ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ
ಮಡಿಕೇರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಮತ್ತು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೆಂಗಳೂರು ಅವರ ಸೂಚನೆ ಮೇರೆಗೆ ಎರಡು ದಿನಗಳ ಕಾಲ ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕೊಡಗು ಜಿಲ್ಲೆ ಅವರಿಂದ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿತ್ತು.
ಈ ಆಂದೋಲನದಲ್ಲ್ಷಿ ಜಿಲ್ಲೆಯಾದ್ಯಾಂತ ಹೋಟೆಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿಯ ವ್ಯಾಪಾರಿಗಳು ಕ್ಯಾಂಟೀನ್ ಮತ್ತಿತರ ಸುಮಾರು 54 ಘಟಕಗಳಿಗೆ ಭೇಟಿ ನೀಡಿ ಕಾಯ್ದೆಯಡಿ ಪರಿಶೀಲನೆ ನಡೆಸಿ ಆಹಾರ ಮಾದರಿಗಳನ್ನು ಸಂಗ್ರಹಿಸಲಾಯಿತು.
ಕಾಯ್ದೆ ಉಲಂಘನೆ ಸಂಬಂಧಿಸಿದಂತೆ ಸುಮಾರು 10 ಸಾವಿರ ದಂಡವನ್ನು ಮತ್ತು 37 ಆಹಾರ ಉದ್ದಿಮೆದಾರರಿಗೆ ನೋಟೀಸ್ ನೀಡಲಾಯಿತು. ಸಾರ್ವಜನಿಕರ ಹಿತದೃಪ್ಠಿಯಿಂದ ಶುಚಿತ್ವ ಕಾಪಾಡಿಕೊಂಡು ಶುದ್ಧವಾದ ಆಹಾರವನ್ನು ಗ್ರಾಹಕರಿಕೆ ನೀಡುವುದು, ಕಾಯ್ದೆಯ ಮಾನದಂಡಗಳಿಗೆ ಮೀರಿ ಕೃತಕ ಬಣ್ಣಗಳನ್ನು ಆಹಾರ ತಯಾರಿಕೆ ಬಳಸುವುದನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಎಂಬ ಮಾಹಿತಿಯನ್ನು ಈ ಆಂದೋಲನದಲ್ಲಿ ಸೂಚಿಸಲಾಯಿತು.
ಆಯುಕ್ತರು (ಎಫ್.ಎಸ್.ಎಸ್.ಎ) ಅವರ ಸೂಚನೆಯಂತೆ ಸೋಮವಾರ ವಿಶೇಷವಾದ ಆಂದೋಲನವನ್ನು ಹಮ್ಮಿಕೊಂಡು ಜಿಲ್ಲೆಯಾದ್ಯಾಂತ ಮೊಟ್ಟೆ, ಕೋಳಿ, ಮಾಂಸ/ಮಾಂಸದ ಪದಾರ್ಥಗಳ ಸಂಗ್ರಹಕರು, ಮಾರಾಟಗಾರರು ಮತ್ತು ತಯಾರಿಕಾ ಸ್ಥಳಗಳಿಗೆ ದಿಡೀರ್ ಭೇಟಿ ನೀಡಿ ಪದಾರ್ಥಗಳನ್ನು ಸೂಕ್ತವಾದ ತಾಪಮಾನದಲ್ಲಿ ಸಂಗ್ರಹಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆಯೇ ಮತ್ತು ತ್ಯಾಜ್ಯ ವಸ್ತುಗಳ ಸೂಕ್ತ ನಿರ್ವಹಣೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಯಿತು.
ಹಳೆಯ ಮಾಂಸ/ಮಾಂಸದ ಪದಾರ್ಥಗಳನ್ನು ಕೆಡದಂತೆ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆಯೇ ಎಂಬ ಬಗ್ಗೆಯೂ ಪರಿಶೀಲನೆಯನ್ನು ನಡೆಸಿ ಸಂಶಯಾಸ್ಪದ 11 ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಯಿತು.
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…