Accused Sentenced for Fraud Involving Fake Medicines
ಮಡಿಕೇರಿ : ಮಾನಸಿಕ ಖಾಯಿಲೆ ಹಾಗೂ ಶರೀರದ ನಡುಕ ಖಾಯಿಲೆಯಿಂದ ಬಳಲುತ್ತಿದ್ದ ರೋಗಿಯನ್ನು ಗುಣಪಡಿಸುವುದಾಗಿ ನಂಬಿಸಿ 8,76,000 ರೂ. ವಂಚಿಸಿದ ಮೂವರು ಆರೋಪಿಗಳಿಗೆ ಮಡಿಕೇರಿಯ ಸಿ.ಜೆ.ಎಂ. ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರಮೇಶ್ ಗೋವಿಂದಪ್ಪ ಗೊಲ್ಲಾರ್, ಭರತ್ ಹಾಗೂ ರವಿ ಓಣಿಕೇರಿ ಶಿಕ್ಷೆಗೆ ಒಳಗಾದವರು.
2019 ರಲ್ಲಿ ಮಡಿಕೇರಿಯ ದೇಚೂರಿನಲ್ಲಿ ಸಿ.ಡಿ.ಸರೋಜ ಹಾಗೂ ಸಿ.ಡಿ.ಕಾಳಪ್ಪ ಮನೆಯಲ್ಲಿದ್ದ ಸಂದರ್ಭದಲ್ಲಿ ಆರೋಪಿ ರಮೇಶ ಗೋವಿಂದಪ್ಪ ಗೊಲ್ಲರ್ ಎಂಬವರು ಆಗಮಿಸಿದ್ದರು. ಮಾನಸಿಕ ಖಾಯಿಲೆ ಹಾಗೂ ಶರೀರದ ನಡುಕ ಖಾಯಿಲೆಯಿಂದ ಬಳಲುತ್ತಿರುವ ಸರೋಜರವರ ಗಂಡನನ್ನು ನೋಡಿ, ತನ್ನ ತಾಯಿಗೂ ಕೂಡ ಇದೇ ರೀತಿಯ ಖಾಯಿಲೆ ಇದ್ದು, ಆಯುರ್ವೇದ ಔಷಧ ನೀಡಿದ ನಂತರ ಗುಣಮುಖರಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಔಷಧಿಯು ಕುಶಾಲನಗರದ ಆಯುರ್ವೇದಿಕ್ ಅಂಗಡಿಯಲ್ಲಿ ಮಾತ್ರ ದೊರೆಯುವುದಾಗಿ ನಂಬಿಸಿ, ಸಿ.ಡಿ.ಸರೋಜ ಮತ್ತು ಕಾಳಪ್ಪ ಅವರನ್ನು ಕುಶಾಲನಗರದ ಆಯುರ್ವೇದಿಕ್ ಔಷಧ ಅಂಗಡಿಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಮತ್ತೊಬ್ಬ ಆರೋಪಿ ಭರತ್‌ನನ್ನು ಭೇಟಿ ಮಾಡಿಸಿ ಈ ಔಷಧಿಗೆ ಒಟ್ಟು 8,76,000 ರೂ.ಗಳಾಗುವುದೆಂದು ಹೇಳಿದ್ದಾರೆ. ಬಳಿಕ ಸಿ.ಡಿ.ಸರೋಜರವರ ಬ್ಯಾಂಕ್ ಖಾತೆಗಳಿಂದ ಮತ್ತೊಬ್ಬ ಆರೋಪಿ ರವಿ ಓಣಿಕೇರಿ ಎಂಬ ವ್ಯಕ್ತಿಯ ಹೆಸರಿಗೆ ಒಟ್ಟು 8,76,000 ರೂ.ಗಳನ್ನು 2 ಚೆಕ್‌ಗಳ ಮೂಲಕ ಪಡೆದುಕೊಂಡಿದ್ದರು. ಬಳಿಕ ಮೋಸ ಹೋಗಿರುವುದು ತಿಳಿದು ಈ ಸಂಬಂಧ ದಂಪತಿಗಳು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಅಂದಿನ ಪೊಲೀಸ್ ಉಪ ನಿರೀಕ್ಷಕರಾದ ಎಂ.ಟಿ.ಅಂತಿಮ ತನಿಖೆ ನಡೆಸಿ ಆರೋಪಿತರ ವಿರುದ್ಧ ಮೋಸ, ವಂಚನೆಯ ಅಪರಾಧಕ್ಕಾಗಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯು ಸಿ.ಜೆ.ಎಂ. ನ್ಯಾಯಾಲಯ, ಮಡಿಕೇರಿ ಇಲ್ಲಿ ನಡೆದಿದ್ದು, ಆರೋಪಿತರು ಮೋಸದಿಂದ ಸಿ.ಡಿ.ಸರೋಜರವರಿಗೆ ವಂಚಿಸಿ ಒಟ್ಟು 8,76,000 ರೂ.ಗಳನ್ನು ಲಪಟಾಯಿಸಿರುವುದು ನಿಸ್ಸಂಶಯವಾಗಿ ಸಾಬೀತಾಗಿದೆ ಎಂದು ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶ ಸಿ.ವೀರಭದ್ರಯ್ಯ ತೀರ್ಪು ನೀಡಿದ್ದಾರೆ.
ಆರೋಪಿಗಳಿಗೆ ದಂಡ
ಆರೋಪಿತರಿಗೆ ಕಲಂ ೪17ರ ಪ್ರಕಾರ ಅಪರಾಧಕ್ಕಾಗಿ 1 ವರ್ಷ ಸಜೆ ಹಾಗೂ ರೂ.10,000 ದಂಡ. ಕಲಂ420 ಭಾ.ದಂ.ಸಂ.ರ ಅಪರಾಧಕ್ಕಾಗಿ 2 ವರ್ಷಗಳ ಸಜೆ ಹಾಗೂ ರೂ. 10,000 ದಂಡ, ಕಲಂ:19 ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್ ಮೆಂಟ್ ಆಕ್ಟ್‌ನ ಅಪರಾಧಕ್ಕಾಗಿ 2 ವರ್ಷಗಳ ಸಜೆ, ರೂ.10,000 ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಎಸ್. ಸಂತೋಷ್ ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿದ್ದರು.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…