ಕೊಡಗು: ಕರ್ನಾಟಕದ ಕಾಶ್ಮೀರಾ ಕೊಡಗಿಗೆ ಮಳೆಗಾಲದಲ್ಲಿ ಎಲ್ಲಿಲ್ಲದ ಜನ ಬರುತ್ತಾರೆ. ಕೊಡಗಿನ ರಮಣೀಯ ಸೌಂದರ್ಯವನ್ನು ಸವಿಯುವ ಮೂಲಕ ಅಲ್ಲಿ ಮೈದುಂಬಿ ಹರಿಯುವ ನದಿ ತೊರೆ, ತೀರಗಳನ್ನು ಒಮ್ಮೆಲೆ ನೋಡಲು ಜನ ಸಾಗರವೇ ಉಕ್ಕಿ ಬರುವುದುಂಟು. ಝರಿಯಾಗಿ ಹರಿಯುವ ಹಲವು ತೊರೆ, ಜಲಪಾತಗಳಿಂದ ದುಮ್ಮಿಕ್ಕುವ ನೀರಿಗೆ ಮೈವೊಡ್ಡಿ ಸ್ನಾನ ಮಾಡಲು ಪ್ರವಾಸಿಗರು ಕೊಡಗಿಗೆ ಬರುತ್ತಾರೆ.
ಆದರೆ ಇನ್ಮುಂದೆ ಕೊಡಗಿನಲ್ಲಿರುವ ಯಾವುದೇ ಜಲಪಾತಗಳಿಗೆ ಪ್ರವಾಸಿಗರು ಇಳಿಯುವಂತಿಲ್ಲ. ಹೌದು ಇದು ಕೊಡಗು ಜಿಲ್ಲಾಡಳಿತ ಕೈಗೊಂಡಿರುವ ಕ್ರಮವಾಗಿದೆ. ಜಿಲ್ಲೆಯಲ್ಲಿ ಯಾವುದೇ ಜಲಪಾತ, ನದಿ ತೊರೆ, ಝರಿಗಳಿಗೆ ಇಳಿದು ಸ್ನಾನ ಮಾಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆ ಮೂಲಕ ಎಂಜಾಯ್ ಮಾಡಲು ಕೊಡಗಿಗೆ ಬರುವ ಪ್ರವಾಸಿಗರ ಆಸೆಗೆ ತಣ್ಣೀರೆರೆಚಿದ ಹಾಗಾಗಿದೆ.
ಕೊಡಗಿನಲ್ಲಿ ನದಿ, ಜಲಪಾತಗಳಿಗೆ ಇಳಿದು ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನೆಲೆ, ಸಾರ್ವಜನಿಕ ಕೆರೆಗಳು ಸೇರಿದಂತೆ ಎಲ್ಲಿಯೂ ಸ್ನಾನ ಮಾಡದಂತೆ ಜಿಲ್ಲಾಧಿಕಾರಿ ಡಾ.ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…
ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…
ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ…