ಟೆಂಡರ್ ಕರೆದರೂ ಬಾರದ ಏಜೆನ್ಸಿಗಳು; ಕೈ ಚೆಲ್ಲಿ ಕುಳಿತ ಮೈಸೂರು ಮಹಾನಗರಪಾಲಿಕೆ
ಬಿ.ಎನ್.ಧನಂಜಯಗೌಡ
ಮೈಸೂರು: ಅಧಿಕ ನಿರ್ವಹಣಾ ವೆಚ್ಚ, ನಿರ್ವಹಣೆಗೆ ಮುಂದಾಗದ ಏಜೆನ್ಸಿಗಳು, ಇಪಿ-ಶೌಚಾಲಯಗಳಲ್ಲಿ ಆಗುತ್ತಿದ್ದ ಕಾಯಿನ್‌ಗಳ ಕಳ್ಳತನ ಇವೇ ಮುಂತಾದ ಕಾರಣ ಗಳಿಂದಾಗಿ ಈ-ಶೌಚಾಲಯಗಳ ವ್ಯವಸ್ಥೆ ವೈಫಲ್ಯ ಕಂಡಿದ್ದು, ನಗರದಲ್ಲಿನ ಇಪಿ-ಶೌಚಾಲಯಗಳನ್ನು ತೆಗೆದು ಹಾಕಲು ನಗರಪಾಲಿಕೆ ಮುಂದಾಗಿದೆ.
ಪರಿಸರದ ವಿಚಾರ ಬಂದಾಗ ಇಪಿ-ಶೌಚಾಲಯಗಳು ಸಾಮಾನ್ಯ ಶೌಚಾಲಯಕ್ಕಿಂತ ಉತ್ತಮ. ಹೀಗಾಗಿಯೇ, ನಗರದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ೨೩ ಕಡೆಗಳಲ್ಲಿ ಹಾಕಲಾಗಿದ್ದ ಈ ಶೌಚಾಲಯಗಳ ಸಂಖ್ಯೆ ಈಗ ೧೨ ಆಗಿದ್ದು, ಇವುಗಳೂ ರಿಪೇರಿಗೆ ಬಂದಿವೆ. ಆರಂಭದಲ್ಲಿ ಜನರಿಂದ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಂದು ವರ್ಷದ ನಂತರ ಈ ಶೌಚಾಲಯಗಳನ್ನು ರೂಪಿಸಿದ್ದ ಕಂಪೆನಿ ನಿರ್ವಹಣೆಯಿಂದ ಹಿಂದೆ ಸರಿಯಿತು. ನಂತರ, ನಿರ್ವಹಣೆ ಮಾಡುವ ಜವಾಬ್ದಾರಿ ಪಾಲಿಕೆಯದ್ದೇ ಆಗಿತ್ತು. ಆದರೆ, ಪಾಲಿಕೆ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಾಗದ ಕಾರಣ ಮತ್ತು ಅಧಿಕ ವೆಚ್ಚವಾಗುತ್ತಿರುವ ಕಾರಣ ಇಪಿ ಶೌಚಾಲಯಗಳನ್ನು ತೆರವುಗೊಳಿಸಲಾಗುತ್ತಿದೆ.
ಟೆಂಡರ್‌ಗೂ ಯಾರು ಬರುತ್ತಿಲ್ಲ: ಒಂದು ಇಪಿ ಶೌಚಾಲಯದ ನಿರ್ವಹಣೆಗೆ ೨ ಲಕ್ಷ ರೂ.ನಿಂದ ೩ ಲಕ್ಷ ರೂ. ವೆಚ್ಚವಾಗಲಿದೆ. ಇನ್ನು ಇವುಗಳ ನಿರ್ವಹಣೆಯನ್ನು ಯಾವುದಾದರೂ ಏಜೆನ್ಸಿಗೆ ನೀಡುವ ಉದ್ದೇಶದಿಂದ ೩ರಿಂದ ೪ ಬಾರಿ ಟೆಂಡರ್ ಕರೆದಾಗ್ಯೂ ಯಾರೂ ನಿರ್ವಹಣೆಯನ್ನು ವಹಿಸಿಕೊಳ್ಳಲು ಮುಂದೆ ಬಂದಿಲ್ಲ. ಇಷ್ಟು ವೆಚ್ಚ ತಗುಲಲಿದೆ ಎಂಬ ಕಾರಣಕ್ಕೆ ನಗರಪಾಲಿಕೆ ಇದನ್ನು ಕೈಬಿಡಲು ಮುಂದಾಗಿದೆ.
ಕಾಯಿನ್‌ಗಳ ಕಳವು: ಸ್ವಯಂ ಸ್ವಚ್ಛತೆಯ ಉದ್ದೇಶದೊಂದಿಗೆ ಮಾಡಲಾಗದ ಇಪಿ ಶೌಚಾಲಯದ ಕಾಯಿನ್ ಬೂತ್‌ಗಳನ್ನು ಒಡೆದು ಹಣ ಕಳವು ಮಾಡುವ ಕೆಲಸಗಳು ಆಗಿವೆ. ಇದನ್ನು ತಡೆಯಬೇಕು ಎಂದರೇ ಪ್ರತಿಯೊಂದು ಈ ಶೌಚಾಲಯಕ್ಕೂ ಸೆಕ್ಯೂರಿಟಿ ಅವರನ್ನು ನೇಮಕ ಮಾಡಬೇಕಾಗುತ್ತದೆ. ಅದಕ್ಕೂ ವೆಚ್ಚವಾಗಲಿದೆ. ಹೀಗೆ ಬಹುತೇಕ ಇಪಿ ಶೌಚಾಲಯಗಳು ರಿಪೇರಿಗೆ ಬಂದಿದ್ದು, ಇವುಗಳ ದುರಸ್ತಿಗೆ ೧೦ ಲಕ್ಷ ರೂ. ವೆಚ್ಚವಾಗಲಿದೆ ಎನ್ನುತ್ತಾರೆ ಒಳ ಚರಂಡಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಿಂಧು.
ಪರ್ಯಾಯವೇನು?: ಇವುಗಳನ್ನು ತೆಗೆದು ಶಾಶ್ವತ ಶೌಚಾಲಯಗಳನ್ನು ನಿರ್ಮಾಣ ಮಾಡುವುದು ಪರ್ಯಾಯ ಆಲೋಚನೆಯಾಗಿದೆ. ಸದ್ಯ ನಗರದಲ್ಲಿ ೩೧ ಶಾಶ್ವತ ಶೌಚಾಲಯ ಮತ್ತು ೨೦ ಸಮುದಾಯ ಶೌಚಾಲಯವಿದ್ದು, ಇವುಗಳ ನಿರ್ವಹಣೆಯನ್ನು ಟೆಂಡರ್ ಮೂಲಕ ಏಜೆನ್ಸಿಗಳಿಗೆ ನೀಡಲಾಗಿದೆ. ಇದರ ಜತೆಗೆ ೧೦ ಶಾಶ್ವತ ಶೌಚಾಲಯ ನಿರ್ಮಾಣ ಮಾಡಲು ಯೋಜನೆ ಹಾಕಲಾಗಿದೆ.
ಇಚ್ಛಾಶಕ್ತಿ ಕೊರತೆಯಿಂದ ಹಳ್ಳ ಹಿಡಿದ ಯೋಜನೆ
ಇಪಿ ಶೌಚಾಲಯಗಳು ಪರಿಸರ ಸ್ನೇಹಿಯಾಗಿವೆ. ಟೆಂಡರ್ ಕರೆದರೂ ಇವುಗಳ ನಿರ್ವಹಣೆಗೆ ಯಾರೂ ಮುಂದೆ ಬರಲಿಲ್ಲ ಎಂಬ ಮಾತನ್ನು ಹೇಳಿ ಅಧಿಕಾರಿಗಳು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ, ಯಾರೊಬ್ಬರಿಗೂ ಈ ವಲಯದಲ್ಲಿ ಸಕ್ರಿಯವಾಗಿರುವ ಕಂಪೆನಿಗಳ ಜತೆ ಮಾತುಕತೆ ನಡೆಸುವ, ಅವರನ್ನು ಮನವೊಲಿಸುವ ಕಾರ್ಯ ಮಾಡುವ ಇಚ್ಛಾಶಕ್ತಿ ಇಲ್ಲ. ಕನಿಷ್ಠ ಪಕ್ಷ ಪಾಲಿಕೆಯೇ ನಿರ್ವಹಣೆ ಮಾಡುವತ್ತ ಗಮನವನ್ನೂ ಹರಿಸುತ್ತಿಲ್ಲ. ಇದಕ್ಕೆ ಬೇಕಾದ ತಾಂತ್ರಿಕ ನೈಪುಣ್ಯತೆಯನ್ನು ಪಡೆದುಕೊಳ್ಳುವುದಕ್ಕೂ ಆಸಕ್ತಿ ವಹಿಸುತ್ತಿಲ್ಲ. ಹೀಗಾದರೆ ಹೇಗೆ?ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಒಂದು ಇಪಿ ಶೌಚಾಲಯದ ನಿರ್ವಹಣೆಗೆ ೨ರಿಂದ ೩ ಲಕ್ಷ ರೂ. ವೆಚ್ಚವಾಗಲಿದೆ. ಹಾಗಾಗಿ, ಅವುಗಳನ್ನು ತೆಗೆದು ಹಾಕಲಾಗುತ್ತಿದ್ದು, ಶಾಶ್ವತ ಶೌಚಾಲಯಗಳನ್ನು ನಿರ್ಮಾಣ ಮಾಡುವ ಯೋಜನೆ ಹಾಕಲಾಗಿದೆ.
–ಜಿ.ಲಕ್ಷ್ಮೀಕಾಂತ್ ರೆಡ್ಡಿ, ಆಯುಕ್ತರು, ಮೈಸೂರು ಮಹಾನಗರಪಾಲಿಕೆ.
ಮಂಡ್ಯ: ಪಾರ್ಸೆಲ್ ಕೊಡುವ ನೆಪದಲ್ಲಿ ಬಂದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮೇಶ್…
ಬೆಂಗಳೂರು: ನಿವೃತ್ತ ಸಾರಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಿದೆ. ಗ್ರಾಚ್ಯುಟಿ ಮತ್ತು ಗಳಿಕೆ…
ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯನ್ನು ಸಿಎಂ ಸಿದ್ದರಾಮಯ್ಯ ದುರುಪಯೋಗಪಡಿಸಿಕೊಂಡಿದ್ದಾರೆ…
ಹೈದರಾಬಾದ್: ಡಿಸೆಂಬರ್.4ರಂದು ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ದುರದೃಷ್ಟಕರ ಎಂದು ನಟ ಅಲ್ಲು ಅರ್ಜುನ್ ಬೇಸರ…
ಬೆಂಗಳೂರು: ಎರಡು ಕಾರು, ಎರಡು ಲಾರಿ ಹಾಗೂ ಶಾಲಾ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ…
ಬೆಂಗಳೂರು: ವಕ್ಫ್ ಮಂಡಳಿಯು ಹಿಂದೂ ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ…