ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂದಲಗಳು ಹೆಚ್ಚಾಗುತ್ತಿವೆ. ಹಿಂದೂಪರ ಕಾರ್ಯಕರ್ತರು ಕೇವಲ ಧ್ವಜ ಸ್ತಂಭ ನೆಡಲು ಅನುಮತಿ ಪಡೆಯಲಾಗಿತ್ತು, ರಾಷ್ಟ್ರ ಅಥವಾ ರಾಜ್ಯ ಧ್ವಜವನ್ನು ಹಾರಿಸುತ್ತೇವೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿ ಅನುಮತಿ ಪಡೆದುಕೊಂಡಿಲ್ಲ ಎಂದು ವಾದಿಸಿದರೆ, ಕಾಂಗ್ರೆಸ್ ಶಾಸಕ ಹಾಗೂ ಗ್ರಾಪಂ ಪಿಡಿಒ ನಿರ್ದಿಷ್ಟವಾಗಿ ರಾಷ್ಟ್ರ ಅಥವಾ ರಾಜ್ಯ ಧ್ವಜವನ್ನು ಆರಿಸುವ ಸಲುವಾಗಿ ಅನುಮತಿಯನ್ನು ನೀಡಲಾಗಿತ್ತೇ ಹೊರತು ಧಾರ್ಮಿಕ ಧ್ವಜವನ್ನು ಹಾರಿಸುವಂತಿಲ್ಲ ಎಂದು ಮುಚ್ಚಳಿಕೆಯಲ್ಲಿ ತಿಳಿಸಲಾಗಿತ್ತು ಎಂದು ವಾದಿಸಿತ್ತು.
ಈ ಎರಡರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬ ಚರ್ಚೆ ಹಾಗೂ ವಾದ ವಿವಾದಗಳು ನಡೆಯುತ್ತಿರುವಾಗಲೇ ಇದೀಗ ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದ ನಡಾವಳಿ ಪುಸ್ತಕ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಜನವರಿ 25ರಂದು ಸಭೆ ನಡೆಸಿ ನಡಾವಳಿ ಬರೆಯಲಾಗಿತ್ತು.
ಸದ್ಯ ಈ ನಡಾವಳಿ ಪುಸ್ತಕ ನಾಪತ್ತೆಯಾಗಿರುವುದರ ಕುರಿತು ಗ್ರಾಮ ಪಂಚಾಯಿತಿ ಸದಸ್ಯರು ಪ್ರಶ್ನಿಸುತ್ತಿದ್ದು ಕಾರ್ಯದರ್ಶಿ ರತ್ನಮ್ಮ ಎಂಬುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅತ್ತ ರತ್ನಮ್ಮ ನಡಾವಳಿ ಪುಸ್ತಕವನ್ನು ನಮ್ಮ ಸುಪರ್ದಿಗೆ ಕೊಟ್ಟಿಲ್ಲ ಎಂದು ರತ್ನಮ್ಮ ಹೇಳುತ್ತಿದ್ದು, ಪುಸ್ತಕ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
* ರೈತರ ಕೈಗೆ ಸಿಗದ ಫಸಲು * ಸ್ಥಳಾಂತರಕ್ಕೆ ಅನುಮತಿ ನೀಡಲು ಅರಣ್ಯ ಇಲಾಖೆಯಿಂದ ಮನವಿ * ವಾನರ ಸೇನೆ…
ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…
ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…
ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…
ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…