‘ಆಂದೋಲನ’ ದಿನಪತ್ರಿಕೆ ಸಂದರ್ಶನದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಡಾ. ಯತೀಶ್ ಉಳ್ಳಾಲ್ ವಾಹಿತಿ
ಸಂದರ್ಶನ: ನವೀನ್ ಡಿಸೋಜ
ಮಡಿಕೇರಿ: ದಸರಾ ಕಾರ್ಯಕ್ರಮದಲ್ಲಿ ನಗರದ ಪ್ರವಾಸಿ ತಾಣ ಗ್ರೇಟರ್ ರಾಜಾಸೀಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಡಾ. ಯತೀಶ್ ಉಳ್ಳಾಲ್ ತಿಳಿಸಿದರು.
ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ‘ಆಂದೋಲನ’ ದಿನಪತ್ರಿಕೆ ನಡೆದ ಸಂದರ್ಶನದಲ್ಲಿ ವಾತನಾಡಿದ ಅವರು, ಪ್ರವಾಸೋದ್ಯಮದ ದಿನದ ಕಾರ್ಯಕ್ರಮಗಳು ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳ ಸ್ಥಿತಿಗತಿ ಬಗ್ಗೆ ವಿವರವಾಗಿ ವಾಹಿತಿ ನೀಡಿದರು.
ಪ್ರಶ್ನೆ: ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಡಾ.ಯತೀಶ್ ಉಳ್ಳಾಲ್: ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸೆ.೨೭ರಂದು ಬೆಳಿಗ್ಗೆ ೬.೩೦ ಗದ್ದುಗೆಯಿಂದ ರಾಜಾಸೀಟ್‌ವರೆಗೆ ಜಾಥಾ ನಡೆಸುವ ಮೂಲಕ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ವಾಡುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗುತ್ತದೆ. ಅಂದು ನೀರಿನ ಬಾಟಲ್ ವಿಲೇವಾರಿಗೊಳಿಸುವ ಸಾಧನವನ್ನು ಉದ್ಘಾಟಿಸಲಾಗುತ್ತದೆ. ಬೆಳಿಗ್ಗೆ ೧೦.೩೦ಕ್ಕೆ ಮಯೂರ ವ್ಯಾಲಿವ್ಯೆ ಹೊಟೇಲ್ ಸಭಾಂಗಣದಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮ ಪುನಶ್ಚೇತನ ಸಂಬಂಧ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಶ್ನೆ: ನಾಡಹಬ್ಬ ದಸರಾ ಪ್ರವಾಸೋದ್ಯಮದ ಮೇಲೆ ಹೇಗೆ ಪರಿಣಾಮ ಬೀರಲಿದೆ?
ಉತ್ತರ: ದಸರಾ ಅಂಗವಾಗಿ ಸಿಂಗಲ್ ಟಿಕೆಟ್ ಪರ್ ಮೆನಿ ಡೆಸ್ಟಿನೇಷನ್ ಯೋಜನೆ ಅನ್ವಯ ಮೈಸೂರಿಗೆ ಬರುವ ಪ್ರವಾಸಿಗರನ್ನು ಕೊಡಗಿನತ್ತ ಸೆಳೆುುಂವ ಪ್ರುಂತ್ನ ವಾಡಲಾಗಿದೆ. ಪ್ರವಾಸಿಗರು ಆನ್‌ಲೈನ್‌ನಲ್ಲಿ ಒನ್ ಟಿಕೆಟ್ ಇನ್ ಪೋರ್ಟಲ್ ಮೂಲಕ ಟಿಕೆಟ್ ಪಡೆದಲ್ಲಿ ೨೫ಕ್ಕೂ ಹೆಚ್ಚು ತಾಣಗಳಿಗೆ ನೇರವಾಗಿ ಪ್ರವೇಶಿಸಬಹುದಾಗಿದೆ. ಪ್ರವಾಸಿ ತಾಣಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇರುವುದಿಲ್ಲ. ರಾಜಾಸೀಟ್, ಅಬ್ಬೀ ಫಾಲ್ಸ್, ಇರ್ಪು ಫಾಲ್ಸ್, ದುಬಾರೆ, ನಿಸರ್ಗಧಾಮ ಸೇರಿದಂತೆ ಎಲ್ಲಾ ಭಾಗಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್‌ಗೆ ಬರುವ ಟಿಕೆಟ್ ತೋರಿಸಿ ಪ್ರವೇಶ ಪಡೆಯಬಹುದಾಗಿದೆ.
ಪ್ರಶ್ನೆ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಯಾವ ಕಾರ್ಯಕ್ರಮಗಳು ನಡೆಯುತ್ತಿದೆ ?
ಉತ್ತರ: ಗ್ರೇಟರ್ ರಾಜಾಸೀಟ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ದಸರಾ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ. ಅಬ್ಬಿ ಫಾಲ್ಸ್‌ನಲ್ಲಿ ಪಾರ್ಕಿಂಗ್, ಟಿಕೆಟ್ ಕೌಂಟರ್ ಅಭಿವೃದ್ಧಿ ವಾಡಲಾಗಿದೆ. ದುಬಾರೆಯಲ್ಲಿ ಪಾರ್ಕಿಂಗ್ ಏರಿಯಾ ಅಭಿವೃದ್ಧಿ ಜೊತೆಗೆ ಫೆನ್ಸಿಂಗ್ ಕೆಲಸ ನಡೆಯುತ್ತಿದೆ. ಚೇಲಾವರ ಫಾಲ್ಸ್‌ನಲ್ಲಿ ವೀಕ್ಷಣಾ ಗೋಪುರ ನಿರ್ವಾಣ ವಾಡಲು ಚಿಂತನೆ ನಡೆಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. ಮೆಲ್ಲಳ್ಳಿ ಜಲಪಾತದ ಬಳಿಯೂ ಇಂಟರ್‌ಲಾಕ್ ಅಳವಡಿಕೆ, ವೀಕ್ಷಣ ಗೋಪುರ ನಿರ್ವಾಣ ಸೇರಿದಂತೆ ಅಭಿವೃದ್ಧಿ ವಾಡಲು ಚಿಂತಿಸಲಾಗಿದೆ.
ಪ್ರಶ್ನೆ: ಕೂರ್ಗ್ ವಿಲೇಜ್ ಉದ್ಘಾಟನೆಗೊಂಡರೂ ಪ್ರಸಿದ್ಧಿ ಪಡೆಯುತ್ತಿಲ್ಲವೆಕೆ?
ಉತ್ತರ: ಕೂರ್ಗ್ ವಿಲೇಜ್‌ನಲ್ಲಿ ಅಭಿವೃದ್ಧಿ ಕಾರ್ಯ ನಡೆಸಿ ಉದ್ಘಾಟಿಸಲಾಗಿದೆ. ನಗರದ ಒಳಭಾಗದಲ್ಲಿ ಇರುವುದರಿಂದ ಅಷ್ಟಾಗಿ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಿದರೂ ಅದರ ನಿರ್ವಹಣೆ ಹೊಣೆ ತೋಟಗಾರಿಕೆ ಇಲಾಖೆಯಲ್ಲಿದೆ. ಪ್ರವಾಸೋದ್ಯಮ ದಿನಾಚರಣೆಯಂದು ಅಲ್ಲಿಗೂ ಪ್ರಚಾರ ಒದಗಿಸುವುದರೊಂದಿಗೆ ದಸರಾದಲ್ಲಿ ಲೈಟಿಂಗ್ಸ್ ಮೂಲಕ ಪ್ರವಾಸಿಗರನ್ನು ಆಕರ್ಷಿಸುವಂತೆ ವಾಡಲಾಗುವುದು.
ಪ್ರಶ್ನೆ: ಕೊಡಗಿನ ಸಂಸ್ಕೃತಿ ಬಿಂಬಿಸುವ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ?ಉತ್ತರ: ಕೊಡವ ಹೆರಿಟೇಜ್ ಸೆಂಟರ್ ಐನ್‌ಮನೆ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಗಾಗಲೇ ೩.೪೫ ಕೋಟಿ ರೂ. ಅನುದಾನ ಬಳಸಿಕೊಳ್ಳಲಾಗಿದೆ. ೋ ಯೋಜನೆ ಪೂರ್ಣಗೊಳ್ಳಲು ಒಟ್ಟು ೪.೯೫ ಕೋಟಿ ರೂ. ಅನುದಾನ ಬೇಕಿದ್ದು, ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಂಪೌಂಡ್, ಒಳಂಗಾಣ ವಿನ್ಯಾಸ ಸೇರಿದಂತೆ ಹಲವು ಕೆಲಸಗಳು ಬಾಕಿ ಉಳಿದಿವೆ. ಅನುದಾನ ಬಂದ ತಕ್ಷಣ ಕಾಮಗಾರಿ ಪೂರ್ಣಗೊಳಿಸಲಾಗುವುದು.
ಡಾ. ಯತೀಶ್ ಉಳ್ಳಾಲ್
ಚಾಮರಾಜನಗರ ನೆಲದ ಕಲಾವಿದರು, ಅಲ್ಲಿನ ಆಡುಭಾಷೆಯನ್ನೇ ಜೀವಾಳವಾಗಿಸಿಕೊಂಡು ಗೆದ್ದ ಅನ್ನ ಚಲನಚಿತ್ರ ರಶ್ಮಿ ಕೋಟಿ ಮನೆಗೆ ಕರೆದುಕೊಂಡು ಹೋಗಲು ಬಂದ…
ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್. ನಾಗವೇಣಿಯವರ ಕತೆಗಳಲ್ಲಿ ಕೂಡ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಆ…
ಐಐಟಿ, ಐಐಎಂ, ಐಐಎಸ್‌ಪಿ, ಎನ್‌ಐಟಿಯಂತಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ. ಜಾತಿ ಮತ್ತು ಪ.ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನವನ್ನು…
ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಕಾಲೇಜುಗಳಲ್ಲಿ ಸುಮಾರು ನಾಲ್ಕು ಸಾವಿರದಷ್ಟು ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು, ಮುಖ್ಯಮಂತ್ರಿಗಳ ಅನುಮತಿ…
ಬೆಂಗಳೂರು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜಕುಟುಂಬದ…