವವರಿಗೆ ಸೇರಿದ ಒಂದು ವರ್ಷದ ಅಭಿಮನ್ಯು ಹೆಸರಿನ ಪಾರಿವಾಳ, ದೆಹಲಿಯಿಂದ ಮೇ.೨೮ಕ್ಕೆ ಮಂಡ್ಯಕ್ಕೆ ವಾಪಸ್ಸಾಗಿದೆ. ಆ ಮೂಲಕ ಬರೋಬ್ಬರಿ ೧೭೯೦ ಕಿ.ಮೀ. ದಾಟಿ ತನ್ನ ಮಾಲೀಕನನ್ನು ಹುಡುಕಿಕೊಂಡು ಬಂದಿದೆ.

೨೨ ಪಾರಿವಾಳಗಳ ಪೈಕಿ ೧೪ ಪಾರಿವಾಳಗಳು ತಮ್ಮ ನೆಲೆಗಳಿಗೆ ವಾಪಸ್ಸಾಗಿವೆ. ಅದರಲ್ಲಿ ಅತಿ ಚಿಕ್ಕ ವಯಸ್ಸಿನ ಪಾರಿವಾಳವಾಗಿರುವ ಮಂಡ್ಯದ ಅಭಿಮನ್ಯು, ತನ್ನ ಮಾಲೀಕನನ್ನ ಹುಡುಕಿಕೊಂಡು ಬರುವ ಮೂಲಕ ಹೊಸ ಸಾಧನೆ ಮಾಡಿದೆ. ಆ ಮೂಲಕ ಮೊದಲ ರೇಸ್‌ನಲ್ಲೇ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳವೆಂಬ ದಾಖಲೆ ಬರೆದಿದೆ.

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

5 hours ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

6 hours ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

7 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

8 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

8 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

8 hours ago