ಪಿರಿಯಾಪಟ್ಟಣ: ತಾಲೂಕಿನ ರಾಮನಾತುಂಗ ವ್ಯಾಪ್ತಿಯ ಖಾಸಗಿ ಜಮೀನನ್ನು ಒಂದರಲ್ಲಿ ಕಳೆದ 15 ದಿನಗಳಿಂದ ಆಗಾಗ ಕಾಣಿಸಿಕೊಂಡು ಅನೇಕ ಕುರಿ ಮತ್ತು ಕೋಳಿಗಳನ್ನು ತಿಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರ ಮಧ್ಯರಾತ್ರಿ ಸುಮಾರು 12:30 ಸಮಯದಲ್ಲಿ ಬೋನಿಗೆ ಬಿದ್ದಿದೆ.
ತಾಲೂಕಿನ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಅನೇಕ ಗ್ರಾಮಗಳಲ್ಲಿ ಪದೇಪದೇ ಚಿರತೆಗಳು ಕಾಣಿಸಿಕೊಂಡು ಅನೇಕ ಸಾಕು ಪ್ರಾಣಿಗಳನ್ನು ತಿಂದು ಜನರಿಗೆ ಉಪಟಳ ನೀಡುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದ್ದು ಅದೇ ರೀತಿ ರಾಮನ ತುಂಗಾ ಗ್ರಾಮದ ವ್ಯಾಪ್ತಿಯ ಹಳ್ಳಿಗಳಲ್ಲಿ ಮೂರು ಚಿರತೆ ಮರಿಗಳು ಆ ಭಾಗದಲ್ಲಿನ ಮನೆಗಳ ಮೇಲೆ ದಾಳಿ ಮಾಡಿ ಕೋಳಿ ಕುರಿಗಳನ್ನು ತಿನ್ನುತ್ತಿದ್ದು ಅದೇ ರೀತಿ ಒಂದು ವಾರದ ಹಿಂದೆ ಗ್ರಾಮದಿಂದ ಹೆಂಗಸು ತನ್ನ ಜಮೀನಿಗೆ ತನ್ನ ಕುರಿಮರಿಯನ್ನು ಹಿಡಿದು ಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ ಮಾಡಿದ್ದು ಆ ಸಂದರ್ಭದಲ್ಲಿ ಹೆಂಗಸು ಕೂಗಾಡಿ ಕಿರುಚಾಡಿ ಕುರಿಮರಿಯ ಹಗ್ಗವನ್ನು ಬಿಡದೆ ಅದನ್ನ ರಕ್ಷಣೆ ಮಾಡಿದ್ದು ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ನೇತೃತ್ವದ ಸಿಬ್ಬಂದಿಗಳು ಆ ಪ್ರದೇಶದಲ್ಲಿ ಬೋನ್ ಇಟ್ಟಿದ್ದು ಆ ಸಂದರ್ಭದಲ್ಲಿ ಪ್ರದೇಶದ ಭಾಗದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಎರಡು ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ. ಕೂಡಲೇ ಇದನ್ನು ಗಮನಿಸಿಕೊಂಡ ನೆರೆ ಹೊರೆಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಮುಂಜಾನೆ ಒಂದು ಗಂಟೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸಮೇತ ಬೋನನ್ನು ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ದರು. ಸಾರ್ವಜನಿಕರ ಆತಂಕ ದೂರ ಮಾಡಿದರು ಜನರು ಆತಂಕದಲ್ಲಿದ್ದಾರೆ ಈ ಸಂದರ್ಭದಲ್ಲಿ ಡಿ ಆರ್ ಎಫ್ ಓಗಳಾದ ಪಾರ್ವತಿ ,ಸಿಬ್ಬಂದಿಗಳಾದ ಹರೀಶ್ ,ಸತೀಶ್ ,ಗಾಂಚಾಯಲ್, ಹರೀಶ್, ರವಿ ,ಇರ್ಫಾನ್, ಹರೀಶ್, ರಾಜಯ್ಯ, ಪುನೀತ್, ಮತ್ತಿತರರು ಹಾಜರಿದ್ದರು,
ಹೇಳಿಕೆ: ಕಿರಣ್ ಕುಮಾರ್, ವಲಯ ಅರಣ್ಯ ಅಧಿಕಾರಿ ಪಿರಿಯಾಪಟ್ಟಣ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪದೇಪದೇ ಚಿರತೆಗಳು ಮತ್ತು ಚಿರತೆ ಮರಿಗಳು ಕಾಣಿಸಿಕೊಂಡು ಅನೇಕ ಗ್ರಾಮಗಳಲ್ಲಿ ಈಗಾಗಲೇ ಕುರಿ ಮತ್ತು ಕೋಳಿಯನ್ನು ಹಿಡಿದು ತೊಂದರೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಉಪಟಳ ನೀಡುತ್ತಿರುವಂತಹ ಚಿರತೆಗಳ ಸೆರೆಹಿಡಿಯಲು ಈಗಾಗಲೇ ಕ್ರಮ ಕೈಗೊಂಡು ಬೋನ್ ಇಡುತ್ತಿದ್ದು ಆದರೂ ಚಿರತೆಗಳು ಬೋನಿಗೆ ಬೀಳುತ್ತಿಲ್ಲ ಆದಕಾರಣ ರಾಮನತುಂಗ ವ್ಯಾಪ್ತಿಯ ಗ್ರಾಮಗಳಲ್ಲಿ ಇನ್ನೂ ಎರಡು ಚಿರತೆ ಮರಿಗಳು ಇದ್ದು ಅವುಗಳು ಬೆಳಗಿನ ಮತ್ತು ಮುಸ್ಸಂಜೆ ಸಮಯದಲ್ಲಿ ಹೊರ ಬರುತ್ತಿದ್ದು ಆ ಭಾಗದಲ್ಲಿ ಓಡಾಡುವಂತಹ ಜನರು ಎಚ್ಚರದಿಂದ ಇರಬೇಕು ಹಾಗೂ ಸಂಜೆ ಸಮಯದಲ್ಲಿ ಯಾವುದೇ ಮಕ್ಕಳನ್ನು ಹೊರಗೆ ಕಳಿಸಿದಂತೆ ಎಚ್ಚರ ವಹಿಸಬೇಕು ಮತ್ತು ಆ ಭಾಗಗಳಲ್ಲಿ ರೈತರು ತಮ್ಮ ಕೊಟ್ಟಿಗೆಗಳನ್ನು ಸುರಕ್ಷಿತವಾಗಿ ನಿರ್ಮಾಣ ಮಾಡಿ ಕೊಂಡಿಲ್ಲ ಹಾಗೂ ಕೊಟ್ಟಿಗೆಗಳನ್ನು ಸುರಕ್ಷಿತವಾಗಿ ನಿರ್ಮಾಣ ಮಾಡಿಕೊಂಡು ತಮ್ಮ ಸಾಕು ಪ್ರಾಣಿಗಳನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾಗಲು ಎಚ್ಚರ ವಹಿಸಬೇಕು ಆಗೇನಾದರೂ ಚಿರತೆಗಳ ಚಲನವಲನ ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ತಿಳಿಸುವಂತೆ ಪತ್ರಿಕೆಗೆ ತಿಳಿಸಿದ್ದಾರೆ
ತಿರುವನಂತಪುರಂ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಆರೋಪಿಗಳ ಜೊತೆಗೆ ಸೋನಿಯಾ ಗಾಂಧಿ ನಂಟಿದೆ ಎಂದು ಸಿಎಂ ಪಿಣರಾಯಿ ವಿಜಯನ್…
ಸ್ಯಾಂಡಲ್‌ವುಡ್‌ನಲ್ಲಿ ಇಂದು ಕ್ರಿಸ್‌ಮಸ್ ಹಬ್ಬದ ಸಡಗರದ ನಡುವೆ ಎರಡು ಬಹುನಿರೀಕ್ಷಿತ ಸಿನಿಮಾಗಳು ಅಬ್ಬರದಿಂದ ತೆರೆಗೆ ಬಂದಿವೆ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್,…
ಮೈಸೂರು: ಕಾಡಾನೆಗಳು ಊರಿಗೆ ಬರದಂತೆ ಅರಣ್ಯ ಇಲಾಖೆಯು ಎಐ ಆಧಾರಿರ ಕೂಗು ಕ್ಯಾಮರಾವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅಳವಡಿಸಿದೆ.…
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ…
ಹಾಸನ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ.…
ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಕಂಟೇನರ್ ಹಾಗೂ ಖಾಸಗಿ ಬಸ್ ಭೀಕರ ಅಪಘಾತದಲ್ಲಿ ಮೃತಪಟ್ಟವರಿಗೆ…