ಕೊಡಗು: ಇಂದು ಬೆಳಿಗ್ಗೆ ನಿಟ್ಟೂರು ತಟ್ಟಕೇರಿಯ ಕಾಫಿ ತೋಟದಲ್ಲಿ ರಾಜನ್ ಎಂಬುವವರು ಹುಲಿ ದಾಳಿಗೆ ಒಳಗಾಗಿದ್ದರು ಎಂದು ಹೇಳಲಾದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೊವಯ್ಯ ಅವರು ಅರಣ್ಯ ಇಲಾಖೆಯ ಮೂಲಕ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಮೂರು ಕಾಡು ಬೆಕ್ಕು ಮರಿಗಳು (ಪೆರ್ಪಣ) ಪತ್ತೆಯಾಗಿವೆ. ಗಾಯಗೊಂಡ ಕಾರ್ಮಿಕ ರಾಜನ್ ಅವರ ಪತ್ನಿಯು ಕೂಡ ಕಾಡುಬೆಕ್ಕಿನಿಂದ ದಾಳಿ ಆಗಿರಬಹುದು ಎಂದು ಹೇಳಿದ್ದಾರೆ ಎಂದು ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮೂರು ಮರಿ ಕಾಡು ಬೆಕ್ಕುಗಳು ಕಂಡುಬಂದಿರುವುದರಿಂದ ಅವುಗಳ ತಾಯಿ ರಾಜುರವರ ಮೇಲೆ ಎರಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮರಿಗಳ ಬಳಿ ತಾಯಿ ಬೆಕ್ಕು ಬರುತ್ತದೆಯೇ ಎಂದು ಕಾದು ಕುಳಿತಿದ್ದಾರೆ. ಇನ್ನು ಗಾಯಾಳು ರಾಜನ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈಸೂರು: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಚೆನ್ನೈ ಎಕ್ಸ್‌ಪ್ರೆಸ್ ರೈಲು ಹತ್ತುವಾಗ ಆಯಾತಪ್ಪಿ ಕೆಳಗೆ ಬಿದ್ದು ಮೈಸೂರಿನ ಪ್ರತಿಭಾವಂತ ವಿದ್ಯಾರ್ಥಿನಿ ಸಾವಿ…
ಬೆಳಗಾವಿ: ಯಾವುದೇ ಒಳ್ಳೆಯ ಕೆಲಸವನ್ನು ವಿರೋಧಿಸುವುದೇ ಬಿಜೆಪಿಯವರ ಅಭ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಜಮ್ಮು ಕಾಶ್ಮೀರದಲ್ಲಿ…
ಹುತಾತ್ಮ ಯೋಧರ ಕುಟುಂಬಕ್ಕೆ ಸರಕಾರದಿಂದ ನೆರವು: ಸಿ.ಎಂ.ಘೋಷಣೆ ಬೆಳಗಾವಿ: ಜಮ್ಮು ಕಾಶ್ಮೀರದಲ್ಲಿ ಅಪಘಾತಕ್ಕೆ ಈಡಾಗಿ ಹುತಾತ್ಮರಾದ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ…
ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್ ಕೊಂಡಾನ’, ‘ಜಾಗ್ 101’ ಮತ್ತು…
ಮೈಸೂರಿನ ಕುವೆಂಪು ನಗರದ ಮುಖ್ಯ ರಸ್ತೆಯಾದ ನೃಪತುಂಗ ರಸ್ತೆ ಯಲ್ಲಿ ಕುವೆಂಪುನಗರದ ಕಾಂಪ್ಲೆಕ್ಸ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ವರೆಗಿನ ಸುಮಾರು…
ಹೊಸ ವರ್ಷ ಬಂತು ಎಂದರೆ ಸಾಕು ಯುವ ಸಮೂಹ ಮೋಜು- ಮಸ್ತಿಯ ಕೂಟಗಳಲ್ಲಿ ಮುಳುಗಿ ಬಿಡುತ್ತದೆ. ಈ ಮೋಜಿನ ಕೂಟಗಳು…