ಕೊಡಗು

ಮಡಿಕೇರಿಯಲ್ಲಿ : ನೋಡುಗರ ಮೈನವಿರೇಳಿಸಿದ ಬೈಕ್ ಸ್ಟಂಟ್ಸ್

ಮಡಿಕೇರಿ : ಮಂಜಿನ ನಗರಿಯಲ್ಲಿ ಐತಿಹಾಸಿಕ ದಸರಾ ಸಂಭ್ರಮ ಕಳೆಗಟ್ಟಿದ್ದು, ವೈವಿದ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸುತ್ತಿದೆ. ಶನಿವಾರ ಯುವ ದಸರಾ ಅಂಗವಾಗಿ ನಡೆದ ಯುವ ದಸರಾ ಯುವಸಮೂಹದ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಮಡಿಕೇರಿಯಲ್ಲಿ ಬೆಳಿಗ್ಗೆಯಿಂದಲೇ ಯುವ ದಸರಾ ಕಾರ್ಯಕ್ರಮಗಳು ಆರಂಭಗೊಂಡವು. ಮುಂಜಾನೆ ಸೈಕಲ್ ಜಾಥದ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. ಬಳಿಕ ಗಾಂಧಿ ಮೈದಾನದಲ್ಲಿ ನಡೆದ ಬೈಕ್ ಸ್ಟಂಟ್ ಹಾಗೂ ಸೂಪರ್ ಬೈಕ್‌ಗಳ ರ‍್ಯಾಲಿ ನೋಡುಗರ ಮೈನವಿರೇಳಿಸಿತು. ಯುವಕರು ವಿವಿಧ ಕಸರತ್ತಿನ ಮೂಲಕ ಮಿಂಚಿನ ವೇಗದಲ್ಲಿ ಬೈಕ್ ಚಲಾಯಿಸಿ ಎದೆ ಝಲ್ ಎನ್ನುವಂತೆ ಮಾಡಿದರು.

ಫ್ರೀಸ್ಟೈಲ್, ಸ್ಟಾಪಿ, ವೀಲಿಂಗ್, ಡ್ರಿಫ್ಟ್ ಸೇರಿದಂತೆ ನಾನಾ ರೀತಿಯ ಸ್ಟಂಟ್‌ಗಳನ್ನು ಮಾಡುವ ಮೂಲಕ ಯುವಕರು ಪ್ರೇಕ್ಷಕರ ಕಣ್ಮನ ಸೆಳೆದರು. ಇದರ ಜೋತೆಗೆ ಸೂಪರ್ ಬೈಕ್‌ಗಳು ಕೂಡ ಬೂಮ್ ಬೂಮ್ ಸೌಂಡ್ ಮಾಡುತ್ತಾ ಮಡಿಕೇರಿ ನಗರದಲ್ಲಿ ಒಂದು ರೌಂಡ್ಸ್ ಹಾಕಿದವು. ಸೂಪರ್ ಬೈಕ್‌ಗಳಾದ ಆರ್‌ಓನ್ 5, ವಾಸಕಿ ನಿಂಜ, ಬೆನಿಲಿ 600, ಡುಕಾಟಿ ಹೈಪರ್, ಆರ್‌ಎಕ್ಸ್, ಜಾವ ಬೈಕ್ ಸೇರಿದಂತೆ ಸೂಪರ್ ಬೈಕ್ ಗಳು ಮಡಿಕೇರಿಗರು ಕಣ್ಣು ಬಿಟ್ಟು ನೋಡುವಂತೆ ಮಾಡಿತ್ತು.

lokesh

Recent Posts

ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ : ವೇತನ ಪರಿಷ್ಕರಣೆಗೆ ಒಪ್ಪಿದೆ ; ರದ್ದಾಗುತ್ತಾ ಮುಷ್ಕರ?

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸಿಬ್ಬಂದಿಗೆ 26 ತಿಂಗಳ ಬಾಕಿ…

2 hours ago

ಮಹಾರಾಷ್ಟ್ರ | ಮುಸ್ಲಿಮರಿಗೆ ನೀಡಲಾಗಿದ್ದ ಶೇ.5ಮೀಸಲಾತಿ ರದ್ದು

ಮುಂಬೈ : ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇಕಡಾ 5ರಷ್ಟು ಮೀಸಲಾತಿಯನ್ನು…

2 hours ago

ಮೈಸೂರು | ಹೀಲಿಯಂ ಅನಿಲ ಬಲೂನ್‌ ನಿಷೇಧ ; ಕಮಿಷನರ್‌ ಆದೇಶ

ಮೈಸೂರು : ಇತ್ತೀಚಿಗೆ ನಗರದ ಅರಮನೆ ಸಮೀಪದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಪೋಟ ಘಟನೆಗೆ ಸಂಬಂಧಿದಂತೆ, ಸಾರ್ವಜನಿಕ ಶಾಂತಿ, ಸುರಕ್ಷತೆ…

3 hours ago

ನಮೀಬಿಯಾ ವಿರುದ್ಧ ಗೆಲುವು : ಸೂಪರ್‌ 8 ಸುತ್ತಿಗೆ ಎಂಟ್ರಿ ಕೊಟ್ಟ ಪಾಕಿಸ್ತಾನ

ಕೊಲಂಬೊ : ಐಸಿಸಿ ಪುರುಷರ ಟಿ20 ವರ್ಲ್ಡ್ ಕಪ್ 2026ರಲ್ಲಿ ಪಾಕಿಸ್ತಾನ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾವನ್ನು…

3 hours ago

ಸೇನಾ ವಿಚಾರ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ: ಲೋಕಸಭೆಯಲ್ಲಿ ಗದ್ದಲ, ಕೋಲಾಹಲ

ನವದೆಹಲಿ: ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದ ಕುರಿತು ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಲೇಖನದ ಪ್ರತಿಯನ್ನು ರಾಹುಲ್‌ ಗಾಂಧಿ ಸದನದಲ್ಲಿ ಪ್ರದರ್ಶಿಸಿದರು. ಈ…

3 hours ago

ಭಾರತದಲ್ಲಿ ಎಐ ಪ್ರಯಾಣ ಅಸಾಧಾರಣವಾಗಿರಲಿದೆ : ಗೂಗಲ್‌ ಸಿಇಒ ಸುಂದರ್‌ ಪಿಚೈ

ಹೊಸದಿಲ್ಲಿ : ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತದ ಕೃತಕ ಬುದ್ಧಿಮತ್ತೆ (AI) ಪ್ರಯಾಣವು "ಅಸಾಧಾರಣ" ಆಗಿರುವುದಾಗಿ ಹೇಳಿದ್ದಾರೆ.…

3 hours ago