ಮಂಡ್ಯ : ಮೈಷುಗರ್ ಸಕ್ಕರೆ ಕಾರ್ಖಾನೆಯು ಯಶಸ್ವಿಯಾಗಿ ಕಬ್ಬು ನುರಿಸಲು ಮೂರನೇ ಬಾರಿಗೆ 10 ಕೋಟಿ ರೂ.ಗಳ ನೆರವನ್ನು ನೀಡಿ ಸಹಕರಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸತತವಾಗಿ ನೆರವು ನೀಡುತ್ತಿದ್ದು, ಕಳೆದ ಹಂಗಾಮಿನಲ್ಲಿ ಸರ್ಕಾರದ ಅನುದಾನ ಪಡೆಯದೇ ರೈತರಿಗೆ ಪೂರ್ಣ ಹಣವನ್ನು ಪಾವತಿ ಮಾಡಿ ಮೈಷುಗರ್ ಇತಿಹಾಸದಲ್ಲಿ ಮಾದರಿಯಾಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತತ್ಸಂಬಂಧ 2023ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಮೈಷುಗರ್‌ಗೆ 50 ಕೋಟಿ ಅನುದಾನ ನೀಡಿಲಾಗಿತ್ತು, ಇತ್ತೀಚೆಗೆ 53 ಕೋಟಿ ವಿದ್ಯುತ್ ಬಿಲ್ ಮನ್ನ ಮಾಡಿದ ಸರ್ಕಾರ ಇದೀಗ 10 ಕೋಟಿ ರೂ. ನೆರವನ್ನು ನೀಡಿದೆ. ಈ ಬಾರಿಯೂ ಕಬ್ಬು ನಾಟಿ ಮಾಡಿದ ಹಿರಿತನದ ಆಧಾರದಲ್ಲಿ ನೊಂದಣಿಯಾಗಿರುವ ಕಬ್ಬನ್ನು ಯಶಸ್ವಿಯಾಗಿ ನುರಿಯಲಿದ್ದೇವೆ ಎಂದು ಹೇಳಿದರು.
ಒಪ್ಪಿಗೆಯಾಗಿರುವ ಕಬ್ಬನ್ನು ಯಶಸ್ವಿ ಯಾಗಿ ಅರೆಯುವ ಮೂಲಕ ಈ ಬಾರಿ ಪಡೆಯುವ ನೆರವಿನಲ್ಲಿ ಕನಿಷ್ಠ 4 ಕೋಟಿ ರೂಗಳನ್ನು ಹಿಂದಿರುಗಿಸುವ ಮೂಲಕ ಇತಿಹಾಸ ಬರೆಯುವ ಯೋಜನೆ ರೂಪಿಸಿಕೊಂಡಿರುವುದಾಗಿ ಪ್ರಶ್ನೆಗೆ ಉತ್ತರ ನೀಡಿದ ಅವರು, ನಗರ ವ್ಯಾಪ್ತಿಯಲ್ಲಿ ಮೈಷುಗರ್ ಕಂಪನಿಗೆ ಸೇರಬೇಕಾದ ಆರೂವರೆಯಿಂದ ಏಳು ಎಕರೆ ಹಾಗೂ ಕಂದಾಯ ವ್ಯಾಪ್ತಿಯ 20ರಿಂದ 30 ಎಕರೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು. ವಾಣಿಜ್ಯವಾಗಿ ಇಂದಿನ ದರದಂತೆ ಬಾಡಿಗೆ ನೀಡುವುದಾದರೆ ಅವರಿಗೇ ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದರು.
ಜು.28ರಂದು ಮದ್ದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಉದ್ಘಾಟನೆಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಪುಟದ ಅನೇಕ ಸಚಿವರು ಆಗಮಿಸಲಿದ್ದು, ಸದರಿ ಕಾರ್ಯ ಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಟಿಯಲ್ಲಿ ಕೆ.ಸುರೇಶ್, ಶ್ರೀಧರ್, ವೀಣಾ ಶಂಕರ್, ಉದಯ್, ದೇವಯ್ಯ, ಸಿ.ಎಂ.ದ್ಯಾವಪ್ಪ, ನಾಗರಾಜು ಇದ್ದರು.
ಮೈಸೂರು : ನಗರದಲ್ಲಿ ಓವರ್ ಹೆಡ್ (ಮೇಲ್ಬಾಗದ) ವಿದ್ಯುತ್ ಮಾರ್ಗವನ್ನು ತೆರವು ಮಾಡಿ ವಿದೇಶಿ ಮಾದರಿಯಲ್ಲಿ ಭೂಗತಕೇಬಲ್‌ಗಳಾಗಿ ಪರಿವರ್ತಿಸುವ 408…
ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ 2023ರಿಂದ 2025 ರವರೆಗೆ ಒಟ್ಟು 1,674 ಅಪಘಾತಗಳು ನಡೆದಿದ್ದು, 215 ಮಂದಿ…
ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ವಾಹನಗಳ ಸಂಚಾರಕ್ಕೆ ಮುಕ್ತವಾದ ದಿನದಿಂದ ಈವರೆಗೆ 855.79 ಕೋಟಿ ರೂ. ಟೋಲ್ ಶುಲ್ಕ…
ಮಂಡ್ಯ : ಸಾಮಾಜಿಕ ಬಹಿಷ್ಕಾರ ನಿಷೇಧ ವಿಧೇಯಕದಡಿ ಶಿಕ್ಷೆ ಪ್ರಮಾಣ 7 ವರ್ಷಕ್ಕೆ ಹೆಚ್ಚಿಸಬೇಕು. ಎಸ್ಸಿ, ಎಸ್ಟಿ ಸಮುದಾಯ ಪ್ರತಿ…
ಮೈಸೂರು : ಪತ್ನಿಯ ವರ್ತನೆಯಿಂದ ಬೇಸತ್ತಿದ್ದ ಪತಿ ಆಕೆಯನ್ನು ಹತ್ಯೆ ಮಾಡಲು ಯುವಕರಿಬ್ಬರಿಗೆ ಸುಫಾರಿ ನೀಡಿರುವ ಅಘಾತಕಾರಿ ಘಟನೆ ಬೆಳಕಿಗೆ…
ಹುಣಸೂರು : ತಾಲ್ಲೂಕಿನ ಗುರುಪುರ ಹುಣಸೇಕಟ್ಟೆ ಬಳಿಯ ಟಿಬೆಟ್ ಕ್ಯಾಂಪ್‌ನ ಬಿ.ವಿಲೇಜ್‌ನ ಜಮೀನಿನಲ್ಲಿ ಹುಲಿಯೊಂದು ಹಸುವನ್ನು ಕೊಂದು ಹಾಕಿದೆ. ಟಿಬೆಟ್…