ಮಡಿಕೇರಿ: ನಗರದ ಗಾಳಿ ಬೀಡಿನಲ್ಲಿರುವ ನವೋದಯ ಶಾಲೆಯಿಂದ ನಾಪತ್ತೆಯಾಗಿದ್ದ ಎಂ. ಅಮಿತ್ (17) ಎಂಬ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ನವೋದಯ ಶಾಲೆಯ ಸಿಬ್ಬಂದಿ ಆನಂದ್ ಎಂಬವರ ಪುತ್ರನಾಗಿರುವ ಎಂ.ಅಮಿತ್ ಫೆ.11ರಂದು ಬೆಳಗೆ 7 ಗಂಟೆಗೆ ಶಾಲಾ ಆವರಣದಲ್ಲಿರುವ ಸಿಬ್ಬಂದಿಗಳ ವಸತಿ ಗೃಹದಿಂದ ಶಾಲೆಗೆಂದು ತೆರಳಿದ್ದಾನೆ. 11 ಗಂಟೆಯ ವೇಳೆಗೆ ಅಮಿತ್ ಶಾಲೆಯ ಮುಖ್ಯ ದ್ವಾರದ ಮೂಲಕ ರಸ್ತೆ ಕಡೆಗೆ ಬಂದಿದ್ದಾನೆ.
ಇದನ್ನು ಕಂಡ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ, ಅಮಿತ್ ತಂದೆ ಆನಂದ್ ಅವರಿಗೆ ತಿಳಿಸಿದ್ದಾರೆ. ತಕ್ಷಣವೇ ಆನಂದ್ ರಸ್ತೆ ಕಡೆಗೆ ಬಂದಿದ್ದು, ಆದ್ರೆ ಅಮಿತ್ ಮಾತ್ರ ಕಂಡು ಬರಲಿಲ್ಲ. ಈ ಕುರಿತು ಆನಂದ್ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಕೂಟುಪೊಳೆಯಲ್ಲಿ ಶೋಧ:
ಅಮಿತ್ ಚಪ್ಪಲಿ ಕೂಟುಪೊಳೆ ದಡದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನಿನ್ನೆಯಿಂದ ಕೂಟುಪೊಳೆಯಲ್ಲಿ ಅಮಿತ್‌ಗಾಗಿ ಶೋಧ ನಡೆಸಿದರು.
ಪೊಲೀಸರ ಕೋರಿಕೆಯ ಮೇರೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರ‍್ಯಾಫ್ಟ್ ಬೋಟ್ ಮೂಲಕ ಕೂಟುಹೊಳೆ ಮುಂಭಾಗದಿಂದ ಹಿನ್ನೀರಿನವರೆಗೂ ತೆರಳಿ ಶೋಧಿಸಿದರು. ಇದೀಗ ಮೃತ ದೇಹ ಕೂಟು ಪೊಳೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಐದು ದಿನಗಳ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ರಾಜ್ಯಸಭೆಗೆ…
ಕುಶಾಲನಗರ: ಹಿಟ್ ಅಂಡ್ ರನ್‌ಗೆ ಯುವಕ ಬಲಿಯಾಗಿರುವ ಘಟನೆ ಬೈಲಕುಪ್ಪೆ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರು, ಆಟೋ ಹಾಗೂ ಬೈಕ್…
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತಕ್ಷಣಕ್ಕೆ ಡೀಸೆಲ್ ಸಮಸ್ಯೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷ…
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಜರುಗಿದ ಗೌತಮ ಪಂಚಮಹಾರಥೋತ್ಸವದಲ್ಲಿ ಕಾಲ್ತುಳಿತ ಸಂಭವಿಸಿದ ಪರಿಣಾಮ ಇಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ನಂಜನಗೂಡಿನ…
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಂಜೆಯ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯ…