ಮೈಸೂರಿನ ಪಡುವಾರಹಳ್ಳಿ ಸ್ನೇಹ ಬಳಗದಿಂದ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಏರ್ಪಡಿಸಿದ್ದ ಚಲನಚಿತ್ರ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲರ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಹಿರಿಯ ಸಾಹಿತಿ ಬನ್ನೂರು ಕೆ.ರಾಜು, ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ.ರಾಮಕೃಷ್ಣ, ಸಿ.ರೇವಣ್ಣ ಮುಂತಾದವರು ಹಾಜರಿದ್ದರು.
ಮೈಸೂರು: ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಹೆಸರಷ್ಟೇ ಪುಟ್ಟಣ್ಣನಾದರೂ ಬಣ್ಣದ ಲೋಕದ ದೈತ್ಯ ಪ್ರತಿಭೆಯಾಗಿದ್ದ ಅವರು ಬೆಳ್ಳಿತೆರೆಯ ದೊಡ್ಡಣ್ಣನೆಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.
ನಗರದ ಪಡುವಾರಹಳ್ಳಿ ಸ್ನೇಹ ಬಳಗದಿಂದ ಜಲದರ್ಶಿನಿ ಅತಿಥಿ ಗೃಹ ಆವರಣದಲ್ಲಿ ಏರ್ಪಡಿಸಿದ್ದ ಚಲನಚಿತ್ರ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪುಟ್ಟಣ್ಣನವರು ಖ್ಯಾತ ಚತ್ರೋದ್ಯಮಿ ಬಿ.ಆರ್. ಪಂತುಲು ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಪಳಗಿ ’ಬೆಳ್ಳಿಮೋಡ’ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ತಮ್ಮ ಚಿತ್ರ ಪುಂಣ ಆರಂಭಿಸಿ ’ಮಸಣದ ಹೂ’ ಚಿತ್ರದ ತನಕ ಅಮೂಲ್ಯವಾದ ೨೪ ಕನ್ನಡ ಚಿತ್ರಗಳನ್ನು ಹಾಗೂ ತಮಿಳಿನಲ್ಲಿ ಮೂರು, ತೆಲುಗಿನಲ್ಲಿ ಮೂರು, ಮಲಾಂಳಂನಲ್ಲಿ ಆರು, ಹಿಂದಿಯಲ್ಲಿ ಒಂದು ಸೇರಿದಂತೆ ಇತರೆ ಭಾಷೆಗಳಲ್ಲಿ ೧೩ ಚಿತ್ರಗಳನ್ನು ನಿರ್ದೇಶಿಸಿ ಪ್ರಖ್ಯಾತ ಬಹುಭಾಷಾ ಚಿತ್ರ ನಿರ್ದೇಶಕರೆಂದು ದೇಶದ ಗಮನ ಸೆಳೆದವರು ಎಂದರು.
ಪುಟ್ಟಣ್ಣನವರು ವಿಶೇಷವಾಗಿ ತಮ್ಮ ಚಿತ್ರದ ಹಾಡುಗಳಿಗೆ ಆದ್ಯತೆ ನೀಡುತ್ತಿದ್ದರು. ಚಿತ್ರಗೀತೆಯಲ್ಲಿ ಒಂದಕ್ಷರದ ರಾಜಿಗೂ ಅವರು ಒಪ್ಪುತ್ತಿರಲಿಲ್ಲ. ಅದಕ್ಕೆ ಅವರ ಪ್ರತಿಯೊಂದು ಚಿತ್ರಗಳ ಗೀತೆಗಳೂ ನಿತ್ಯ ಹರಿದ್ವರ್ಣ. ಅವುಗಳನ್ನು ಆಲಿಸಿದರೆ, ದೃಶ್ಯಕಾವ್ಯದಲ್ಲಿ ನೋಡಿದರೆ ಈ ಕ್ಷಣಕ್ಕೂ ರಸ ರೋಮಾಂಚನ ಎಂದು ಹೇಳಿದರು.
ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ. ರಾಮಕೃಷ್ಣ, ಸಿ.ರೇವಣ್ಣ, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಎಸ್. ಕೃಷ್ಣಕುಮಾರ್, ಬಿ.ಕುಮಾರ್, ಕೇಬಲ್ ಕಿಟ್ಟಿ, ಎಂ. ಶಿವಪ್ರಕಾಶ್, ರಾ. ಸಿದ್ಧರಾಮು, ಸುರೇಂದ್ರ ಕುಮಾರ್, ಸಿ. ಸಂತೋಷ್, ಈ.ಬಸವರಾಜು ಮುಂತಾದವರು ಹಾಜರಿದ್ದರು.
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಾರ್ಯನಿರ್ವಾಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ತಿಂಗಳಿಗೊಂದು ದಿನ ಋತುಚಕ್ರ ರಜೆ ನೀಡುವಂತೆ…
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತಸೌಕರ್ಯ ಮರಿಚಿಕೆಯಾಗಿದೆ ಎಂದು ಆರೋಪಿಸಿ ಸಂಶೋಧಕರು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟವು ಪ್ರತಿಭಟನೆ…
ಕೆ.ಆರ್.ನಗರ : ಪಟ್ಟಣದಲ್ಲಿ ಇಬ್ಬರು ಯುವಕರು ಮಾರುತಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ…