ದಾಬಸ್ಪೇಟೆ: ನೆಲಮಂಗಲ ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ 8.30ಕ್ಕೆ ‘ಕುರುಕ್ಷೇತ್ರ’ ಎಂಬ ನಾಟಕ ಪ್ರದರ್ಶನವಿದ್ದು, ಅದರಲ್ಲಿ ಮುಸ್ಲಿಂ ಕಲಾವಿದರು ಅಭಿನಯಿಸುತ್ತಿದ್ದಾರೆ.
ಸಾಮರಸ್ಯದ ಸಂದೇಶವಾಗಿ ಈ ನಾಟಕವನ್ನು ವೀರಾಂಜನೇಯಸ್ವಾಮಿ ಕಲಾ ವೃಂದದ ಅಡಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ಹಿಂದೂ-ಮುಸ್ಲಿಮರ ಭಾವೈಕ್ಯ ಹಾಗೂ ಸುತ್ತಮುತ್ತಲ ಗ್ರಾಮಗಳ ನಡುವಿನ ಸಾಮರಸ್ಯ ಮೂಡಿಸಲು ತಂಡ ಹೊರಟಿದೆ ಎಂದು ಆಯೋಜಕ ನಯಾಜ್ ಖಾನ್ ಹೇಳಿದರು.
5 ಸಾವಿರ ಆಸನ ವ್ಯವಸ್ಥೆ, ಎಲ್.ಇ.ಡಿ ಪರದೆ, ಉಪಾಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಕಲಾವಿದರೇ ಇರುವ ನಾಟಕದಲ್ಲಿ ಮಹಿಳಾ ಪಾತ್ರಧಾರಿಗಳಾಗಿ ಹಿಂದೂಗಳು ಅಭಿನಯಿಸಲಿದ್ದಾರೆ. ಹಾರ್ಮೋನಿಯಂ ಮಾಸ್ಟರ್ ಮುನಿರಾಜು ನಾಟಕ ನಿರ್ದೇಶನ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Next Article ಬಿರುಗಾಳಿ– ಮಳೆ: ಮರ ಬಿದ್ದು ಕುರಿಗಾಹಿ ವ್ಯಕ್ತಿ ಸಾವು