ಕೊಡಗು

ವಿರಾಜಪೇಟೆ | ಮುಂದುವರೆದ ಆನೆ ದಾಳಿ; ಕಾಫಿ ಕುಯ್ಯಲು ಕಾರ್ಮಿಕರ ನಕಾರ

ಮಡಿಕೇರಿ: ವಿರಾಜಪೇಟೆ ಸನಿಹದ ಮಗ್ಗುಲ ಗ್ರಾಮದಲ್ಲಿ ಆನೆ ದಾಳಿ ಮುಂದುವರಿದಿದ್ದು, ಇಂದು ಬೆಳಿಗ್ಗೆ ಸಹ ತೋಟಕ್ಕೆ ಲಗ್ಗೆಯಿಟ್ಟ ಆನೆ ಹಿಂಡುಗಳು ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿವೆ.

ಇಂದು ಬೆಳಗ್ಗಿನ ಜಾವ ಕಾಡಾನೆಗಳ ಗುಂಪು ಮಗ್ಗುಲ ಗ್ರಾಮದ ಪ್ರಗತಿಪರ ಕೃಷಿಕ ಪುಲಿಯಂಡ ಜಗದೀಶ್ ರವರ ತೋಟಕ್ಕೆ ಲಗ್ಗೆ ಇಟ್ಟು ಅಡಿಕೆ ಮತ್ತು ಬಾಳೆ ಗಿಡಗಳನ್ನು ನಾಶ ಪಡಿಸಿವೆ.

ಪ್ರಸ್ತುತ ಕಾಫಿ ಕುಯ್ಲಿನ ಸಮಯವಾಗಿದ್ದು ಆನೆ ಧಾಳಿಯ ಪರಿಣಾಮ ಗ್ರಾಮದ ಸುತ್ತಮುತ್ತಲಿನ ತೋಟಗಳಿಗೆ ಕಾರ್ಮಿಕರು ಕೆಲಸ ಮಾಡಲು ನಕಾರ ಸೂಚುಸುತ್ತಿದ್ದು ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

SUFC | ಇಂಟರ್‌ಸಿಟಿ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ಪುಣೆ ಮೇಲುಗೈ

ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಲ್ಲಿ ನಡೆದ ಇಂಟರ್-ಸಿಟಿ ಪಂದ್ಯಾವಳಿಯಲ್ಲಿ ಪುಣೆ ತಂಡ ಐದು ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳನ್ನು…

2 hours ago

ಮಂಡ್ಯ | ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಲು ಸಕಲ ಸಿದ್ಧತೆ: ಸಚಿವ ಎನ್ ಚಲುವರಾಯಸ್ವಾಮಿ

ಮಂಡ್ಯ: ರೈತರಿಗೆ ಕೃಷಿಯ ಮಾಹಿತಿ ನೀಡಿ ಕೃಷಿ ಅಧ್ಯಯನ ಮಾಡಲು ಸಹಕಾರಿಯಾಗುವ ಕೃಷಿ ವಿಶ್ವವಿದ್ಯಾಲಯವನ್ನು ವಿ.ಸಿ.ಫಾರಂ ಆವರಣದಲ್ಲಿ ಪ್ರಾರಂಭಿಸಲು ಸಕಲ…

3 hours ago

ನಾಗಮಂಗಲ | ಸಂಕ್ರಾಂತಿ ಸಂಭ್ರಮ ಕಳೆಗಟ್ಟಿದ ಅಲಂಕೃತ ಎತ್ತಿನಗಾಡಿ ಮೆರವಣಿಗೆ

ಮಂಡ್ಯ: ಈ ಬಾರಿ ರೈತರ ಮೊಗದಲ್ಲಿ ಸಂತೋಷ ತುಂಬುವ ಸಂಕ್ರಾಂತಿ ಹಬ್ಬವನ್ನು‌ ವಿಶೇಷವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಲಾಪುರದಲ್ಲಿ ಆಚರಿಸಲಾಯಿತು.…

3 hours ago

ಮಂಡ್ಯ | ವಿದ್ಯುತ್‌ ಅವಘಡ: ರಾತ್ರೋ ರಾತ್ರಿ ಹೊತ್ತು ಹುರಿದ ಎಲೆಕ್ಟ್ರಿಕ್‌ ಅಂಗಡಿ

ಮಂಡ್ಯ : ವಿದ್ಯುತ್ ಅವಘಡ ಸಂಭವಿಸಿ ಎಲೆಕ್ಟ್ರಿಕಲ್ ಅಂಗಡಿ ರಾತ್ರೋ ರಾತ್ರಿ ಹೊತ್ತು ಹುರಿದು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಮಂಡ್ಯದಲ್ಲಿ…

6 hours ago

ರಾಮಮಂದಿರ ಉದ್ಘಾಟನೆ ದಿನವೇ ನಿಜ ಸ್ವಾತಂತ್ರ್ಯ : ಮೋಹನ್‌ ಭಾಗವತ್

ಇಂದೋರ್ :  ಆಯೋದ್ಯಯ ರಾಮಮಂದಿರ ಪ್ರತಿಷ್ಠಾಪನೆಯ ದಿನ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿರುವುದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್…

7 hours ago

ಹೆಬ್ಬಾಳಕರ ಶೀಘ್ರ ಗುಣಮುಖರಾಗಲಿ : ಸಿ.ಟಿ ರವಿ

ಬೆಂಗಳೂರು:  ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶೀಘ್ರ ಗುಣಮುಖರಾಗಿ ಎಂದು ಬಿಜೆಪಿ ಎಂಎಲ್‍ಸಿ…

9 hours ago