onam
ಮಡಿಕೇರಿ : ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಗೆ ಹಿಂದಿನಿಂದಲೂ ಅವಿನಾವಭಾವ ಸಂಬಂಧವಿದೆ. ಕೇರಳ ರಾಜ್ಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಓಣಂ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆದಿದ್ದು, ಕೊಡಗು ಜಿಲ್ಲೆಯಲ್ಲೂ ಇಂದು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಓಣಂ ಆಚರಿಸಲಾಗುತ್ತಿದೆ.
ಓಣಂನ್ನು ವಿಶೇಷವಾಗಿ ಕೇರಳ ರಾಜ್ಯದಲ್ಲಿ ಸಡಗರ, ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ೧೦ ದಿನಗಳ ಕಾಲ ನಡೆಯುತ್ತದೆ. ಹತ್ತನೆ ದಿನವನ್ನು ತಿರುಓಣಂ ಎಂದು ಕರೆಯಲಾಗುತ್ತದೆ. ಮಲಯಾಳಂ ಕ್ಯಾಲೆಂಡರ್‌ನ ಚಿಂಗಮ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ೧೦ ದಿನಗಳ ಕಾಲ ನಡೆಯುವ ಈ ಹಬ್ಬವು ವಿಶೇಷ ಮಹತ್ವವನ್ನು ಹೊಂದಿದ್ದು, ಈ ವರ್ಷ ಹಬ್ಬವು ಅಥಮ್‌ನೊಂದಿಗೆ ಪ್ರಾರಂಭವಾಗಿದೆ. ಅದರ ಪ್ರಮುಖ ಹಬ್ಬವಾದ ತಿರುವೋಣಂ ಅನ್ನು ಶುಕ್ರವಾರ ಆಚರಿಸಲಾಗುತ್ತಿದ್ದು, ಜನರು ಮಹಾಬಲಿಯನ್ನು ಸ್ವಾಗತಿಸಲು ಪುಷ್ಪ ರಂಗೋಲಿ ಹಾಕಿ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ಓಣಂ ಏಕೆ ವಿಶೇಷ?:
ರಾಜ ಮಹಾಬಲಿಯ ಪುನರಾಗಮನವನ್ನು ಸೂಚಿಸುವ ಈ ಹಬ್ಬವು ಪುರಾಣಗಳಲ್ಲಿ ಪ್ರಸಿದ್ಧಿ ಪಡೆದಿದೆ. ರಾಜ ಮಹಾಬಲಿ ತನ್ನ ಪ್ರಜೆಗಳನ್ನು ಭೇಟಿ ಮಾಡಲು ಭೂಮಿಗೆ ಹಿಂದಿರುಗುವುದನ್ನು ಸೂಚಿಸುವ ಹಬ್ಬ ಇದಾಗಿದ್ದು, ತನ್ನ ಆಳ್ವಿಕೆಯ ಕಾಲಾವಧಿಯಲ್ಲಿ ನ್ಯಾಯಯುತ ಮತ್ತು ಉದಾರ ಅರಸನಾಗಿದ್ದನೆಂದು ನಂಬಲಾಗಿದೆ.
ಮಹಾಬಲಿ ರಾಜನ ಆಳ್ವಿಕೆಯಲ್ಲಿ ಕೇರಳವು ಸಮೃದ್ಧವಾಗಿತ್ತು. ಅವನು ಹೆಚ್ಚು ಜನಪ್ರಿಯತೆಗಳಿಸುತ್ತಿದ್ದು ದೇವರಾಜ ಇಂದ್ರನನ್ನು ಅಸುರಕ್ಷಿತನನ್ನಾಗಿ ಮಾಡಿತು. ತನ್ನ ಕೀರ್ತಿಗೆ ದಕ್ಕೆಯಾಗುವುದನ್ನು ಅರಿತು ಇಂದ್ರನು ವಿಷ್ಣುವಿನಲ್ಲಿ ಸಹಾಯ ಬೇಡಿದನು. ಮಹಾ ವಿಷ್ಣು ವಾಮನ (ಕುಬ್ಜ ಬ್ರಾಹ್ಮಣ) ರೂಪವನ್ನು ತಾಳಿ ರಾಜ ಮಹಾಬಲಿಯಿಂದ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು. ಮಹಾಬಲಿ ಸಂತೋಷದಿಂದ ಈ ದಾನವನ್ನು ನೀಡಿದನು.
ಮೊದಲ ಹೆಜ್ಜೆಯಲ್ಲಿ, ವಾಮನನು ಇಡೀ ಭೂಮಿಯನ್ನು ಮತ್ತು ಎರಡನೇ ಹೆಜ್ಜೆಯಲ್ಲಿ ಇಡೀ ಆಕಾಶವನ್ನು ಅಳೆದನು. ಮೂರನೇ ಹೆಜ್ಜೆಗೆ ಸ್ಥಳವಿಲ್ಲದಿದ್ದಾಗ, ರಾಜ ಮಹಾಬಲಿ ತನ್ನ ತಲೆಯ ಮೇಲೆ ಪಾದವನ್ನು ಇಡುವಂತೆ ಹೇಳಿದನು. ರಾಜನ ಔದಾರ್ಯ ಮತ್ತು ಭಕ್ತಿಗೆ ಮೆಚ್ಚಿದ ವಿಷ್ಣು, ರಾಜನನ್ನು ಪಾತಾಳ ಲೋಕಕ್ಕೆ ಕಳುಹಿಸಿದನು. ಆದರೆ ವರ್ಷಕ್ಕೆ ಹತ್ತುದಿನಗಳ ಕಾಲ ತನ್ನ ಪ್ರಜೆಗಳನ್ನು ಭೇಟಿಯಾಗಲು ಭೂಮಿಗೆ ಹಿಂತಿರುಗುವ ವರವನ್ನು ನೀಡಿದನು. ಓಣಂ ದಿನದಂದು ಕೇರಳದ ಜನರು ತಮ್ಮ ರಾಜನನ್ನು ಸ್ವಾಗತಿಸಲು ತಯಾರಿ ನಡೆಸುವುದು ಇದೇ ಕಾರಣಕ್ಕೆ.
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ…
ಮಡಿಕೇರಿ : ಮೈಸೂರು-ಗೋಣಿಕೊಪ್ಪ ಹೆದ್ದಾರಿಯ ದಕ್ಷಿಣ ಕೊಡಗಿನ ತಿತಿಮತಿ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಹುಲಿ ಸೆರೆಗೆ ಶಾಸಕ…
ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು…
ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ…
ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…
ಮಂಡ್ಯ : ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನೂ ಸಾಧಿಸುವುದಿಲ್ಲ. ಗೋ ಬ್ಯಾಕ್…