ಪ್ರಶಾಂತ್ ಎನ್ ಮಲ್ಲಿಕ್
ಕೊಡಗು: ವಿನಯ್ ಸೋಮಯ್ಯ ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿ. ಆತ ಬಿಜೆಪಿಗ ಅಂತಲೇ ಅವನ ವಿರುದ್ಧ ಎಫ್‌ಐಆರ್ ಹಾಕಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿನಯ್ ಆತ್ಮಹತ್ಯೆ ಮಾಡಿಕೊಂಡು 4 ದಿನ ಆದರೂ ಯಾರು ಅರೆಸ್ಟ್ ಕೂಡ ಆಗಿಲ್ಲ. ವಿನಯ್‌ಗೆ ಪೊಲೀಸರು ಕರೆ ಮಾಡಿ 107 ರೌಡಿ ಶೀಟರ್ ಹಾಕುವ ಬೆದರಿಕೆ ಹಾಕಿದ್ದಾರೆ. ಕಳೆದ ಮಾರ್ಚ್.21ರಂದು ಬೆಳಗ್ಗೆ 10:09 ಗಂಟೆಗೆ ಕರೆ ಮಾಡಿ 2:45 ನಿಮಿಷ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಎಸ್ಪಿ ಅವರಿಗೆ ಧಮ್ಕಿ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮನವಿ ಪತ್ರ ನೀಡಿದ್ದೇವೆ ಎಂದರು.
ಇನ್ನು ಚುನಾವಣೆಯಲ್ಲಿ 5 ಬಾರಿ ತಿಪ್ಪೆಗೆ ಎಸೆದ್ರು ಬುದ್ದಿ ಬಂದಿಲ್ಲ. ಅವನ ಹೆಸರು ಹೇಳಬೇಡಿ, ಕೊಳಕು ಬಾಯಿಯವನು ಅವನು ಎಂದು ಲಕ್ಷ್ಮಣ್ ವಿರುದ್ಧ ಕಿಡಿಕಾರಿದ ಅವರು, ಅಂತಹ ನಾಯಿಗಳನ್ನು ದುಡ್ಡು ಕೊಟ್ಟು ಕರೆಸಿ ಪೊನ್ನಣ್ಣ ನಮಗೆ ಬಯ್ಯಿಸುತ್ತಾರೆ. ಕಾಸು ಕೊಟ್ಟು ಪೊನ್ನಣ್ಣ ಲಕ್ಷ್ಮಣ್, ತೆನ್ನಿರ ಮೈನಾ, ಹರೀಶ್ ಪೂವಯ್ಯರಿಂದ ಇದನ್ನು ಮಾಡಿಸುತ್ತಿದ್ದಾರೆ.
ಪೊನ್ನಣ್ಣ ಡೀಸೆಂಟ್ ಆಗಿದ್ರೆ ಇಂತ ನಾಯಿಗಳನ್ನು ಸಾಕುತ್ತಿರಲಿಲ್ಲ. ಕಾವೇರಿ ತಾಯಿ ಇಗ್ಗುತಪ್ಪ ಮನಸ್ಸಿನಲ್ಲಿಟ್ಟು ಹೇಳಿ ನಿಮಗೆ ವಿನಯ್ ಸೋಮಯ್ಯ ಗೊತ್ತಿಲ್ವಾ..? ಎಂದು ಪ್ರಶ್ನೆ ಮಾಡಿದರು.
ಇನ್ನು ಕಾಸು ಕೊಟ್ಟು ಕಾಕಾಗಳನ್ನು ಕರೆಸಿ ನನ್ನ ಪ್ರತಿಕೃತಿ ದಹನ ಮಾಡಿಸಿದ್ರಿ. ಸಂಭಾವಿತರಂತೆ ಪೋಸ್ ಕೊಡಬೇಡಿ ಪೊನ್ನಣ್ಣ, ನಿಮ್ ಬಗ್ಗೆ ನಂಗೆ ಗೊತ್ತು. ನಿಮ್ಮ ಕುಟುಂಬದ ಹಿನ್ನೆಲೆ ಸ್ವಲ್ಪ ತೆಗೆದು ನೋಡಿ ಪೊನ್ನಣ್ಣ. ಕಾವೇರಿ ತೀರ್ಥೋದ್ಭವ ಆಗಲ್ಲ ಅಂದಿದ್ದು ನಿಮ್ಮ ಅಪ್ಪ, ಅದು ನಿಮ್ಮ ಸಂಸ್ಕೃತಿ. ಜಾತಿ ತಂದು ಒಡೆಯಬೇಡಿ, ಕೊಡಗಿನ ಜನ ಒಗ್ಗಟ್ಟಿನಲ್ಲಿ ಇದ್ದಾರೆ.
ಕುಟ್ಟಪ್ಪ ಅವರು ತೀರಿಹೋದಾಗ ಕೋವಿ ಎತ್ತಿದವರು ಯಾರು ಅಂತ ಗೊತ್ತು. ಸಾವಿಗೆ ಕಾರಣರಾದವರು ನೀವೆ, ನಗೆ ಸಾವಿನ ಮೇಲೆ ರಾಜಕಾರಣ ಅಂತೀರ. ಮೊನ್ನೆ ಪ್ರತಿಭಟನೆ ಮಾಡಿ ಸಾವನ್ನು ಸಂಭ್ರಮಿಸಿದವರು ನೀವು ಪೊನ್ನಣ್ಣ. ನಿಮ್ಮ ಕುಟುಂಬದಲ್ಲೇ ಹೀಗೆ ಆಗಿದ್ರೆ ಏನ್ ಮಾಡುತ್ತಿದ್ರಿ. ನಿಮ್ಮ ಹೆಸರು ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ವಿನಯ್. ಸಹಾಯ ಮಾಡ್ತೀನಿ ಅಂತ ಗೊತ್ತು, ನೀವು ಫಿಕ್ಸರ್ ಅಂತ ನಮಗೆ ಗೊತ್ತು. ಪೊನ್ನಣ್ಣನ ಮನೆಯಲ್ಲಿ ತೆನ್ನಿರ ಮೈನಾ ಅಡಗಿ ಕುಳಿತಿರಬಹುದು. ಪೊನ್ನಣ್ಣನ ಮನೆಗೆ ಹೋಗಿ ಮೊದಲು ಪೊಲೀಸರು ಸರ್ಚ್ ಮಾಡಬೇಕು. ಪೊನ್ನಣ್ಣ ನ್ಯಾಯಾಲಯದ ಮೇಲೂ ಪ್ರಭಾವ ಬೀರಬಹುದು. ಪೊನ್ನಣ್ಣ ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣ ಮುಗಿಸಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಪ್ರತಾಪ್ ಸಿಂಹ ಬಂದರೆ ಅಟ್ಟಾಡಿಸಿ ಹೊಡೆಯಲು ಕರೆ ಕೊಡುವ ಕಾಂಗ್ರೆಸ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾಳೆ ಪೊನ್ನಣ್ಣನ ಮನೆಗೆ ಬರಬೇಕಾ…? ತಾಕತ್ತಿದೆಯಾ..? ಎಲ್ಲಿಗೆ ಬರಬೇಕು ಹೇಳಿ ನಾನು ಬರುತ್ತೇನೆ ಎಂದು ಸವಾಲು ಹಾಕಿದರು. ಕೇರಳದ ಮಲಯಾಳಿಗಳನ್ನ ಪಕ್ಕದಲ್ಲಿ ಇಟ್ಕೊಂಡು ಪ್ರೊಟೆಕ್ಷನ್ ತೆಗೆದುಕೊಳ್ತೀರುವುದು ನೀವು.
ಯಾರು ಯಾರಿಗೋ ಹೆದರಿಲ್ಲ ನಿಮಗೆ ಹೆದರುತ್ತೀನಾ..? ಕೊಡಗಿನಲ್ಲಿ ಶಾಂತಿ ಕದಡಿರೋರು ನೀವು ಪೊನ್ನಣ್ಣ. ವಿನಯ್ ಸೋಮಯ್ಯ ಪ್ರಧಾನಿ ಮೋದಿ ಅವರ ಅಭಿಮಾನಿ. ವಿನಯ್ ಬಿಜೆಪಿಗ ಅಂತಲೇ ಅವನ ವಿರುದ್ಧ ಎಫ್‌ಐಆರ್ ಹಾಕಿಸಿದ್ದಾರೆ ಎಂದು ಕಿಡಿಕಾರಿದರು.
ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…
ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…
ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…
ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…
ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…
ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…