ಜಿಲ್ಲೆಗಳು

ಕಾಯಕ ಮತ್ತು ದಾಸೋಹ ಸಮಾಜದ ಎರಡು ಕಣ್ಣುಗಳು – ದೇಚಿ

ಮೈಸೂರು : ನಗರದ ಪಡುವಲು ಶ್ರೀ ವಿರಕ್ತ ಮಠದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಬಿಡುಗಲು ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಸರಗೂರು  ಇವರ ವತಿಯಿಂದ ನಡೆದ  ದತ್ತಿ ಉಪನ್ಯಾಸ ಸಮಾರಂಭದಲ್ಲಿ ಪ್ರವಚನ ನೀಡಿದ ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ (ದೇಚಿ)ರವರು ಪರಿಶುದ್ಧ ಕಾಯಕದಿಂದ ಬಂದ ಹಣದಿಂದ ದಾಸೋಹವನ್ನು ನಡೆಸಬೇಕು, ಅದಕ್ಕಾಗಿಯೇ ೧೨ ನೇ ಶತಮಾನದ ಶರಣರು ಇಂದಿಗೂ ಜೀವಂತವಾಗಿದ್ದಾರೆ. ಕಾಯಕ ತತ್ವದ ಆಧಾರದ ಮೇಲೆ ನಿರ್ಮಾಣವಾದ ಶರಣ ಧರ್ಮ ದಾಸೋಹವೆಂಬ ಕರ್ತವ್ಯವನ್ನೂ ಬೋಧಿಸುತ್ತದೆ ಎಂದರು.

ಮುಂದುವರಿದು ಕಾಯಕ ತತ್ವದ ಆಧಾರದ ಮೇಲೆ ನಿರ್ಮಾಣವಾದ ಶರಣ ಧರ್ಮ ದಾಸೋಹವೆಂಬ ಕರ್ತವ್ಯವನ್ನೂ ಬೋಧಿಸುತ್ತದೆ. ಅನೇಕ ಶರಣರು ತಮ್ಮ ಹೆಸರುಗಳ ಹಿಂದೆ ತಮ್ಮ ತಮ್ಮ ಕಾಯಕದ ಹೆಸರನ್ನು ಬರೆದು ಕಾಯಕ ಸಮಾಜದ ಮಹತ್ವವನ್ನು ಸಾರಿದ್ದರು. ದಾಸೋಹವೆಂಬುದು ದಾನಕ್ಕಿಂತಲೂ ಶ್ರೇಷ್ಠ, ನಮ್ಮದು ದಾಸೋಹ ಪರಂಪರೆ, ದಾನವೆಂಬ ಪದಕ್ಕೆ ಜಾಗವಿರಕೂಡದು ಕಾರಣ ಈ ಜಗತ್ತಿನ ಏಕೈಕ ದಾನಿ ಮಹಾದೇವನೊಬ್ಬನೇ. ಹಾಗಾಗಿ ಕಾಯಕ ಮತ್ತು ದಾಸೋಹ ಎರಡೂ ಈ ಸಮಾಜದ ಕಣ್ಣುಗಳು ಎನ್ನುತ್ತಾ ಹಲವು ವಚನಗಳನ್ನು ನಿರ್ವಚನ ಮಾಡುತ್ತಾ ಶರಣ ಬಂಧುಗಳ ಮನ ಮುಟ್ಟಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಹೆಳವರಹುಂಡಿ ಸಿದ್ದಪ್ಪನವರು ತಮ್ಮ ಭಾಷಣದಲ್ಲಿ ಶರಣ ಬಂಧುಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡಬೇಕು. ಸುಧೀರ್ಘ ಇತಿಹಾಸವನ್ನು ಹೊಂದಿರುವ ನಮ್ಮ ಈ ಪರಂಪರೆಯ ಜನ ಅದರಲ್ಲೂ ಹೆಣ್ಣುಮಕ್ಕಳು ವಿಶೇಷ ಸಾಧನೆಯನ್ನು ಮಾಡಬೇಕು ಈ ಸಾಧನೆ ಮಾಡಲು ಮೊದಲು ಸ್ತ್ರೀ ಸಮಾನತೆಯನ್ನು ಕೊಟ್ಟ ಈ ಸಮಾಜದ ಪುರುಷರು ಸಹಕಾರ ನೀಡುವುದರೊಡನೆ ತಾವೂ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಎಂ. ಚಂದ್ರಶೇಖರ್ ರವರು ಶರಣ ಸಾಹಿತ್ಯ ಪರಿಷತ್ತು ಲಿಂಗೈಕ್ಯ ಜಗದ್ಗುರು ರಾಜಗುರು ತಿಲಕ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಕನಸಿನ ಕೂಸು. ಅವರ ಆಶಯವನ್ನು ಅವರ ಕರ ಕಮಲ ಸಂಜಾತ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಾಕಾರಗೊಳಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿದ್ಯವನ್ನು ಪಡುವಲು  ವಿರಕ್ತ ಮಠದ ಶ್ರೀಗಳಾದ ಮಹದೇವಸ್ವಾಮಿಗಳು ವಹಿಸಿದ್ದರು . ಕಾರ್ಯಕ್ರಮದಲ್ಲಿ ಸರಗೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ. ಗುರುಸ್ವಾಮಿರವರು ಮತ್ತು ತಿ.ನರಸೀಪುರ ತಾಲ್ಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ತೋಂಟೇಶ್ ರವರು ಹಾಜರಿದ್ದರು. ಕಾರ್ಯಕ್ರಮದ ನಂತರ ಮಹಾ ದಾಸೋಹ ನೆರವೇರಿತು.

andolanait

Recent Posts

ಓದುಗರ ಪತ್ರ: ಕುವೆಂಪು

ಕುವೆಂಪು ಮಲೆನಾಡಿನಲಿ ಹುಟ್ಟಿದರು ಮೈಸೂರಿಗೆ ಕಾಲಿಟ್ಟರು ಕವಿಯಾಗಿ ಕನ್ನಡದ ಮೊದಲ ಜ್ಞಾನಪೀಠ ಗಳಿಸಿದರು ಮೂಢನಂಬಿಕೆಯನು ಬದಿಗೊತ್ತಿ ವಿಜ್ಞಾನದ ಬೀಜ ಬಿತ್ತಿ…

1 hour ago

ಓದುಗರ ಪತ್ರ: ಮುಕ್ತ ವಿಶ್ವವಿದ್ಯಾಲಯದ ರಸ್ತೆ ದುರಸ್ತಿ ಮಾಡಿ

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಒಯು) ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಈ…

1 hour ago

ಓದುಗರ ಪತ್ರ: ರಸ್ತೆ ದುರಸ್ತಿ ಮಾಡಿ

ಹೆಗ್ಗಡದೇವನಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದಿಂದ ಜಿನ್ನಹಳ್ಳಿ -ಮಲಾರದಹುಂಡಿಗೆ ತೆರಳುವ ಮುಖ್ಯ ರಸ್ತೆ ಹಾಳಾಗಿದ್ದು, ವಿಪರೀತ ಹಳ್ಳ-ಕೊಳ್ಳಗಳಿಂದ ಕೂಡಿದೆ. ಹಲವಾರು ಬಾರಿ…

1 hour ago

ಓದುಗರ ಪತ್ರ: ಹೊಸ ವರ್ಷ ಆಚರಣೆ: ಇರಲಿ ಸಂಯಮ, ಗುರಿ

ಹೊಸ ವರ್ಷದ ಆಚರಣೆ ಡಿ.೩೧ರ ರಾತ್ರಿ ಮತ್ತು ಜನವರಿ ೧ ರಂದು ನಡೆಯುತ್ತದೆ. ಯುವ ಜನತೆಗೆ ಹೊಸ ವರ್ಷದ ಆಚರಣೆ…

1 hour ago

ಮಕ್ಕಳ ಪರೀಕ್ಷಾ ಸಿದ್ಧತೆಯಲ್ಲಿ ಪೋಷಕರ ಪಾತ್ರದ ಮಹತ್ವ

ಡಾ.ಪಿ.ಮಂಜುನಾಥ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರ ಅಗತ್ಯ  ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗಲಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ…

1 hour ago

ಸಾಧನೆಯ ಹಾದಿಯಲ್ಲಿ ಬೆಳೆದು ಬೆಳಗಿದವರು

೨೦೨೫ ನೇ ಸಾಲಿನಲ್ಲಿ ಹಲವಾರು ಸಾಧಕರು ಹೊರಹೊಮ್ಮಿದ್ದು, ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ,…

2 hours ago