ಹದಿನಾರು-ನಂಜನಗೂಡು-ಸರಗೂರು ರಸ್ತೆ ಸಂಪರ್ಕ
೨೭ ಕೋಟಿ ರೂ. ಅಂದಾಜು ವೆಚ್ಚ: ಸಂಪುಟ ಒಪ್ಪಿಗೆ
ಬೆಂಗಳೂರು: ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಮೈಸೂರು- ಹದಿನಾರು (ರಾಜ್ಯ ಹೆದ್ದಾರಿಯಾಗಿ ಮೇಲರ್ಜೆಗೇರಿಸಲಾಗಿದೆ) ಹಾಗೂ ಶಿರ-ನಂಜನಗೂಡು ರಸ್ತೆ (ರಾಜ್ಯ ಹೆದ್ದಾರಿ-೮೪)ಗೆ ಸಂಪರ್ಕಿಸಲು ಹದಿನಾರು ಮತ್ತು ಸರಗೂರು ರಸ್ತೆಯ ಮಾರ್ಗವಾಗಿ ಕಬಿನಿ ನದಿಗೆ ಅಡ್ಡಲಾಗಿ ರೂ. ೨೭ ಕೋಟಿಗಳ ಅಂದಾಜು ಮೊತ್ತದಲ್ಲಿ ಸೇತುವೆ ನಿರ್ಮಾಣದ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಗುರುವಾರ ನಡೆದ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸಿ. ಮಾಧುಸ್ವಾಮಿ ಮಾಹಿತಿ ನೀಡಿದರು.
ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ೩೯ ಮೊಕದ್ದಮೆಗಳನ್ನು ಹಿಂಪಡೆಯಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಹಿಂಪಡೆದುಕೊಂಡ ಮೊಕದ್ದಮೆಗಳು ಗಂಭೀರ ಸ್ವರೂಪದ್ದಲ್ಲ, ಜನ ಪರ ಹೋರಾಟದಲ್ಲಿ ಪಾಲ್ಗೊಂಡವರ ವಿರುದ್ಧ ದಾಖಲಾಗಿದ್ದ ಸಾಮಾನ್ಯ ಪ್ರಕರಣಗಳಾಗಿವೆ ಎಂದು ಸ್ಪಷ್ಟಪಡಿಸಿದರು.
ಒಟ್ಟು ೪೧ ಪ್ರಕರಣಗಳಲ್ಲಿ ೨ ಪ್ರಕರಣಗಳು ಜನ ಪ್ರತಿನಿಧಿ ಕಾಯ್ದೆ ವ್ಯಾಪ್ತಿಯಲ್ಲಿ ಇರುವುದರಿಂದ ಅವನ್ನು ವಾಪಸ್ ಪಡೆಯುತ್ತಿಲ್ಲ ಎಂದು ತಿಳಿಸಿದರು.
ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಭಾರತ ಸರ್ಕಾರವು ನಿಗದಿಪಡಿಸಿರುವ ವಾರ್ಗಸೂಚಿಗಳನ್ವಯ ಒಟ್ಟು ೪೨ ಅರ್ಹ ನಿರ್ದಿಷ್ಟ ವರ್ಗದ ಶಿಕ್ಷಾ ಬಂದಿಗಳನ್ನು ೨೬ನೇ ಜನವರಿ ೨೦೨೩ರ ಗಣರಾಜ್ಯೋತ್ಸವದ ಪ್ರಯುಕ್ತ ಎರಡನೇ ಹಂತದಲ್ಲಿ ವಿಶೇಷ ಮಾಫ್ಬಿತಿಯೊಂದಿಗೆ ಬಿಡುಗಡೆಗೆ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದರು.
ಸಂಪುಟ ಸಭೆಯಲ್ಲಿ ಕೈಗೊಂಡ ಇತರ ನಿರ್ಧಾರಗಳು
* ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ೩೯ ಮೊಕದ್ದಮೆಗಳು ರದ್ದು
* ಕರ್ನಾಟಕ ಯುವ ನೀತಿ-೨೦೨೨ ಕ್ಕೆ ಅನುಮೋದನೆ.
* ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ ನೋಂದಣಿ ಶುಲ್ಕ ರಿಯಾಯಿತಿ
* ೨೦+೧ ಕುರಿ/ಮೇಕೆ ಘಟಕಗಳನ್ನು ಅರ್ಹ ಕುರಿಗಾಹಿಗಳಿಗೆ ರೂ. ೧,೭೫,೦೦೦/- ೨೦,೦೦೦ ಘಟಕ ವೆಚ್ಚ ಸೇರಿದಂತೆ ಒಟ್ಟಾರೆ ರೂ ೩೫೪.೫೦ ಕೋಟಿಗಳ ವೆಚ್ಚದಲ್ಲಿ ‘‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ತಾತ್ವಿಕ ಆಡಳಿತಾತ್ಮಕ ಆದೇಶಕ್ಕೆ ಘಟನೋತ್ತರ ಅನುಮೋದನೆ.
* ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಒಲಿಂಪಿಕ್ಸ್, ೨೦೨೨ ಣ ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ವಿಜೇತರಾದ ವ್ಯಕ್ತಿಗಳನ್ನು ಕೆಲವು ಹುದ್ದೆಗಳಿಗೆ ಮಾಡುವ ನೇಮಕಾತಿ) (ವಿಶೇಷ) ನಿಯಮಗಳು, ೨೦೨೨‘ಕ್ಕೆ ಅನುಮೋದನೆ. ಸಿ ಮತ್ತು ಡಿ ಕೆಟಗರಿ ಹುದ್ದೆ.
ಕೆಲವು ಜನರು ತಮ್ಮ ಮನೆಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಸುರಿಯುವ ಮೂಲಕ ವಿರೂಪಗೊಳಿಸಿ ಸ್ವಚ್ಛ ಭಾರತದ ನಿಯಮವನ್ನು…
ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದು, ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮಹಿಳೆಯರು ಒಂದು…
ಕರ್ನಾಟಕದ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯ ಭಾಗವಾಗಿರುವ ಅನೇಕ ಅಮೂಲ್ಯವಾದ ಶಿಲ್ಪಗಳು ಬ್ರಿಟಿಷ್ ಮ್ಯೂಜಿಯಂ (ಲಂಡನ್), ಲೂವ್ರೇ ಮ್ಯೂಜಿಯಂ (ಪ್ಯಾರಿಸ್),…
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಪುಟ್ಟ ಗ್ರಾಮ ಬದನವಾಳುಗೆ ೧೯೨೭ಹಾಗೂ ೧೯೩೪ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭೇಟಿ ನೀಡಿ ಕೈಮಗ್ಗ…
ಪ್ರೊ.ಆರ್.ಎಂ.ಚಿಂತಾಮಣಿ ೨೦೨೫-೨೬ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಕೊನೆಯ ವೇಳೆಗೆ (ಡಿಸೆಂಬರ್೨೦೨೫) ದೇಶದಲ್ಲಿ ಉಪಭೋಗ (Consumption) ಮುಂದಾಗಿರುವ ಆರ್ಥಿಕ ಚಟುವಟಿಕೆಗಳು…
ಕೆ.ಬಿ.ರಮೇಶನಾಯಕ ದೇಶದಲ್ಲೇ ಹಲವು ಏಳು-ಬೀಳುಗಳು, ಸ್ಥಿತ್ಯಂತರವನ್ನು ಕಂಡ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಮುಖ್ಯಮಂತ್ರಿಯಾಗಿ…