ಜಿಲ್ಲೆಗಳು

ಮಹಾರಾಜ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವೆಬಿನಾರ್

ಮೈಸೂರು: ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯವಹಾರ ನಿರ್ವಹಣಾ ಶಾಸ್ತ್ರ ಹಾಗೂ ಐಕ್ಯೂಎಸಿ ವತಿಯಿಂದ ರಾಷ್ಟ್ರೀಯ ಮಟ್ಟದ ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬಹುದ್ದೂರ್ ಇನ್ಸ್ಟಿಟ್ಯೂಟ್ ಆಫ್ ವ್ಯಾನೇಜ್‌ಮೆಂಟ್ ಸೈನ್ಸ್ ಯೂನಿವರ್ಸಿಟಿ ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕರಾದ ಡಾ. ಆಯಿಷಾ ಎಂ. ಶರೀಫ್ ಮಾತನಾಡಿ, ಇಂದಿನ ಮತ್ತು ನಾಳಿನ ವ್ಯವಹಾರದಲ್ಲಿ ಜ್ಞಾನವು ಪ್ರಮುಖ ಪಾತ್ರವಹಿಸಲಿದೆ. ಸಂಸ್ಥೆಯನ್ನು ಪುನಾರಚಿಸುವ ಮತ್ತು ಮಾನವ ಸಂಪನ್ಮೂಲಗಳ ಪುನರ್ ನಿಯೋಜನೆ  ಜ್ಞಾನವು ಇತರೆ ಸಂಸ್ಥೆಗಳಿಗಿಂತ ಸ್ಪರ್ಧಾತ್ಮಕ ಅಂಚನ್ನು ಪಡೆಯಲು ಪ್ರಮುಖವಾಗಿದೆ ಎಂದು ಹೇಳಿದರು.
ಹೊಸ ಜನರ ಆರ್ಥಿಕತೆ, ಸಂಘಟನೆ ಮತ್ತು ನಿರ್ವಹಣೆುಂ ಕಲ್ಪನೆಯನ್ನು ವಿವರಿಸಿದ ಅವರು ಕಾರ್ಪೊರೇಟ್ ಜ್ಞಾನದ ಮಹತ್ವವನ್ನು ಅರಿತುಕೊಳ್ಳಲು ಪ್ರಾರಂಭಿಸಿದೆ. ಇಂದಿನ ವೃತ್ತಿಪರರು ಹೆಚ್ಚು ಬೇಡಿಕೆಯಲ್ಲಿದ್ದಾರೆ, ಜನರು ಸಂಸ್ಥೆಯ ಪ್ರಮುಖ ಸಾಧನವಾಗಿದ್ದಾರೆ ಮತ್ತು ಆದ್ದರಿಂದ ಗ್ರಾಹಕರ ಅಗತ್ಯತೆಗಳ ಜ್ಞಾನ, ಉತ್ಪಾದನೆ ಮತ್ತು ಜನರ ನಡುವಿನ ಸಂಬಂಧ, ವ್ಯವಹಾರ ಪ್ರಕ್ರಿಯೆ ಮರು-ಎಂಜಿನಿಯರಿಂಗ್ ಬಹಳ ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜುಂಕುಮಾರಿ, ವ್ಯವಹಾರ ನಿರ್ವಹಣಾ ಶಾಸ್ತ್ರದ ಮುಖ್ಯಸ್ಥರಾದ ಎಸ್.ಶೈಲಾ, ಸಂಯೋಜಕ ಎನ್.ಸುನಿಲ್ ಸ್ವಾಗತಿಸಿದರು. ವೆಬಿನಾರ್‌ನಲ್ಲಿ ಭಾರತದ್ಯಾಂತ ಸುಮಾರು ೩೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

andolanait

Recent Posts

ಓದುಗರ ಪತ್ರ: ಫ್ಲೆಕ್ಸ್ ಹಾವಳಿಗೆ ಕಡಿವಾಣ ಹಾಕಿ

ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿದ್ದು, ರಸ್ತೆ ಬದಿಯಲ್ಲಿ ಹಾಕಿರುವ ಬೃಹದಾಕಾರದ ಫ್ಲೆಕ್ಸ್‌ಗಳಿಂದಾಗಿ ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುವ…

1 hour ago

ಓದುಗರ ಪತ್ರ: ಪಾರದರ್ಶಕ ಆಡಳಿತಾತ್ಮಕ ವ್ಯವಸ್ಥೆ ಜಾರಿಯಾಗಲಿ

ಉತ್ತರ ಪ್ರದೇಶ ಸರ್ಕಾರವು ಆ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ‘ಮಾನವ ಸಂಪದ್ ಪೋರ್ಟಲ್’ ಎಂಬ ಅಧಿಕೃತ…

1 hour ago

ಓದುಗರ ಪತ್ರ: ಕಸ ತೆರವುಗೊಳಿಸಿ

ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಗ್ರಾಪಂನವರು ಸಕಾಲಕ್ಕೆ ಕಸ ವಿಲೇವಾರಿ ಮಾಡದೇ ಇರುವುದರಿಂದ ಕಸದ ರಾಶಿಯೇ ಬಿದ್ದಿದ್ದು, ಸೊಳ್ಳೆ, ನೊಣಗಳ…

1 hour ago

ಓದುಗರ ಪತ್ರ: ಆರ್‌ಸಿಬಿ ತಂಡದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಿ

ಐಪಿಎಲ್ ಆವೃತ್ತಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿದೆ, ಈ ಆವೃತ್ತಿಯಲ್ಲಿ ನಾನಾ ರಾಜ್ಯಗಳ ಹೆಸರಿನಲ್ಲಿ ಹಲವು ತಂಡಗಳು ಸೆಣಸಾಡಲಿವೆ. ನಮ್ಮ…

1 hour ago

ಓದುಗರ ಪತ್ರ: ಕೋರ್ಟ್ ತೀರ್ಪು ಎಚ್ಚರಿಕೆ ಘಂಟೆಯಾಗಲಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಂಪೆಯ ಸಾಣಾಪುರದ ಬಳಿ ೨೦೨೫ ಮಾರ್ಚಿನಲ್ಲಿ ಇಸ್ರೇಲ್ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ವಿದೇಶಿಗನ…

1 hour ago

ಓದುಗರ ಪತ್ರ: ಕುಡಿಯುವ ನೀರು ಸರಬರಾಜು ಮಾಡಿ

ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಧನಗಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಬಡಾವಣೆಗೆ ಕುಡಿಯುವ ನೀರು ಸರಬರಾಜು…

1 hour ago