ಕೊಡಗು

ಮುಂದುವರೆದ ವರುಣನ ಆರ್ಭಟ : ದುಬಾರೆ ಪ್ರವಾಸಿ ತಾಣಕ್ಕೆ ನೋ ಎಂಟ್ರಿ

ಕೊಡಗು : ಜಿಲ್ಲೆಯಾದ್ಯಂತ ವರುಣ ಆರ್ಭಟ ಜೋರಾಗಿದ್ದು, ಜನರು ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಒಂದೆಡೆ ಮಳೆಗೆ ರಸ್ತೆಯೆಲ್ಲ ಕುಸಿಯುವ ಹಂತಕ್ಕೆ ಬಂದಿದೆ. ಕೆಲವು ಕಡೆ ಮಳೆ ನೀರೇಲ್ಲವೂ ರಸ್ತೆಯಲ್ಲೇ ನಿಂತು ರಸ್ತೆಯೆಲ್ಲವೂ ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಅಲ್ಲದೆ ಮಡಿಕೇರಿಯ ಹೃದಯ ಭಾಗದಲ್ಲೇ ರಸ್ತೆ ಕುಸಿಯುತ್ತಿದೆ.

ಇನ್ನು ಮುಂದುವರೆದ ಮಳೆಯ ಆರ್ಭಟದಿಂದ ಕಾವೇರಿ ನದಿ ಪ್ರವಾಹ ಭೀತಿ ಹಿನ್ನೆಲೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಬಳಿ ಇರುವ ದುಬಾರೆ ಪ್ರವಾಸಿ ತಾಣಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ.

ಸವಿತಾ ಆಕಾಂಕ್ಷ್‌

ಮೂಲತಃ ಮೈಸೂರು ಜಿಲ್ಲೆಯ ಗೆಜ್ಜಗಳ್ಳಿ ಗ್ರಾಮದ ನಿವಾಸಿಯಾಗಿರುವ ನಾನು ಮೈಸೂರಿನ ಜೆಎಸ್‌ ಎಸ್‌ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದೇನೆ. ಬಳಿಕ ಮೈಸೂರಿನ ಸ್ಥಳೀಯ ಮಟ್ಟದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಹಾಗೂ ಪ್ರಾದೇಶಿಕ ದಿನಪತ್ರಿಕೆಯಲ್ಲಿ ಕೆಲಸ ಮಾಡಿದ್ದು, ಆರೂವರೆ ವರ್ಷಗಳ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಾಡುಪ್ರಾಣಿಗಳ ರಕ್ಷಣೆ ಮತ್ತು ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳ ಅಧ್ಯಯನ ಮಾಡುತ್ತಾ ಹೊಸ ಹೊಸ ವಿಷಯ ತಿಳಿದುಕೊಳ್ಳುವುದರಲ್ಲಿ ನನಗೆ ಆಸಕ್ತಿ ಹೆಚ್ಚಿದೆ. ಸಿಗುವ ಒಂದಷ್ಟು ಸಮಯ ಕುಟುಂಬಸ್ಥರೊಟ್ಟಿಗೆ ಕಾಲ ಕಳೆಯುತ್ತೇನೆ. ಜೊತೆಗೆ ವನ್ಯಜೀವಿಗಳ ಕುರಿತ ಪುಸ್ತಕ ಓದುವುದು ನನ್ನ ಮತ್ತೊಂದು ಹವ್ಯಾಸವಾಗಿದೆ.

Recent Posts

ಮೈಸೂರಲ್ಲಿ ಡ್ರಗ್ಸ್‌ ಪತ್ತೆ | ಸರ್ಕಾರ, ಪೊಲೀಸ್‌ ಮತ್ತೇ ವಿಫಲ ; ಯದುವೀರ್‌ ಅಸಮಾಧಾನ

ಮೈಸೂರು : ನಗರದಲ್ಲಿ ಕೋಟ್ಯಾಂತರ ರೂ. ಮೊತ್ತದ ಡ್ರಗ್ಸ್ ತಯಾರಿಕೆ ನಡೆಯುತ್ತಿದ್ದರೂ ಪತ್ತೆ ಹಚ್ಚುವಲ್ಲಿ ನಗರದ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ…

56 seconds ago

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪ್ರಮಾಣ ವಚನ

ಮುಂಬೈ : ಮಹಾರಾಷ್ಟ್ರದ ರಾಜಕೀಯದಲ್ಲಿ ಒಂದು ಐತಿಹಾಸಿಕ ಕ್ಷಣ. ಎನ್‌ಸಿಪಿ ನಾಯಕಿ ದಿ.ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್…

21 mins ago

ದಂಟಳ್ಳಿ ಯೋಜನೆಗೆ ಡಿ.ಪಿ.ಆರ್ʼಗೆ ಒತ್ತಾಯಸಿ ಬೃಹತ್‌ ಪ್ರತಿಭಟನೆ

ಹನೂರು : ದಂಟಳ್ಳಿ ಏತ ನೀರಾವರಿ ಯೋಜನೆಗೆ ಡಿ.ಪಿ.ಆರ್ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಯುವ…

32 mins ago

ಮೈಸೂರಲ್ಲಿ ಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : ಎನ್‌ಸಿಬಿ ಅಧಿಕೃತ ಮಾಹಿತಿ

ಮೈಸೂರು : ಮೈಸೂರಿನಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿರುವ ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋ (ಎನ್‌ಸಿಬಿ) ಸುಮಾರು 10 ಕೋಟಿ ರೂ. ಮೌಲ್ಯದ…

49 mins ago

ಸ್ವತಃ ಎದೆಗೆ ಗುಂಡಿಟ್ಟುಕೊಂಡ ಸಿ.ಜೆ.ರಾಯ್ :‌ ಮರಣೋತ್ತರ ಪರೀಕ್ಷೆಯಲ್ಲಿ ಧೃಢ

ಬೆಂಗಳೂರು: ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ, ಉದ್ಯಮಿ ಡಾ.ಸಿ.ಜೆ.ರಾಯ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಮರಣೋತ್ತರ…

2 hours ago

ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಇಂದು ವಿಧಾನಪರಿಷತ್ತಿನ ಅಧಿವೇಶನದ…

2 hours ago