ಕೊಡಗು

ವಿನಯ್ ಸೋಮಯ್ಯ ಬಿಜೆಪಿಗ ಅಂತಲೇ ಅವನ ವಿರುದ್ಧ ಎಫ್‌ಐಆರ್ ಹಾಕಿಸಿದ್ದಾರೆ: ಮಾಜಿ ಸಂಸದ ಪ್ರತಾಪ್‌ ಸಿಂಹ

ಪ್ರಶಾಂತ್‌ ಎನ್‌ ಮಲ್ಲಿಕ್‌ 

ಕೊಡಗು: ವಿನಯ್ ಸೋಮಯ್ಯ ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿ. ಆತ ಬಿಜೆಪಿಗ ಅಂತಲೇ ಅವನ ವಿರುದ್ಧ ಎಫ್‌ಐಆರ್‌ ಹಾಕಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿನಯ್ ಆತ್ಮಹತ್ಯೆ ಮಾಡಿಕೊಂಡು 4 ದಿನ ಆದರೂ ಯಾರು ಅರೆಸ್ಟ್ ಕೂಡ ಆಗಿಲ್ಲ. ವಿನಯ್‌ಗೆ ಪೊಲೀಸರು ಕರೆ ಮಾಡಿ 107 ರೌಡಿ ಶೀಟರ್ ಹಾಕುವ ಬೆದರಿಕೆ ಹಾಕಿದ್ದಾರೆ. ಕಳೆದ ಮಾರ್ಚ್.21ರಂದು ಬೆಳಗ್ಗೆ 10:09 ಗಂಟೆಗೆ ಕರೆ ಮಾಡಿ 2:45 ನಿಮಿಷ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಎಸ್ಪಿ ಅವರಿಗೆ ಧಮ್ಕಿ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮನವಿ ಪತ್ರ ನೀಡಿದ್ದೇವೆ ಎಂದರು.

ಇನ್ನು ಚುನಾವಣೆಯಲ್ಲಿ 5 ಬಾರಿ ತಿಪ್ಪೆಗೆ ಎಸೆದ್ರು ಬುದ್ದಿ ಬಂದಿಲ್ಲ. ಅವನ ಹೆಸರು ಹೇಳಬೇಡಿ, ಕೊಳಕು ಬಾಯಿಯವನು ಅವನು ಎಂದು ಲಕ್ಷ್ಮಣ್ ವಿರುದ್ಧ ಕಿಡಿಕಾರಿದ ಅವರು, ಅಂತಹ ನಾಯಿಗಳನ್ನು ದುಡ್ಡು ಕೊಟ್ಟು ಕರೆಸಿ ಪೊನ್ನಣ್ಣ ನಮಗೆ ಬಯ್ಯಿಸುತ್ತಾರೆ. ಕಾಸು ಕೊಟ್ಟು ಪೊನ್ನಣ್ಣ ಲಕ್ಷ್ಮಣ್, ತೆನ್ನಿರ ಮೈನಾ, ಹರೀಶ್ ಪೂವಯ್ಯರಿಂದ ಇದನ್ನು ಮಾಡಿಸುತ್ತಿದ್ದಾರೆ.
ಪೊನ್ನಣ್ಣ ಡೀಸೆಂಟ್ ಆಗಿದ್ರೆ ಇಂತ ನಾಯಿಗಳನ್ನು ಸಾಕುತ್ತಿರಲಿಲ್ಲ. ಕಾವೇರಿ ತಾಯಿ ಇಗ್ಗುತಪ್ಪ ಮನಸ್ಸಿನಲ್ಲಿಟ್ಟು ಹೇಳಿ ನಿಮಗೆ ವಿನಯ್ ಸೋಮಯ್ಯ ಗೊತ್ತಿಲ್ವಾ..? ಎಂದು ಪ್ರಶ್ನೆ ಮಾಡಿದರು.

ಇನ್ನು ಕಾಸು ಕೊಟ್ಟು ಕಾಕಾಗಳನ್ನು ಕರೆಸಿ ನನ್ನ ಪ್ರತಿಕೃತಿ ದಹನ ಮಾಡಿಸಿದ್ರಿ. ಸಂಭಾವಿತರಂತೆ ಪೋಸ್ ಕೊಡಬೇಡಿ ಪೊನ್ನಣ್ಣ, ನಿಮ್ ಬಗ್ಗೆ ನಂಗೆ ಗೊತ್ತು. ನಿಮ್ಮ ಕುಟುಂಬದ ಹಿನ್ನೆಲೆ ಸ್ವಲ್ಪ ತೆಗೆದು ನೋಡಿ ಪೊನ್ನಣ್ಣ. ಕಾವೇರಿ ತೀರ್ಥೋದ್ಭವ ಆಗಲ್ಲ ಅಂದಿದ್ದು ನಿಮ್ಮ ಅಪ್ಪ, ಅದು ನಿಮ್ಮ‌ ಸಂಸ್ಕೃತಿ. ಜಾತಿ ತಂದು ಒಡೆಯಬೇಡಿ, ಕೊಡಗಿನ ಜನ ಒಗ್ಗಟ್ಟಿನಲ್ಲಿ‌ ಇದ್ದಾರೆ.
ಕುಟ್ಟಪ್ಪ ಅವರು ತೀರಿಹೋದಾಗ ಕೋವಿ ಎತ್ತಿದವರು ಯಾರು ಅಂತ ಗೊತ್ತು. ಸಾವಿಗೆ ಕಾರಣರಾದವರು ನೀವೆ, ನಗೆ ಸಾವಿನ ಮೇಲೆ ರಾಜಕಾರಣ ಅಂತೀರ. ಮೊನ್ನೆ ಪ್ರತಿಭಟನೆ ಮಾಡಿ ಸಾವನ್ನು ಸಂಭ್ರಮಿಸಿದವರು ನೀವು ಪೊನ್ನಣ್ಣ. ನಿಮ್ಮ ಕುಟುಂಬದಲ್ಲೇ ಹೀಗೆ ಆಗಿದ್ರೆ ಏನ್ ಮಾಡುತ್ತಿದ್ರಿ. ನಿಮ್ಮ ಹೆಸರು ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ವಿನಯ್. ಸಹಾಯ ಮಾಡ್ತೀನಿ ಅಂತ ಗೊತ್ತು, ನೀವು ಫಿಕ್ಸರ್ ಅಂತ ನಮಗೆ ಗೊತ್ತು. ಪೊನ್ನಣ್ಣನ ಮನೆಯಲ್ಲಿ ತೆನ್ನಿರ ಮೈನಾ ಅಡಗಿ ಕುಳಿತಿರಬಹುದು. ಪೊನ್ನಣ್ಣನ‌ ಮನೆಗೆ ಹೋಗಿ ಮೊದಲು ಪೊಲೀಸರು ಸರ್ಚ್ ಮಾಡಬೇಕು. ಪೊನ್ನಣ್ಣ ನ್ಯಾಯಾಲಯದ ಮೇಲೂ ಪ್ರಭಾವ ಬೀರಬಹುದು. ಪೊನ್ನಣ್ಣ ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣ ಮುಗಿಸಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇನ್ನು ಪ್ರತಾಪ್ ಸಿಂಹ ಬಂದರೆ ಅಟ್ಟಾಡಿಸಿ ಹೊಡೆಯಲು ಕರೆ ಕೊಡುವ ಕಾಂಗ್ರೆಸ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾಳೆ ಪೊನ್ನಣ್ಣನ ಮನೆಗೆ ಬರಬೇಕಾ…? ತಾಕತ್ತಿದೆಯಾ..? ಎಲ್ಲಿಗೆ ಬರಬೇಕು ಹೇಳಿ ನಾನು ಬರುತ್ತೇನೆ ಎಂದು ಸವಾಲು ಹಾಕಿದರು. ಕೇರಳದ ಮಲಯಾಳಿಗಳನ್ನ ಪಕ್ಕದಲ್ಲಿ ಇಟ್ಕೊಂಡು ಪ್ರೊಟೆಕ್ಷನ್ ತೆಗೆದುಕೊಳ್ತೀರುವುದು ನೀವು.
ಯಾರು ಯಾರಿಗೋ ಹೆದರಿಲ್ಲ ನಿಮಗೆ ಹೆದರುತ್ತೀನಾ..? ಕೊಡಗಿನಲ್ಲಿ ಶಾಂತಿ‌ ಕದಡಿರೋರು ನೀವು ಪೊನ್ನಣ್ಣ. ವಿನಯ್ ಸೋಮಯ್ಯ ಪ್ರಧಾನಿ ಮೋದಿ ಅವರ ಅಭಿಮಾನಿ. ವಿನಯ್ ಬಿಜೆಪಿಗ ಅಂತಲೇ ಅವನ ವಿರುದ್ಧ ಎಫ್‌ಐಆರ್ ಹಾಕಿಸಿದ್ದಾರೆ ಎಂದು ಕಿಡಿಕಾರಿದರು.

 

ಆಂದೋಲನ ಡೆಸ್ಕ್

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

7 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

8 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

9 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

11 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

11 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

12 hours ago