ಮೈಸೂರು: ಇತ್ತೀಚಿಗೆ ಸಂಸತ್ತಿನಲ್ಲಿ ಕುಲಂಕುಶವಾಗಿ ಚರ್ಚೆ ನಡೆಸದೆ ತೆಗೆದುಕೊಳ್ಳುತ್ತಿರುವ ಆತುರದ ನಿರ್ಧಾರಗಳಿಂದ ದೇಶದ ಕಾನೂನುಗಳು ದುರ್ಬಲಗೊಳ್ಳುತ್ತಿವೆ ಎಂದು ಪ್ರೊ.ಬಾಬು ಮ್ಯಾಥ್ಯು ಆತಂಕ ವ್ಯಕ್ತಪಡಿಸಿದರು.
ನಗರದ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ೭೩ನೇ ವರ್ಷದ ಸಂವಿಧಾನ ದಿನಾಚರಣೆ ಅಂಗವಾಗಿ ಆಂಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಟಾಚಾರಕ್ಕೆ ಸಂವಿಧಾನದ ಬಗ್ಗೆ ಯಾರೂ ತಿಳಿದುಕೊಳ್ಳಬಾರದು. ಸಂವಿಧಾನ ಅರ್ಥಗರ್ಭಿತವಾಗಿದೆ. ಎಲ್ಲರೂ ಸಂವಿಧಾನದ ಆಶಂವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಸ್ವತಂತ್ರ್ಯ ಪೂರ್ವ ಭಾರದಲ್ಲಿ ಸುಮಾರು ೬೦೦ಕ್ಕೂ ಅಧಿಕ ರಾಜರು ಮತ್ತು ಜಮೀನ್ದಾರರ ಸಂಸ್ಥಾನಗಳಿದ್ದವು. ಪ್ರಜಾಪತ್ರಭುತ್ವದ ನಿಯಮಾನುಸಾರವಾಗಿ ಇವರಿಂದ ಅಧಿಕಾರವನ್ನು ಪಡೆದುಕೊಂಡು ಭಾರತವನ್ನು ಗಣರಾಜ್ಯವನ್ನಾಗಿ ಮಾಡಲಾಯಿತು. ನಂತರ ಅಂಬೇಡ್ಕರ್ ಅವರು ನೀಡಿದ ಸಲಹೆಯಂತೆ ಮಾಜಿ ಪ್ರಧಾನಿ ನೆಹರು ಜಮೀನ್ದಾರರ ವಶದಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು ಭೂ ಸುಧಾರಣೆ ಕಾಯ್ದೆ ಮೂಲಕ ಕೋಟ್ಯಾಂತರ ಭೂ ರಹಿತ ಕಾರ್ಮಿಕರಿಗೆ ಹಂಚಿದರ ಪರಿಣಾಮ ಕೋಟ್ಯಾಂತರ ಬಡವರಿಗೆ ಸ್ವಂತ ಭೂಮಿ ದೊರೆಯುವಂತಾಯಿತು ಎಂದು ಹೇಳಿದರು.
ಕೆಲವರು ಮೀಸಲಾತಿಯ ವಿಷಯವನ್ನು ಮುಂದಿಟ್ಟುಕೊಂಡು ಅಂಬೇಡ್ಕರ್ ಅವರ ಬಗ್ಗೆ ಸುಳ್ಳು ಆರೋಪ ಮಾಡುತ್ತಾರೆ. ಮೀಸಲಾತಿಯ ಅನಿವಾರ್ಯ ಏಕೆ ಎಂಬುದರ ಬಗ್ಗೆ ಅಂಬೇಡ್ಕರ್ ತಮ್ಮ ಸಂವಿಧಾನ ಸಭೆಯ ಭಾಷಣಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಭಾರತ ಸಂವಿಧಾನದ ಪ್ರತಿಯೊಂದು ವಿಧಿಯನ್ನು ಅಳವಡಿಕೆ ಮಾಡುವಾಗ ಆ ವಿಷಗಳ ಕುರಿತು ಸಾವಿರಾರು ಪುಟಗಳ ಪರ ವಿರೋಧ ಚರ್ಚೆಗಳು ನಡೆದಿವೆ. ಆದರೆ, ಇಂದಿನ ಸಂವಿಧಾನದ ತಿದ್ದುಪಡಿಗಳ ಬಗ್ಗೆ ಚರ್ಚೆ ಇರಲಿ, ಅನೇಕ ಸಂಸದರಿಗೆ ತಿದ್ದುಪಡಿ ಕಾಯ್ದೆ ವಿಷಯವೇ ತಿಳಿದಿರುವುದುದಿಲ್ಲ. ಇದು ನಿಜಕ್ಕೂ ಅಪಾಯಕಾರಿ ವಿಷಯ ಎಂದು ಹೇಳಿದರು.
ಭಾರತದ ಸಂವಿಧಾನಕ್ಕೆ ಜಗತ್ತಿನಲ್ಲಿ ಶ್ರೇಷ್ಠ ಸ್ಥಾನವಿದೆ. ದಕ್ಷಿಣ ಆಫ್ರಿಕಾದ ಸಂವಿಧಾನದಲ್ಲಿ ಹಲವು ಅಂಶಗಳನ್ನು ಭಾರತದ ಸಂವಿಧಾನದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ, ಇಂದು ದಕ್ಷಿಣ ಆಫ್ರಿಕಾದ ಸಂವಿಧಾನ ಅಪಾಯಕ್ಕೆ ಸಿಲುಕಿದೆ. ಕಪ್ತ್ಯ್ಪು ವರ್ಣಿಯರ ಮೇಲೆ ಮತ್ತೆ ದೌರ್ಜನ್ಯ ನಡೆಸಲಾಗುತ್ತಿದೆ. ಭಾರತದ ಸಂವಿಧಾನಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.
ಖಾಸಗಿ ಪದ್ದತಿ ಕಿತ್ತು ಹಾಕಿದರೆ ಮಾತ್ರ ಸಮಾಜವಾದಕ್ಕೆ ಅರ್ಥ ಸಿಗುತ್ತದೆ. ನೆಹರು ಪಂಚವಾರ್ಷಿಕ ಯೋಜನೆಯನ್ನು ಸೋವಿಯತ್ ಯೂನಿಯನ್ ನಿಂದ ತೆಗೆದುಕೊಂಡರು. ರಾಷ್ಟ್ರೀಯ ಬಂಡವಾಳದ ನಾಯಕರಾಗಿ ನೆಹರು ಕೆಲಸ ಮಾಡಿದರು. ನಮ್ಮ ಸಂವಿಧಾನ ಬಹಳ ವಿಶೇಷವಾಗಿ ರಚನೆಯಾಗಿದೆ. ಅಂಬೇಡ್ಕರ್ ಚಿಂತನೆಯ ಅದ್ಭುತ. ಅದರ ಫಲವಾಗಿ ನಾವಿಂದು ಸಂವಿಧಾನವನ್ನು ಕೊಡುಗೆಯಾಗಿ ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ವರ್ಲ್ಡ್ ಬ್ಯಾಂಕ್ ಹಾಗೂ ವರ್ಲ್ಡ್ ಟ್ರೇಡ್ ನವರು ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿದೆ. ವಿದೇಶಿ ಬಂಡವಾಳ ಕೂಡ ಮುನ್ನಲೆಗೆ ಬಂದಿದೆ. ಈ ಎಲ್ಲದರ ಒಟ್ಟು ಅಂಶವೇ ಹೊಸ ಸಂವಿಧಾನ ಸೃಷ್ಟಿ ಮಾಡುವುದೆ ಆಗಿದೆ. ಖಾಸಗಿ ಮಾಲೀಕರ ಕೈಯಲ್ಲಿ ಇರುವ ಯುನಿವರ್ಸಲ್ ಸಾಮಾಜಿಕ ನ್ಯಾಯ ಒದಗಿಸಬೇಕು. ಪ್ರಭುತ್ವ ಒಂದು ವರ್ಗದಿಂದ ಮತ್ತೊಂದು ಬಂಡವಾಳಶಾಹಿಗಳ ಕೈಗೆ ಪ್ರಭುತ್ವ ಹೋಗುತ್ತಿದೆ. ಸಂವಿಧಾನವನ್ನು ಕೊಲ್ಲಲಾಗುತ್ತಿದೆ. ತಿದ್ದುಪಡಿ ಹೆಸರಲ್ಲಿ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್ ಮಾತನಾಡಿ, ದೇಶದ ವ್ಯವಸ್ಥೆಗೆ ಸಂವಿಧಾನವೇ ಭದ್ರ ಅಡಿಪಾಯ. ಭಗವದ್ಗೀತೆಂಂತೆ ಸಂವಿಧಾನವನ್ನು ನಾವೆಲ್ಲರೂ ಓದಿ ಅದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸವಿಸ್ತಾರವಾದ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಕ್ಕೆ ಕೊಟ್ಟಿದ್ದಾರೆ. ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ೭೩ ವರ್ಷದಿಂದ ಸಂವಿಧಾನದ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಸಂವಿಧಾನ ಓದು ಎಂಬುದು ಚಳವಳಿ ರೂಪ ಪಡೆದುಕೊಂಡಿತು. ಪ್ರಜಾಪ್ರಭುತ್ವಕ್ಕೆ ಮೂಲ ಆಧಾರವೇ ಸಂವಿಧಾನ. ಸಂವಿಧಾನ ಇರದ ದೇಶದಲ್ಲಿ ಅರಾಜಕತೆ ಸೃಷ್ಟಿ ಆಗುತ್ತದೆ. ದೇಶದ ವ್ಯವಸ್ಥೆಗೆ ಸಂವಿಧಾನವೇ ಭದ್ರ ಅಡಿಪಾಯ. ಭಗವದ್ಗೀತೆಂಂತೆ ಸಂವಿಧಾನವನ್ನು ನಾವೆಲ್ಲರೂ ಓದಿ ಅದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಅದು ನಮ್ಮ ಬದುಕಿಗೆ ದಾರಿದೀಪದಂತೆ ನೋಡಬೇಕು. ಸಾಮಾಜಿಕ ನ್ಯಾಯ ಸಂವಿಧಾನದಿಂದ ಸಾಧ್ಯ. ಎನ್ ಇಪಿ ಬಂದಿದೆ. ಇಂಟರ್ ಕೋರ್ಸ್ ಆಗಿ ಇದೀಗ ಯಾವುದಾದರೂ ವಿಷಂಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಕೇಂದ್ರ ಬೆಳೆಯಲಿ. ಹೆಚ್ಚು ಸಂಶೋದನೆ ನಡೆಯಲಿ ಎಂದು ಆಶಿಸಿದರು.
ಸಮಾಜ ಕಾರ್ಯ ವಿಭಾಗದ ಪ್ರೊ.ಆರ್.ಶಿವಪ್ಪ, ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್ ಹಾಗೂ ಮೇಜರ್ ಒಂಬತ್ಕೆರೆ ಸೇರಿದಂತೆ ಇತರರು ಭಾಗವಹಿಸಿದ್ದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ…
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಯ್ ಅವರಿಂದು ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದ…
ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಕೇಂದ್ರ ಗೃಹ ಸಚಿವಾಲಯ ಬಿಗ್ ಶಾಕ್…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪಘಾತ…
ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ ‘ಎಕ್ಕ’, ಜೂನ್ 06ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮುಹೂರ್ತದ ದಿನವೇ ಘೋಷಿಸಿದೆ.…
ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’, ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲೊಂದು.…