ಕೊಡಗು

ಡ್ರಗ್ಸ್ ನಿಯಂತ್ರಣಕ್ಕೆ ಕೊಡಗಿನ ಜಮಾತ್​​ನಿಂದ ದಿಟ್ಟ ಹೆಜ್ಜೆ : ಮಾದಕ ವ್ಯಾಸನಿಗಳಿಗಿಲ್ಲ ಜಮಾತ್ ಪ್ರವೇಶ

ಮಡಿಕೇರಿ : ರಾಜ್ಯದಲ್ಲಿ ಡ್ರಗ್ಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಾ ಹೋಗುತ್ತಿದೆ. ಯುವಕರು ಹೆಚ್ಚಾಗಿ ಮಾದಕ ದ್ರವ್ಯಗಳ ದಾಸರಾಗುತ್ತಿದ್ದಾರೆ. ಹೀಗಾಗಿ ತಮ್ಮ ಸಮುದಾಯದ ಯುವಕರು ಮಾದಕ ದ್ರವ್ಯದ ದಾಸರಾಗಬಾರದೆಂದು, ಮಾದಕ ದ್ರವ್ಯ ಸೇವನೆಯನ್ನು ನಿಯಂತ್ರಿಸಲು ಕೊಡಗಿನ ಜಮಾತ್ ವಿಶಿಷ್ಟ ಕ್ರಮಗಳನ್ನು ಕೈಗೊಂಡಿದೆ. ಮಾದಕ ದ್ರವ್ಯ ಸೇವನೆಯ ವಿರುದ್ಧ ಸಮುದಾಯದ ಯುವಕರಿಗೆ ಎಚ್ಚರಿಕೆ ನೀಡುವ ಸಂಕ್ಷಿಪ್ತ, ಕಟ್ಟುನಿಟ್ಟಾದ ಸೂಚನೆಯನ್ನು ಕೊಂಡಂಗೇರಿ ಮಸೀದಿಯ ಹೊರಗೆ ಅಂಟಿಸಲಾಗಿದೆ.

ಕೊಡಗಿನಾದ್ಯಂತ ಮಾದಕ ದ್ರವ್ಯ ಸೇವನೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕೊಡಗು ಪೊಲೀಸರು ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಹೆಚ್ಚಾಗಿ ಯುವಕರನ್ನು ಬಂಧಿಸುತ್ತಿದ್ದಾರೆ. ಹೀಗಾಗಿ ಮಾದಕ ವಸ್ತುಗಳ ಸೇವನೆ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದ ಸುನ್ನಿ ಮುಸ್ಲಿಂ ಜಮಾತ್ ವಿಶಿಷ್ಟ ಹೆಜ್ಜೆ ಇಟ್ಟಿದೆ. ಗ್ರಾಮದ ಮಸೀದಿ ಆವರಣದ ಹೊರಗೆ, ಜಮಾತ್ ಸಮಿತಿಯು ಮಾದಕ ದ್ರವ್ಯ ಸೇವನೆಯಲ್ಲಿ ತೊಡಗಿರುವ ಯುವಕರನ್ನು ಜಮಾತ್ ಮತ್ತು ಮಸೀದಿಗೆ ಪ್ರವೇಶಿಸುವುದನ್ನು ಬಹಿಷ್ಕರಿಸುವ ಪೋಸ್ಟರ್ ಅನ್ನು ಅಂಟಿಸಿದೆ. ಡ್ರಗ್ಸ್ ಬಳಸುವ ಜನರನ್ನು ನಿಷೇಧಿಸುವುದರ ಜೊತೆಗೆ, ಸ್ಟೈಲ್ ಎಂದು ವಿಲಕ್ಷಣ ಕೇಶವಿನ್ಯಾಸವನ್ನು ಮಾಡಿಸಿಕೊಳ್ಳುವ ಯುವಕರನ್ನೂ ಜಮಾತ್​ನಿಂದ ನಿಷೇಧಿಸಲಾಗಿದೆ. ಮತ್ತು ಹರಿದ ಬಟ್ಟೆಗಳನ್ನು ಧರಿಸಿ ಮಸೀದಿಗೆ ಪ್ರವೇಶಿಸುವುದನ್ನು ಜಮಾತ್ ನಿಷೇಧಿಸಿದೆ.

ಯಾವುದೇ ಯುವಕರು ಅಥವಾ ಇತರ ಯಾವುದೇ ನಿವಾಸಿಗಳು ಮಾದಕ ದ್ರವ್ಯ ಸೇವಿಸುತ್ತಿದ್ದಾರೆ ಎಂಬ ಬಗ್ಗೆ ನಮಗೆ ಶಂಕೆಯಾದ್ರೆ, ನಾವು ಮೊದಲು ಅವರನ್ನು ವಿಚಾರಿಸುತ್ತೇವೆ ಮತ್ತು ಅವರನ್ನು ಮಾದಕ ವ್ಯಸನ ಕೇಂದ್ರಕ್ಕೆ ಸೇರಿಸಬಹುದೇ ಎಂದು ನೋಡುತ್ತೇವೆ. ಜಮಾತ್ ನಿಂದ ಕೌನ್ಸೆಲಿಂಗ್ ಮಾಡಲಾಗುವುದು. ಅವರು ಇನ್ನೂ ಮಾದಕ ದ್ರವ್ಯ ಸೇವನೆಯನ್ನು ಮುಂದುವರಿಸಿದರೆ, ಅವರನ್ನು ಕೊಂಡಂಗೇರಿ ಮಸೀದಿಗೆ ಪ್ರವೇಶಿಸದಂತೆ ಬಹಿಷ್ಕರಿಸಲಾಗುವುದು ಮತ್ತು ಜಮಾತ್ ನಿಂದ ಮದುವೆ ಸಮಾರಂಭದಲ್ಲಿ ನೀಡಲಾದ ಪ್ರಮಾಣಪತ್ರಗಳಲ್ಲಿ ನಾವು ಅದೇ ವಿಷಯವನ್ನು ನಮೂದಿಸುತ್ತೇವೆ ಎಂದು ಜಮ್ಮಾತ್ ಕಚೇರಿ ಕಾರ್ಯದರ್ಶಿ ರಫೀಕ್ ತಿಳಿಸಿದರು.

ನಮ್ಮ ವ್ಯಾಪ್ತಿಗೆ ಬರುವ ಯುವಕರಲ್ಲಿ ಮಾದಕ ವ್ಯಸನ ಸುಳಿವು ಸಿಕ್ಕರೆ ಜಮಾತ್ ನೀಡುವ ಮದುವೆ ಕ್ಲಿಯರೆನ್ಸ್ ಪ್ರಮಾಣಪತ್ರದಲ್ಲಿ ಈ ಬಗ್ಗೆ ನಮೂದಿಸಲಾಗುವುದು. ಪ್ರತಿಯೊಬ್ಬ ನಿವಾಸಿಗೆ ಮದುವೆಯ ಸಮಯದಲ್ಲಿ ಈ ಪ್ರಮಾಣಪತ್ರದ ಅಗತ್ಯವಿದೆ. ಮಾದಕ ದ್ರವ್ಯ ಸೇವನೆಯ ವಿಷಯವನ್ನು ಪ್ರಮಾಣಪತ್ರದಲ್ಲಿ ನಮೂದಿಸಿದರೆ, ಇತರ ಎಲ್ಲ ಜಮಾತ್ಗಳಿಗೆ ಅದರ ಬಗ್ಗೆ ಎಚ್ಚರಿಕೆ ನೀಡಿದಂತಾಗುತ್ತದೆ. ಗ್ರಾಮದಲ್ಲಿ ಯಾವುದೇ ಮಾದಕ ದ್ರವ್ಯ ಸೇವನೆ ಪ್ರಕರಣಗಳು ಕಂಡುಬಂದಲ್ಲಿ, ಜಮಾತ್ ಸದಸ್ಯರು ಪೊಲೀಸರೊಂದಿಗೆ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ರಫಿಕ್ ಹೇಳಿದರು.

ಮಾದಕ ವ್ಯಸನದ ವಿರುದ್ಧದ ಈ ಮೊದಲ ರೀತಿಯ ಹೋರಾಟದೊಂದಿಗೆ, ಜಿಲ್ಲೆಯ ಇತರ ಎಲ್ಲಾ ಜಮಾತ್ ಗಳು ಸಹ ಅದೇ ಹಾದಿಯಲ್ಲಿ ಸಮುದಾಯದ ಯುವಕರನ್ನು ಮಾದಕ ವ್ಯಸನದಿಂದ ರಕ್ಷಿಸಲು ಜಮಾತ್ ಸಮಿತಿಯು ಆಶಿಸುತ್ತದೆ ಎಂದರು.

lokesh

Recent Posts

ಮಳವಳ್ಳಿ ದರೋಡೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಮಳವಳ್ಳಿ : ತಾಲೂಕಿನ ಹಲಗೂರು ಸಮೀಪದ ಜೂಗನಹಳ್ಳಿ ವ್ಯಾಪ್ತಿಯ ತೋಟದ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಚಿನ್ನ ದೋಚಿ ಪರಾರಿಯಾಗಿದ್ದ…

7 hours ago

ಪ್ರಚೋದನಕಾರಿ ಭಾಷಣ ; ಯತ್ನಾಳ್, ಅನಂತ್ ಕುಮಾರ್ ಹೆಗ್ಡೆ ವಿರುದ್ಧ ದೂರು ದಾಖಲು

ಮದ್ದೂರು : ಹಿಂದೂ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬಲಿದಾನ್‌ ದಿವಾಸ್ ಕಾರ್ಯಕ್ರಮದಲ್ಲಿ ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತರುವ…

7 hours ago

ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ : ಸಚಿವ ಖಂಡ್ರೆ ಭರವಸೆ

ಬೆಂಗಳೂರು : ಗ್ರಾಮಗಳಿಗೆ ನುಗ್ಗಿ ಬೆಳೆಹಾನಿ, ಜೀವಹಾನಿ ಮಾಡುತ್ತಿರುವ ಆನೆಗಳ ಸೆರೆಗೆ ಆದೇಶ ನೀಡಿದ್ದು, ಈಗಾಗಲೇ 2 ಆನೆ ಸೆರೆ…

7 hours ago

ಭದ್ರಾ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಕ್ರಮ : ಈಶ್ವರ ಖಂಡ್ರೆ

ಬೆಂಗಳೂರು : ಭದ್ರಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ನಿಗದಿ ಪಡಿಸುವ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ…

7 hours ago

ಎಲ್‌ಪಿಜಿ ರಿಫಿಲಿಂಗ್‌ ಅವಧಿ ಹೆಚ್ಚಳ ; ವದಂತಿ ನಿರಾಕರಿಸಿದ ಕೇಂದ್ರ

ಹೊಸದಿಲ್ಲಿ : ಎಲ್‌ಪಿಜಿ ಸಿಲಿಂಡರ್ ರಿಫಿಲಿಂಗ್‌ ಸಮಯ ಮಿತಿ ಬದಲಾವಣೆ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದು, ಇದೀಗ ಪೆಟ್ರೋಲಿಯಂ ಮತ್ತು…

7 hours ago

ಆಕಸ್ಮಿಕ ಬೆಂಕಿ; ಸ್ಕೂಟಿ ಭಸ್ಮ, ಮಹಿಳೆ ಪಾರು

ನಾಪೋಕ್ಲು : ದ್ವಿಚಕ್ರ ವಾಹನವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಚೈಯಂಡಾಣೆಯ ನರಿಯಂದಡ ಗ್ರಾಮದಲ್ಲಿ ಜರುಗಿದೆ. ಸ್ಥಳೀಯ…

7 hours ago