೫ ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡುವ ಸಾಧ್ಯತೆ; ಜಯವಿಭವ ಸ್ವಾಮಿ ಮಾಹಿತಿ
ಮೈಸೂರು: ದೀಪಾಲಂಕಾರಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಇನ್ನೂ ೫ ದಿನಗಳ ಕಾಲ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾಲಂಕಾರಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ದೊರಕುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಪ್ರವಾಸಿಗರಿಗೆ ದೀಪಾಲಂಕಾರವನ್ನು ವೀಕ್ಷಣೆ ಮಾಡಲು ಸಂಜೆ ೬.೩೦ ರಿಂದ ರಾತ್ರಿ ೧೦.೩೦ ವರೆಗೆ ಸಮಯವನ್ನು ವಿಸ್ತರಿಸಲಾಗಿದೆ. ಪ್ರವಾಸಿಗರು ದೀಪಾಲಂಕಾರದ ಮೆರುಗನ್ನು ಸವಿಯಲು ಅನುವು ಮಾಡಿಕೊಡಲಾಗಿದೆ ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ದಸರಾ ಉತ್ಸವ ಉಪ ಸಮಿತಿಯು ಈಗಾಗಲೇ ೫.೨ ಕೋಟಿ ರೂ. ವೆಚ್ಚದಲ್ಲಿ ನಗರಡೆಲ್ಲೆಡೆ ದೀಪಾಲಂಕಾರ ಮಾಡಿದ್ದು, ಈಗ ಮತ್ತೆ ೪೦ ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿಯಾಗಿ ೪ ಕಿ.ಮೀ ರಸ್ತೆ, ೭ ಪ್ರತಿಕೃತಿಗಳು, ಹಾಗೂ ೧೩ ವೃತ್ತಗಳನ್ನು ದೀಪಾಲಂಕಾರ ಮಾಡಲು ಇಲಾಖೆಯು ಮುಂದಾಗಿದೆ. ಈ ಬಾರಿ ದೀಪಾಲಂಕಾರವು ವಿಶೇಷವಾಗಿದ್ದು, ಅಧಿಕಾರಿಗಳು, ಸ್ಥಳೀಯ ಗುತ್ತಿಗೆದಾರರೂ ಸೇರಿದಂತೆ ಸುಮಾರು ೩೦೦ಕ್ಕೂ ಹೆಚ್ಚು ಜನರು ಹಗಲಿರುಳು ಶ್ರಮಿಸಿದ್ದಾರೆ. ವ್ಯವಸ್ಥಿತವಾಗಿ ಚಾಮರಾಜ ಒಡೆಯರ್ ಹಾಗೂ ಏಕಲವ್ಯ ವೃತ್ತದಲ್ಲಿ ಪುನೀತ್ ರಾಜ್‌ಕುಮಾರ್ ಅವರ ೩ಡಿ ದೀಪಾಲಂಕಾರವನ್ನು ಸಿದ್ಧಪಡಿಸಲಾಗಿದೆ. ಇಷ್ಟೇ ಅಲ್ಲದೆ ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿರುವ ೧೬೦ ಬೀದಿ ದೀಪದ ಕಂಬಗಳಿಗೆ ಹಾಗೂ ವೀವ್ ಪಾಯಿಂಟ್‌ಗೆ ದೀಪಾಲಂಕಾರ ಮಾಡಲಾಗಿದೆ ಎಂದರು.
ನಗರದಲ್ಲಿ ಕೆಲವೂ ಕಡೆ ಶಿಫ್ಟ್ ಹೊಲ್ಡಿಂಗ್‌ನಿಂದಾಗಿ ಪೂರ್ಣ ಪ್ರಮಾಣದ ದೀಪಾಲಂಕಾರ ಸರಿಯಾದ ಸಮಯದಲ್ಲಿ ಆಗಿಲ್ಲ. ಅದಲ್ಲದೇ ಮಹಾರಾಜ ಪ್ರತಿಮೆಯ ಪೋಷಾಕುಗಳು ಪ್ರವಾಸಿಗರಿಗೆ ಕಾಣಲೆಂದು ೩ಡಿ ದೀಪಾಲಂಕಾರವನ್ನು ಸಿದ್ಧಪಡಿಸಿದ್ದೇವೆ. ಇದರಿಂದ ನಗರದಲ್ಲಿ ಕೆಲಹೊತ್ತು ದೀಪಾಲಂಕಾರದಲ್ಲಿ ವ್ಯತ್ಯವಾಗುತ್ತಿದೆ ಎಂದು ತಿಳಿಸಿದರು.
ದೀಪಾಲಂಕಾರ ಉಪ ಸಮಿತಿಯ ಅಧ್ಯಕ್ಷ ಟಿ.ರಮೇಶ್ ಮಾತನಾಡಿ, ದೀಪಾಲಂಕಾರವನ್ನು ಇನ್ನೂ ೫ ದಿನಗಳ ಕಾಲ ವಿಸ್ತರಣೆ ಮಾಡಲು ಸಮಿತಿಯೊಂದಿಗೆ ಚರ್ಚಿಸಲಾಗಿದ್ದು, ಆದಷ್ಟು ಬೇಗ ಜಿಲ್ಲೆಯ ಪತ್ರಕರ್ತರಿಗೆ ದೀಪಾಲಂಕಾರವನ್ನೂ ವೀಕ್ಷಿಸಿಲು ಸೆಸ್ಕ್ ನಿಂದ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸೆಸ್ಕ್‌ನ ಡಿಟಿ ಮಂಜಪ್ಪ, ದೀಪಾಲಂಕಾರ ಉಪ ಸಮಿತಿ ಉಪಾಧ್ಯಕ್ಷರಾದ ಪುನೀತ್, ಮೇಣು, ಮಾರ್ಗದರ್ಶಕರಾದ ವಿಕ್ರಾಂತ್ ದೇವೇಗೌಡ, ಸೆಸ್ಕ್ ಇಂಜಿನಿಯರ್‌ಹಾಜರಿದ್ದರು.
ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…
ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…
ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…
ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…
ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್ ಸುಬ್ಬರಾವ್ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…
ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…