ಮಂಡ್ಯ: ನಮ್ಮ ನೆಲದ ಬಹಳ ದೊಡ್ಡ ಬಿಕ್ಕಟ್ಟು ಶಿಕ್ಷಣ. ೧೫೦ ವರ್ಷಗಳಿಂದ ಅತ್ಯಂತ ದೋಷಪೂರ್ಣ ಸ್ಥಿತಿಯಲ್ಲಿ ಶಿಕ್ಷಣ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನೇ ಮುಂದಿನ ತಲೆಮಾರಿಗೂ ಮುಂದುವರಿಸಿದರೆ ಭವಿಷ್ಯ ಅಪಾಯಕಾರಿಯಾಗುತ್ತದೆ ಎಂದು ಕವಿ, ನಾಟಕಕಾರ ಕೋಟಗಾನಹಳ್ಳಿ ರಾಮಯ್ಯ ಎಚ್ಚರಿಸಿದರು.
ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದಿಂದ ಬುಧವಾರ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ೫ನೇ ವರ್ಷದ ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ಮಕ್ಕಳು ಏನು ಕಲಿಯುತ್ತಿದ್ದಾರೆ ಗೊತ್ತಿಲ್ಲ. ಈ ಕಲಿಕೆಗೆ ಭವಿಷ್ಯ ಇದೆಯೇ? ಅದು ಗೊತ್ತಿಲ್ಲ. ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳ ಎಷ್ಟನೇ ತರಗತಿಯಲ್ಲಿ ಓದುತ್ತಿದ್ದಾರೆ. ಯಾವ ಶಾಲೆ? ಅದೂ ತಿಳಿದಿಲ್ಲ. ಇದು ನಮ್ಮ ಸ್ಥಿತಿ ಎಂದರು.
ಮಕ್ಕಳು ಏನು ಓದಬೇಕೆಂದು ಯಾರು ನಿರ್ಧರಿಸುತ್ತಿದ್ದಾರೆ? ಸಮಾಜ, ಪೋಷಕರು, ಮಕ್ಕಳು ಅಲ್ಲ. ಶಿಕ್ಷಣ ತಜ್ಞರು ನಿರ್ಧರಿಸುತ್ತಿದ್ದಾರೆ. ಕಾನ್ವೆಂಟ್‌ನಲ್ಲಿ ಕಲಿಯುವ ಮಗು ರಾಗಿ ಮರದಲ್ಲಿ ಬೆಳೆಯುತ್ತದೆ ಎನ್ನುತ್ತದೆ. ಪ್ರಾಥಮಿಕ ಶಾಲೆಯ ಮಗುವೊಂದು ರಾಕೆಟ್ ತಂತ್ರಜ್ಞಾನದ ಬಗ್ಗೆ ತಿಳಿಯಬಯಸಿತು. ಅದಕ್ಕೆ ಪೂರಕ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದರು.
ಮಕ್ಕಳ ಶಿಕ್ಷಣಕ್ಕೆ ಏನಾದರೂ ಪರಿಹಾರ ಹುಡುಕಬೇಕೆಂದು ಜೀವನದಿಯ ಜಾಡು ಹುಡುಕುತ್ತ ಸಾಗಿದೆ. ಇದಕ್ಕೆ ಕಿರುಝರಿಯ ಪಯಣಗಳನ್ನು ಕೂಡಿಸಿಕೊಂಡೆ. ನಮ್ಮ ಪೂರ್ವಿಕರ ವಿವೇಕ ಮತ್ತು ಜನಪದ ಕತೆಗಳನ್ನು ಆಧರಿಸಿ ನೆಲಪಠ್ಯ ರೂಪಿಸುತ್ತಿರುವೆ. ಜೀವಂತ ಪ್ರಬಂಧವಾಗಿ ೬ ತಿಂಗಳಲ್ಲಿ ಸಿಗಲಿದೆ ಎಂದು ತಿಳಿಸಿದರು.
ಮಕ್ಕಳ ಸಾಹಿತ್ಯಕ್ಕೆ ಕೊಡುಗೆ ನೀಡಿದ ಕುವೆಂಪು, ರಾಜರತ್ನಂ, ಕೈಲಾಸಂ ಪರಂಪರೆಯನ್ನು ಯಾರು ಕೂಡ ಗಮನಿಸಲು ಹೋಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಕ್ಕಳಿಗೆ ಏನು ಬರೆದಿದ್ದಾರೆ ಎಂದು ಕೇಳುತ್ತಾರೆ. ನಮ್ಮಲ್ಲಿ ಮಕ್ಕಳ ಸಾಹಿತ್ಯ ಕೊನೆಯದು. ಸಶಸ್ತ್ರ ಮಾರಾಟ ಮಾಡುವ ಸ್ವಿಡನ್ ದೇಶದಲ್ಲಿ ಪ್ರಧಾನಿ, ಅಧ್ಯಕ್ಷನಾಗುವುದು ಸುಲಭ. ಶಿಕ್ಷಕನಾಗುವುದು ಕಷ್ಟ. ಕಠಿಣವಾದ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯುತ್ತದೆ. ನಮ್ಮಲ್ಲಿ ಯಾವ ಪರಿಸ್ಥಿತಿ ಇದೆ? ಮಕ್ಕಳಿಗೆ ಎಂತಹ ಭವಿಷ್ಯ ರೂಪಿಸುತ್ತಿದ್ದೇವೆ? ಎಂದರು.
ಇವತ್ತು ೧೯೯೧ರಲ್ಲಿ ಭಾರತ ಜಾಗತೀಕರಣಕ್ಕೆ ತೆರೆದುಕೊಂಡಿತು. ಇದರ ಪರಿಣಾಮ ಮುಂದಿನ ೧೫ ವರ್ಷಕ್ಕೆ ತೀವ್ರವಾಗುತ್ತದೆ. ಎನ್‌ಇಪಿ ಕೌಶಲದ ಮೂಲಕ ೧೫ ಸಾವಿರಕ್ಕೆ ನಮ್ಮ ಮಕ್ಕಳನ್ನು ಗುಲಾಮರನ್ನಾಗಿಸುತ್ತದೆ. ಇದು ಹಿಟ್ಲರ್‌ಗಿಂತ ಕ್ರೂರವಾದದ್ದು ಮತ್ತು ನರಹತ್ಯೆಗೆ ಕಾರಣವಾಗುತ್ತದೆ. ಎಲ್ಲ ರೀತಿಯ ಚೌಕಟ್ಟಿಗೆ ವಿಷದ ಬಳ್ಳಿ ಬಿತ್ತಲಾಗಿದೆ. ಅದನ್ನು ಹಬ್ಬಿಸುವುದು ಉಳಿದಿರುವ ಕೆಲಸ. ನಮ್ಮ ಮಕ್ಕಳ ಭವಿಷ್ಯಭೀಕರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿರೋಧ ಏನು ಮಾಡಬೇಕು? ಆ ದಿಕ್ಕಿನಲ್ಲಿ ಸಂತೋಷವಾಗುವಷ್ಟು ಕೆಲಸ ಮಾಡಿದ್ದೇನೆ. ನಮ್ಮ ಮನೆಗಳಿಂದ ಪ್ರತಿರೋಧ ರೂಪಿಸಬೇಕು. ಇದಕ್ಕೆ ಪೂರ್ವಿಕರ ವಿವೇಕ ಬಳಸಿಕೊಳ್ಳಬೇಕು. ಮಕ್ಕಳ ಭವಿಷ್ಯ ರೂಪಿಸುವ ದಿಸೆಯಲ್ಲಿ ೨೦ ನಾಟಕಗಳನ್ನು ಬರೆದಿದ್ದೇನೆ. ಅದರಲ್ಲಿಯೂ ಬಹಳ ಆನಂದ ಇದೆ ಎಂದು ನುಡಿದರು.
ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಎಚ್.ಎನ್.ಶಿವಣ್ಣಗೌಡ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದರು. ಹಿರಿಯ ಲೇಖಕ ಜಗದೀಶ್ ಕೊಪ್ಪ ಸ್ವಾಗತಿಸಿದರು. ಕವಿ ರಾಜೇಂದ್ರ ಪ್ರಸಾದ್ ನಿರೂಪಿಸಿದರು.
ಪ್ರೊ.ಎಚ್.ಎಲ್.ಕೇಶವಮೂರ್ತಿ ಅಕ್ಷರಗಳಲ್ಲಿ ನುಡಿಗಳಲ್ಲಿ ಸದಾ ಜೀವಂತವಾಗಿದ್ದಾರೆ. ಬೇಸರಗಹಳ್ಳಿ ರಾಮಣ್ಣ ಸೇರಿದಂತೆ ಅನೇಕರು ವ್ಯಕ್ತಿಯ ನೆನಪಾಗಿ ಉಳಿಯೋದಿಲ್ಲ. ಬಳಗದ ನೆನಪಾಗಿ ಉಳಿಯುತ್ತಾರೆ. ಈ ಪ್ರಶಸ್ತಿ ಹೃದಯ ಭಾರ ಅನಿಸಿತು. ನಾನೇನು ದೊಡ್ಡ ಕೆಲಸ ಮಾಡಿಲ್ಲ. ಹೆಚ್ಚೇ ಅಭಿಮಾನ ಪ್ರೀತಿ ತೋರಿದ್ದಾರೆ.
-ಕೋಟಗಾನಹಳ್ಳಿ ರಾಮಯ್ಯ
ಕೋಟಗಾನಹಳ್ಳಿ ರಾಮಯ್ಯ ಬಂಡೆಗಳ ನಡುವಿನ ಚಿಗುರು. ಸಿನಿಮಾ, ಸಂಸ್ಕೃತಿ, ಜನರಿಂದ ದೂರವಾಗಿ ಯೋಗಿಯಂತೆ ಆದಿಮದಲ್ಲಿ ಇದ್ದಾಗಲೂ ಜನರ ಬಗ್ಗೆಯೇ ಆಲೋಚಿಸುತ್ತಾರೆ. ಹಲವು ಸಂಕಷ್ಟಗಳನ್ನು ಎದುರಿಸುತ್ತ ಇನ್ನೊಂದು ಇನ್ನೊಂದು ಹೆಜ್ಜೆಗಳನ್ನು ಇಟ್ಟಿದ್ದಾರೆ. ಕನ್ನಡ ಜನ ಸಂಸ್ಕೃತಿ, ಚಳವಳಿಗಳು ಕೋಟಗಾನಹಳ್ಳಿ ರಾಮಯ್ಯ ಹೆಸರು ಉಲ್ಲೇಖಿಸದೇ ಮುಂದಕ್ಕೆ ಹೋಗಲಾಗದು.
-ಸಿ.ಎಂ.ನರಸಿಂಹಮೂರ್ತಿ, ಹಿರಿಯ ಪತ್ರಕರ್ತ
ಮಂಡ್ಯ: ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದು ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ನಗದು ದರೋಡೆ ಮಾಡಿರುವ ಘಟನೆ ಮಂಡ್ಯ…
ಹೈದರಾಬಾದ್: ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್‌ಗೆ ನೋಟಿಸ್ ನೀಡಲಾಗಿದೆ. ನಾಳೆ ಬೆಳಿಗ್ಗೆ 11…
ಬೆಂಗಳೂರು: ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಂದು ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ…
ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಂದು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ…
ಜೈಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ…
ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…