ಕೊಡಗು

ಪೊನ್ನಂಪೇಟೆ | ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

ಮಡಿಕೇರಿ : ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಬಲಿಯಾದ ಘಟನೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ನಡೆದಿದೆ.

ಆನೆ ದಾಳಿಯಲ್ಲಿ ಸಾವನ್ನಪ್ಪಿದವರನ್ನು ಕಾಯಿಮಾನಿ ನಿವಾಸಿ ರತ್ತು ಎಂದು ಗುರುತಿಸಲಾಗಿದೆ. ಇಂದು (ಏ.8) ಬೆಳ್ಳಂಬೆಳಗ್ಗೆ ರತ್ತು ಅವರು ಕುರ್ಚಿ-ಕಾಯಿಮಾನಿ ನಡುವೆ ಇರುವ ತಮ್ಮ ಕಾಫಿ ತೋಟಕ್ಕೆ ಎಂದಿನಂತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಎದುರಾದ ಕಾಡಾನೆ ಅವರ ಮೇಲೆ ದಾಳಿ ನಡೆಸಿ, ತುಳಿದು ಸಾಯಿಸಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಟ್ಟ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಶ್ರೀಮಂಗಲ ಹೋಬಳಿಯ ಕುರ್ಚಿ ಮತ್ತು ಕಾಯಿಮಾನಿ ಭಾಗದಲ್ಲಿ ಸುಮಾರು 8 ರಿಂದ 10 ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಹಗಲು ಹೊತ್ತಿನಲ್ಲೇ ಆನೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಾಗೂ ಬೆಳೆಗಾರರು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಈ ಆನೆಗಳ ಹಿಂಡನ್ನು ಕಾಡಿಗಟ್ಟಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಆಂದೋಲನ ಡೆಸ್ಕ್

Recent Posts

RSS ವಿಷ ಸರ್ಪ ಎಂಬ ಖರ್ಗೆ ಹೇಳಿಕೆ ವಿಚಾರ: ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ

ಮೈಸೂರು: RSS ವಿಷ ಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ…

14 mins ago

ಗ್ಯಾಸ್ ಸಿಲಿಂಡರ್‌ ಅಭಾವ: ಆಟೋ ಚಾಲಕರನ್ನು ಮುಂದೆ ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ: ಎಂ ಲಕ್ಷ್ಮಣ್ ಕಿಡಿ

ಮೈಸೂರು: ರಾಜ್ಯದಲ್ಲಿ ಗ್ಯಾಸ್‌ ಸಿಲಿಂಡರ್‌ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರನ್ನು ಮುಂದೆ ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರುವ…

25 mins ago

ಏಪ್ರಿಲ್.‌5ರಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ

ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಏಪ್ರಿಲ್.‌15ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಶ್ರೀಮಠದಲ್ಲಿ…

50 mins ago

ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತಗೊಳಿಸಲು ಶ್ರಮಿಸಿ : ಎಡಿಸಿ ತಾಕೀತು

ಮೈಸೂರು : ಬಾಲ ಕಾರ್ಮಿಕ ಪದ್ಧತಿಯು ದೇಶಕ್ಕೆ ಮಾರಕವಾಗಿದ್ದು, ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತವಾಗಿಸಲು ಅಧಿಕಾರಿಗಳು ಹೆಚ್ಚಿನ ಜಾಗೃತಿ…

1 hour ago

ಆಟೋ ಗ್ಯಾಸ್‌ ಕೊರತೆ ; ವದಂತಿಗಳಿಗೆ ಕಿವಿಗೊಡದಂತೆ ಸಲಹೆ

ಬೆಂಗಳೂರು : ರಾಜ್ಯದಲ್ಲಿರುವ ಆಟೋ ಮಾಲೀಕರು ಮತ್ತು ಚಾಲಕರು ಆತಂಕಕ್ಕೆ ಒಳಗಾಗಬಾರದು ಹಾಗೂ ಆಟೋ ಗ್ಯಾಸ್ ಕೊರತೆಯ ಬಗ್ಗೆ ಯಾವುದೇ…

1 hour ago

ಚಿಕ್ಕಮಗಳೂರು | ಚಾರಣಕ್ಕೆ ಬಂದಿದ್ದ ಕೇರಳದ ವಿದ್ಯಾರ್ಥಿ ನಾಪತ್ತೆ ; ತೀವ್ರ ಹುಡುಕಾಟ

ಚಿಕ್ಕಮಗಳೂರು : ಬಾಬಾಬುಡನ್‌ಗಿರಿ ಪ್ರದೇಶದಕ್ಕೆ ಪ್ರವಾಸ ಬಂದಿದ್ದ ಕೇರಳದ 16 ವರ್ಷದ ವಿದ್ಯಾರ್ಥಿನಿ ಶ್ರೀನಂದಾ ನಾಪತ್ತೆಯಾಗಿದ್ದು, ಕುಂಟುಬದವರು ಮತ್ತು ಪೊಲೀಸರು…

1 hour ago