ಜಿಲ್ಲೆಗಳು

ಪ್ರಯಾಣ ಆರಂಭಿಸಿದ ಮಹಾರಾಜ ಟ್ರೋಫಿ‘ ಟಿ-೨೦ ಕ್ರಿಕೆಟ್ ಟೂರ್ನಿಯ ಸ್ಪರ್ಧಿಗಳು

ಮೈಸೂರು : ಮೈಸೂರಿನ ಮಹಾರಾಜರು, ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯು ಆಯೋಜನೆ ಮಾಡಿರುವ ಮಹಾರಾಜ ಟ್ರೋಫಿ‘ ಟಿ-೨೦ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ಸ್ಪರ್ಧಿಗಳು ತಮ್ಮ ಪ್ರಯಾಣವನ್ನು ಆರಂಭಿಸಿದ್ದಾರೆ.

ಪ್ರಯಾಣ ಆರಂಭಿಸಿರುವ ಸ್ಪರ್ಧಿಗಳು

ನಗರದ ಹೆಸರಾಂತ ದೇವಸ್ಥಾನವಾದ ಚಾಮುಂಡೇಶ್ವರಿ ಬೆಟ್ಟದಿದಂ ತಮ್ಮ ಪ್ರಯಾಣವನ್ನು ಇಂದು ಆರಂಭಿಸಿದ್ದಾರೆ. ದೇವರ ಆಶೀರ್ವಾದದೊಂದಿಗೆ ನಮ್ಮ ಪ್ರಯಾಣವನ್ನು ಪ್ರಾರಂಭಿಸುವುದು ಯೋಧರ ಸಂಪ್ರದಾಯವಾಗಿದೆ. ಈ ವರ್ಷ ಮಹಾರಾಜ ಟ್ರೋಫಿಗೆ ಸ್ಪರ್ಧಿಸುವ ಎಲ್ಲಾ ಆಟಗಾರರ ಉತ್ತಮ ಆರೋಗ್ಯಕ್ಕಾಗಿ ಮತ್ತು ಉತ್ತಮ ಕ್ರಿಕೆಟ್‌ಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಅರುಣ್‌ ರಂಗ ಅವರು ತಿಳಿಸಿದರು.

ಪಂದ್ಯದ ಟ್ರೋಫಿ

ಮೈಸೂರು ವಲಯದಿಂದ ಆಯ್ಕೆಗೊಂಡಿರು ಸ್ಪರ್ಧಿಗಳು

ಜೆ ಸುಚಿತ್  – ಬೆಂಗಳೂರು

ಚೇತನ್ ಎಲ್ ಆರ್  – ಬೆಂಗಳೂರು

ಕುಮಾರ್ ಎಲ್ ಆರ್ – ಬೆಂಗಳೂರು

ಕೃತಿಕ್ ಕೃಷ್ಣ – ಗುಲ್ಬರ್ಗ

ನವೀನ್ ಎಂಜಿ – ಹುಬ್ಬಳ್ಳಿ

ಗೌತಮ್ ಸಾಗರ್ – ಹುಬ್ಬಳ್ಳಿ

ಎಂ ವೆಂಕಟೇಶ್ – ಮಂಗಳೂರು

ನಿಕಿನ್ ಜೋಶಿ – ಮಂಗಳೂರು

ದರ್ಶನ್ ಎಂ ಬಿ – ಶಿವಮೊಗ್ಗ

ಉತ್ತಮ್ ಅಯ್ಯಪ್ಪ – ಶಿವಮೊಗ್ಗ

ಇವರುಗಳು ಇಂದು ತಮ್ಮ ಪ್ರಯಾಣವನ್ನು ಆರಂಭಿಸಿದ್ದಾರೆ.

ಮಹಾರಾಜ ಟ್ರೋಫಿ‘ ಟಿ-೨೦ ಕ್ರಿಕೆಟ್ ಟೂರ್ನಿ ಟ್ರೋಪಿಯ ಅನಾವರಣ

ಮಹಾರಾಜ ಟಿ-೨೦ ಟ್ರೋಫಿಗಾಗಿ ನಡೆಯುವ ಪಂದ್ಯದ ವಿವರ

ಪ್ರತಿ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹಾಗೂ ಪ್ಯಾನ್ ಕೋಡ್ ಆಪ್ ನಲ್ಲಿ ಪ್ರಸಾರವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಹೊಸ ಲೀಗ್‌ 6 ತಂಡಗಳ ಟೂರ್ನಿಯಾಗಿದ್ದು, ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ರಾಯಚೂರು ಹಾಗೂ ಶಿವಮೊಗ್ಗ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಈ ತಂಡಗಳ ಪ್ರಾಯೋಜಕತ್ವವನ್ನು ವಿವಿಧ ಸಂಸ್ಥೆಗಳು ವಹಿಸಿಕೊಂಡಿವೆ. ಟೂರ್ನಿಯ ಪಂದ್ಯಗಳಿಗೆ ಮೈಸೂರು ಹಾಗೂ ಬೆಂಗಳೂರು ಆತಿಥ್ಯ ವಹಿಸಲಿವೆ. ಆರಂಭಿಕ 18 ಪಂದ್ಯಗಳು ಮೈಸೂರಿನಲ್ಲಿ ನಡೆಯಲಿದ್ದು, ಫೈನಲ್‌ ಸೇರಿದಂತೆ 16 ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಆಟಗಾರರನ್ನು ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ಗುಂಪುಗಳಾಗಿ ವಿಂಗಡಿಸಲಾಗಿದ್ದು, ‘ಎ’ ಗುಂಪಿನ ಆಟಗಾರರು ತಲಾ 5 ಲಕ್ಷ ರೂಪಾಯಿ ಪಡೆಯಲಿದ್ದಾರೆ. ‘ಬಿ’ ಗುಂಪಿಗೆ 2 ಲಕ್ಷ, ‘ಸಿ’ ಗುಂಪಿಗೆ 1 ಲಕ್ಷ ಹಾಗೂ ‘ಡಿ’ ಗುಂಪಿಗೆ 50,000 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

 

 

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

2 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

3 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

3 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

4 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

4 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

4 hours ago