ಪಂಪಿನ ಕೆರೆಯಿಂದ ಹೊರಡಲಿರುವ ೪ ಶಕ್ತಿ ದೇವತೆಗಳ ಕರಗಗಳು: ೯ ದಿನಗಳವರೆಗೆ ನಗರ ಪ್ರದಕ್ಷಿಣೆ
ನವೀನ್ ಡಿಸೋಜ
ಮಡಿಕೇರಿ: ಕೊಡಗಿನ ನಾಲ್ಕು ಶಕ್ತಿ ದೇವತೆಗಳ ಕರಗ ಹೊರಡುವುದರೊಂದಿಗೆ ಇಂದು ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ.
ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆಗಳು ನಡೆುುಂತ್ತಿದ್ದು, ಈಗಾಗಲೇ ದಶಮಂಟಪಗಳ ತಾಂರಿ ಕಾರ್ಯ ಆರಂಭಗೊಂಡಿದೆ. ಸೆ.೨೭ರಿಂದ ನಗರದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಆರಂಭವಾಗಲಿದೆ.
ಈ ಎಲ್ಲ ಕಾರ್ಯಕ್ರಮಕ್ಕೂ ಮುನ್ನ ಸಂಪ್ರದಾಯದಂತೆ ನಗರದ ನಾಲ್ಕು ಶಕ್ತಿದೇವತೆಗಳ ಕರಗ ಹೊರಡಿಸುವುದು ವಾಡಿಕೆ. ಅದರಂತೆ ಸೋಮವಾರ ಸಂಜೆ ಕರಗ ಹೊರಡುವುದರ ಮೂಲಕ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ನಗರದ ನಾಲ್ಕು ಮೂಲೆಗಳಲ್ಲಿ ನೆಲೆ ನಿಂತಿರುವ ಶಕ್ತಿ ದೇವತೆಗಳಾದ ನಗರವನ್ನು ಕಾುುಂವ ಕುಂದೂರುಮೊಟ್ಟೆ ಚೌಟಿ ವಾರಿಯಮ್ಮ, ಕೋಟೆಯನ್ನು ಕಾಯುವ ಕೋಟೆ ವಾರಿುಂಮ್ಮ, ಆರೋಗ್ಯ ಐಶ್ವರ್ಯವನ್ನು ಪಾಲಿಸುವ ಕಂಚಿ ಕಾವಾಕ್ಷಿ ಹಾಗೂ ಸೈನ್ಯವನ್ನು ಕಾಪಾಡುವ ದಂಡಿನ ವಾರಿಯಮ್ಮ ಸುವಾರು ೩೦೦ ವರ್ಷಗಳಿಂದ ನಗರದಲ್ಲಿ ನೆಲೆ ನಿಂತಿದೆ. ಈ ೪ ಕರಗಗಳು ಇಂದಿನಿಂದ ನಗರ ಸಂಚಾರ ಆರಂಭಿಸಲಿವೆ.
ನಾಲ್ಕೂ ಶಕ್ತಿ ದೇವತೆಗಳ ದೇವಾಲುಂಗಳ ಪ್ರಮುಖರು ಪಂಪಿನ ಕೆರೆಗೆ ತೆರಳಿ, ಸಂಪ್ರದಾುಂದಂತೆ ಕರಗ ಕಟ್ಟಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ನಗರ ಸಂಚಾರ ಆರಂಭಿಸಲಿವೆ. ಶ್ರೀ ಬಸವೇಶ್ವರ, ಶ್ರೀ ಚೌಡೇಶ್ವರಿ, ಶ್ರೀ ಕೋದಂಡರಾಮ ಹಾಗೂ ಶ್ರೀ ಕನ್ನಿಕಾ ದೇವಾಲಯಗಳ ಪರಮೇಶ್ವರಿ ದೇವಾಲಯಗಳಿಗೆ ತೆರಳಿ ಪೇಟೆ ಶ್ರೀ ರಾಮ ಮಂದಿರಕ್ಕೆ ಸೇರಲಿವೆ. ಅಲ್ಲಿಂದ ಕರಗಗಳು ತಮ್ಮ-ತಮ್ಮ ದೇವಾಲಯಗಳಿಗೆ ತೆರಳಲಿವೆ.
ಬಿಂದಿಗೆಗೆ ಬಿದಿರನ್ನು ಗೋಪುರವಾಗಿ ಕಟ್ಟಿ, ಹೂವಿನಿಂದ ಶೃಂಗರಿಸಿ, ಶಕ್ತಿ ದೇವತೆಯ ಬೆಳ್ಳಿಯ ಮುಖವಾಡವನ್ನು ಅಳವಡಿಸಿ ಕರಗ ವನ್ನು ಸಿದ್ಧಪಡಿಸಲಾಗುತ್ತದೆ. ಪ್ರತಿನಿತ್ಯ ಕರಗದ ಹೂವನ್ನು ಬದಲಾಯಿಸಿ ಶೃಂಗರಿಸಲಾಗುತ್ತದೆ.
ಬೆಳಿಗ್ಗೆ ಸಂಚಾರ ಹೂರಡುವ ಮುನ್ನ ನೈವೇದ್ಯ ಅರ್ಪಿಸಲಾಗುತ್ತದೆ. ನಾಲ್ಕು ಕರಗಗಳು ವಿಜಯ ದಶಮಿಯoದು ರಾತ್ರಿ ಮಡಿಕೇರಿ ರಾಜ ಬೀದಿಯಲ್ಲಿ ನಡೆಯುವ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಅ.೬ರಂದು ಬೆಳಗಿನ ಜಾವ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಕ್ತಾಯಗೊಳ್ಳಲಿದೆ.
ನಾಡಿನ ಸುಭಿಕ್ಷೆಗಾಗಿ ರಾಜರ ಕಾಲದಿಂದಲೇ ಕರಗ ಉತ್ಸವ ನಡೆದುಕೊಂಡು ಬಂದಿದೆ. ಅದೇ ರೀತಿ ಪ್ರಸಕ್ತ ಸಾಲಿನಲ್ಲಿ ಸೆ.೨೬ರಿಂದ ಆರಂಭಗೊಂಡು ವಿಜಯದಶಮಿಯವರೆಗೆ ಕರಗಗಳು ನಗರದ ಪ್ರದಕ್ಷಿಣೆ ವಾಡಲಿದೆ. ಆದರೆ, ನಗರದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆದಿಲ್ಲ. ಕರಗ ಹೊರುವವರು ಹಾಗೂ ಜತೆಗೆ ಸಾಗುವವರು ಪಾದರಕ್ಷೆ ಹಾಕದೆ ಬರಿಗಾಲಿನಲ್ಲಿ ಸಾಗಬೇಕಾಗಿದೆ. ನಗರಸಭೆ ಎಚ್ಚೆತ್ತುಕೊಂಡು ಶೀಘ್ರ ರಸ್ತೆ ದುರಸ್ತಿಗೆ ಮುಂದಾಗಬೇಕು.
–ಜಿ.ವಿ.ರವಿಕುವಾರ್, ಅಧ್ಯಕ್ಷೃರು, ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿ.
ಮಂಜಿನನಗರಿ ಮಡಿಕೇರಿಯ ಐತಿಹಾಸಿಕ ದಸರಾ ಉತ್ಸವ ಕರಗೋತ್ಸವದ ಮೂಲಕ ಆರಂಭಗೊಳ್ಳುತ್ತಿದೆ. ಐದು ದಿನಗಳು ವಾತ್ರ ಬಾಕಿ ಉಳಿದಿದ್ದು, ಹಬ್ಬದ ವಾತಾವರಣವನ್ನು ಸೃಷ್ಟಿಸಬೇಕಾದ ನಗರಸಭೆ ಯಾವುದೇ ಕಾರ್ಯಕ್ರಮಗಳನ್ನು ಕೈಗೊಂಡಿಲ್ಲ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಸೆ.೨೬ರಿಂದ ನಗರ ಸಂಚಾರ ಆರಂಭಿಸುತ್ತಿವೆ. ಆದರೆ, ರಸ್ತೆಗಳೆಲ್ಲವೂ ಹದಗೆಟ್ಟಿದ್ದು, ಹೊಂಡ, ಗುಂಡಿಗಳಾಗಿ ವೆ. ವಾಹನಗಳು ವಾತ್ರವಲ್ಲ ಪಾದಚಾರಿಗಳೂ ನಡೆದಾಡಲು ಸಾಧ್ಯವಾಗದ ಸ್ಥಿತಿ ಇದೆ.
–ಚೊಟ್ಟೆಯoಡ ಶರತ್, ಮಡಿಕೇರಿ ನಗರಾಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ.
ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರತಿನಿತ್ಯ ೬ ರೈಲುಗಳು ಸಂಚರಿಸುತ್ತಿವೆ. ಈಗ ಸಂಚರಿಸುವ ರೈಲುಗಳ ಜೊತೆ ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ ೪.೪೦ಕ್ಕೆ ,…
ವಸಂತಕುಮಾರ ಮೈಸೂರಮಠ, ಸಾಮಾಜಿಕ ಕಾರ್ಯಕರ್ತರು ಶ್ವಾನ ಮನುಷ್ಯನ ಅತ್ಯತ್ತಮ ಸ್ನೇಹಿತ ಎಂಬುದರಲ್ಲಿ ಸಂದೇಹವಿಲ್ಲ! ಆದರೆ ಅವು ಉಪದ್ರವಕಾರಿ ಯಾದಾಗ ಏನಾದರೂ…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಕಾಲದಲ್ಲಿ ಹೆಸರಿಸಲಾಗಿದ್ದ ಸರ್ಕಾರಿ ಕಾರ್ಯಾಲಯಗಳು ಮತ್ತು ರಸ್ತೆಗಳ ಹೆಸರುಗಳನ್ನು ಕೇಂದ್ರದಲ್ಲಿ…
ಕೆ.ಬಿ.ರಮೇಶನಾಯಕ ಮೈಸೂರು: ದೇಶದಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ವಿಮಾನಗಳ ಸೇವೆ ವ್ಯತ್ಯಯಗೊಂಡಿದ್ದು, ಮೈಸೂರು ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೆ…
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…