ಗೋಣಿಕೊಪ್ಪ: ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಘಟನೆ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಾಜಿ ಗ್ರಾಮದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ.
ಚೆನ್ನಂಗೊಲ್ಲಿ ಗ್ರಾಮದ ನಿವಾಸಿ ಜರ್ನಾಧನ ಅವರ ಪತ್ನಿ ಜಾನಕಿ (52) ಆನೆ ದಾಳಿಗೆ ಮೃತಪಟ್ಟ ದುರ್ದೈವಿ.
ಚೆನ್ನಂಗೊಲ್ಲಿಯ ಮನೆಯಪಂಡ ಕಾರ್ಯಪ್ಪ ಅವರ ಮಾನಿಕೊಪ್ಪ ಕಾಫಿ ತೋಟದಲ್ಲಿ ಗುರುವಾರ ಸಂಜೆ 4ರ ಸಮಯ ಕಾಫಿ ಕುಯ್ಲು ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆನೆ ದಾಳಿ ನಡೆಸಿ ಜಾನಕಿಯ ತಲೆ ಭಾಗವನ್ನು ತುಳಿದಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೋಟದಲ್ಲಿ ಸುಮಾರು 30 ಕಾರ್ಮಿಕರು ಕಾಫಿ ಕುಯ್ಲಿನಲ್ಲಿ ತೊಡಗಿಸಿಕೊಂಡಿದ್ದರು. ಜಾನಕಿ ಹಾಗೂ ಲೀಲಾ ಎಂಬುವವರು ಕೊನೆಯದಾಗಿ ಕಾಫಿ ಬೀಜಗಳನ್ನು ಕಿತ್ತು ಬ್ಯಾಗಿನಲ್ಲಿ ತುಂಬಿ ಟ್ರ್ಯಾಕ್ಟರ್ ನಿಲ್ಲಿಸಿದ ಜಾಗಕ್ಕೆ ನಡೆದು ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಜಾನಕಿಯವರ ಮರಣೋತ್ತರ ಪರೀಕ್ಷೆಯನ್ನು ಗೋಣಿಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ನಡೆಸಲಾಯಿತು. ಮೂವರು ಪುತ್ರಿಯರು, ಅಳಿಯಂದಿರನ್ನು ಅಗಲಿದ್ದಾರೆ.
ಸ್ಥಳಕ್ಕೆ ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಮಾಯಮುಡಿ ಗ್ರಾ.ಪಂ. ಆಪಟ್ಟೀರ ಟಾಟು ಮೊಣ್ಣಪ್ಪ ಭೇಟಿ ನೀಡಿದರು. ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕೆಲವು ಜನರು ತಮ್ಮ ಮನೆಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಸುರಿಯುವ ಮೂಲಕ ವಿರೂಪಗೊಳಿಸಿ ಸ್ವಚ್ಛ ಭಾರತದ ನಿಯಮವನ್ನು…
ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದು, ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮಹಿಳೆಯರು ಒಂದು…
ಕರ್ನಾಟಕದ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯ ಭಾಗವಾಗಿರುವ ಅನೇಕ ಅಮೂಲ್ಯವಾದ ಶಿಲ್ಪಗಳು ಬ್ರಿಟಿಷ್ ಮ್ಯೂಜಿಯಂ (ಲಂಡನ್), ಲೂವ್ರೇ ಮ್ಯೂಜಿಯಂ (ಪ್ಯಾರಿಸ್),…
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಪುಟ್ಟ ಗ್ರಾಮ ಬದನವಾಳುಗೆ ೧೯೨೭ಹಾಗೂ ೧೯೩೪ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭೇಟಿ ನೀಡಿ ಕೈಮಗ್ಗ…
ಪ್ರೊ.ಆರ್.ಎಂ.ಚಿಂತಾಮಣಿ ೨೦೨೫-೨೬ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಕೊನೆಯ ವೇಳೆಗೆ (ಡಿಸೆಂಬರ್೨೦೨೫) ದೇಶದಲ್ಲಿ ಉಪಭೋಗ (Consumption) ಮುಂದಾಗಿರುವ ಆರ್ಥಿಕ ಚಟುವಟಿಕೆಗಳು…
ಕೆ.ಬಿ.ರಮೇಶನಾಯಕ ದೇಶದಲ್ಲೇ ಹಲವು ಏಳು-ಬೀಳುಗಳು, ಸ್ಥಿತ್ಯಂತರವನ್ನು ಕಂಡ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಮುಖ್ಯಮಂತ್ರಿಯಾಗಿ…