ಮೈಸೂರಿನ ಕರಾಮುವಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಚಾಲನೆ ನೀಡಿದರು.
ಕರಾಮುವಿಯಿಂದ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಚಾಲನೆ ನೀಡಿ ಎಸ್‌ಪಿ ಚೇತನ್ ಅಭಿಮತ
ಮೈಸೂರು: ಕೀಳರಿಮೆ ಬಿಟ್ಟು ನಿರಂತರವಾಗಿ ಅಭ್ಯಾಸ ಮಾಡಿದಾಗ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಹೇಳಿದರು.
ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಿಂದ ಬರುವ ಅನೇಕ ವಿದ್ಯಾರ್ಥಿಗಳಿಗೆ ‘ನಾನು ಹಳ್ಳಿಯವನು, ಇಂಗ್ಲಿಷ್ ಬರುವುದಿಲ್ಲ, ನಮ್ಮಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವೆ’ ಎಂಬ ಕೀಳರಿಮೆ ಇರುತ್ತದೆ. ಇಂತಹ ಭಾವನೆಗಳನ್ನು ತೆಗೆದು ಹಾಕಿ ನಿರಂತರವಾಗಿ, ಕ್ರಮಬದ್ಧವಾಗಿ ಅಭ್ಯಾಸದಲ್ಲಿ ತೊಡಗಿಕೊಂಡಾಗ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.
ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಯಾವುದೋ ಒಂದು ಅಥವಾ ಕೆಲವು ವಿಷಯಗಳನ್ನು ಮಾತ್ರ ಓದಿರುತ್ತೀರಾ? ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕೆಂದರೆ ಎಲ್ಲ ವಿಷಯಗಳ ಜ್ಞಾನವೂ ಇರಬೇಕು ಮತ್ತು ಓದಬೇಕು. ಹಾಗಾಗಿ, ಆರಂಭಿಕವಾಗಿ ೫ನೇ ತರಗತಿಯಿಂದ ೧೦ ತರಗತಿಯ ಎಲ್ಲ ಪುಸ್ತಕಗಳನ್ನು ಒಂದೆರಡು ಬಾರಿ ಓದುವುದು ಒಳ್ಳೆಯದು. ಆನಂತರ ನಿಮ್ಮ ಪರೀಕ್ಷೆಯ ಸಿಲಬಸ್‌ಗಳನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ೭ರಿಂದ ೫ ವರ್ಷಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಯನ್ನು ಇಟ್ಟುಕೊಂಡು ಅಭ್ಯಾಸ ಮಾಡಿ ಎಂದು ತಿಳಿಸಿದರು.
ಕರಾಮುವಿ ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರನ್ನು ಸನ್ಮಾನಿಸಲಾಯಿತು. ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಪರೀಕ್ಷಾಂಗ ಕುಲಸಚಿವ ಪ್ರವೀಣ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಹಾಜರಿದ್ದರು. ಸುಮಾರು ೧೦೦ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ ೧೮ರ ಬುಧವಾರ ಆರಂಭವಾಗಿದೆ. ಅಂದು ಬಹುತೇಕ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಮವಸ್ತ್ರ…
ಭೇರ್ಯ ಮಹೇಶ್ ಕೆ.ಆರ್.ನಗರ: ಯುಗಾದಿ ಹಬ್ಬದ ಅಂಗವಾಗಿ ಕೆ.ಆರ್.ನಗರ ಮತ್ತು ಸಾಲಿ ಗ್ರಾಮ ಅವಳಿ ತಾಲ್ಲೂಕುಗಳ ಹಲವೆಡೆ ರೈತರು ಸಂಭ್ರಮದಿಂದ…
ಮಹೇಂದ್ರ ಹಸಗೂಲಿ ಕಡಿವಾಣ ಹಾಕದಿದ್ದರೆ ರೈತಸಂಘ, ಕನ್ನಡಪರ ಸಂಘಟನೆಗಳು, ಜನಸಾಮಾನ್ಯರಿಂದ ಉಗ್ರ ಹೋರಾಟದ ಎಚ್ಚರಿಕೆ ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಕೇರಳ ನೋಂದಣಿಯ…
ಎಂ.ನಾರಾಯಣ ತಿ.ನರಸೀಪುರ: ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಳಚರಂಡಿಯ ನೀರು ರಸ್ತೆಯ ಮೇಲೆ ಹರಿದು ಮನೆ ಮುಂಭಾಗ ದುರ್ನಾತ ಬೀರುತ್ತಾ ಅನೈರ್ಮಲ್ಯ…
ದಿನೇಶ್‌ಕುಮಾರ್ ಹೆಚ್.ಎಸ್ ಮೈಸೂರು: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಬರುತ್ತಿರುವ ಹಿನ್ನೆಲೆಯಲ್ಲಿ ಏ.೧೦ ರಿಂದ ಮೇ ೩೦ರವರೆಗೆ ೫೦ ದಿನಗಳ ಕಾಲ…
ಕಸ, ಕೊಳಚೆ ಮತ್ತು ಕಟ್ಟಡ ತ್ಯಾಜ್ಯದಿಂದ ವಾಯುವಿಹಾರಿಗಳಿಗೆ ತೊಂದರೆ ಮೈಸೂರು: ನಗರದ ಸರಸ್ವತಿಪುರಂನ ವಾರ್ಡ್ ಸಂಖ್ಯೆ ೨೧ರಲ್ಲಿ ಇರುವ ಪಾರ್ಕ್…