ಜಿಲ್ಲೆಗಳು

ಕಲ್ಕುಣಿಯಲ್ಲಿ ಪಾಳುಬಿದ್ದಿವೆ ಸರ್ಕಾರಿ ಕಚೇರಿಗಳು !

ಬಯಲು ಶೌಚಾಲಯವಾದ ಕಟ್ಟಡಗಳು; ಸ್ಥಳೀಯ ಆಡಳಿತಗಳ ಅಸಡ್ಡೆಗೆ ಆಕ್ರೋಶ

 

ಮಳವಳ್ಳಿ: ಸರ್ಕಾರ ಕಲ್ಕುಣಿಯ ಲ್ಲಿ ಜನರಿಗೆ ಸೌಲಭ್ಯ ನೀಡಲೆಂದು ನಿರ್ಮಿಸಿರುವ ಸರ್ಕಾರಿ ಕಚೇರಿಗಳ ಕಟ್ಟಡಗಳಲ್ಲಿ ಗಿಡ ಗಂಟಿಗಳು ಬೆಳೆದುಕೊಂಡು ಪಾಳು ಬಿದ್ದಿರುವುದಲ್ಲದೇ, ಅನೈತಿಕ ಚಟುವಟಿಕೆಗಳ ತಾಣವಾಗಿರುವ ಮಾರ್ಪಟ್ಟಿವೆ.

ಕಾವೇರಿ ನೀರಾವರಿ ನಿಗಮದ ಕಚೇರಿ

ಕಲ್ಕುಣಿ ಗ್ರಾಮದಲ್ಲಿ ೩೦ ವರ್ಷಗಳ ಹಿಂದೆೆಯೇ ಸರ್ಕಾರ ರೈತರಿಗೆ ನೆರವಾಗಲೆಂದು ಸುವಾರು ೧ ಎಕರೆಗೂ ಅಧಿಕ ಪ್ರದೇಶದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಯನ್ನು ನಿರ್ಮಿಸಿ ಅಲ್ಲಿ ಕೆಲಸ ವಾಡುವ ಅಧಿಕಾರಿಗಳಿಗೆ ವಸತಿ ಗೃಹಗಳನ್ನು ನಿರ್ಮಿಸಿಕೊಟ್ಟಿದೆ. ಆದರೆ ಈಗ ಅವುಗಳು ಪಾಳುಬಿದ್ದ ಕಟ್ಟಡವಾಗಿವೆ.

ಈ ಕಚೇರಿಗಳು ಬಳಸುವುದನ್ನು ನಿಲ್ಲಿಸಿ ಸುವಾರು ವರ್ಷಗಳೇ ಕಳೆದಿವೆ.

ನೀರಾವರಿ ಇಲಾಖೆಯಲ್ಲಿ ಅಧಿಕಾರಿಗಳು ಇದ್ದಾರೆ, ಆದರೆ ಕೆಲಸವೇ ಇಲ್ಲವೆಂಬಂತಾಗಿದೆ. ಇಲ್ಲಿ ಕೇವಲ ನೆಪವಾತ್ರಕ್ಕೆ ಒಂದು ಒಂದು ಕಚೇರಿ ತೆರೆದಿರುತ್ತದೆ. ಉಳಿದಂತೆ ಕಾಂರ್ುನಿರ್ವಹಿಸುವ ಇಂಜಿನಿಯರ್‌ಗಳು ಕಚೇರಿಗೆ ಹೋಗದೆ ಸಂಚಾರ ವಾಡುತ್ತಲೇ ಸರ್ಕಾರದ ಕೆಲಸ ವಾಡುತ್ತಾರೆ. ಆದರೆ ಈ ಕಚೇರಿಗಳು, ವಸತಿಗೃಹಗಳ ಆವರಣ ಬಯಲು ಶೌಚಾಲಯಕ್ಕೆ, ಖಾಸಗಿ ವ್ಯಕ್ತಿಗಳ ವಾಹನ ನಿಲ್ದಾಣಕ್ಕೆ, ಜೂಜುಕೋರರ ಅಡ್ಡೆಯಾಗಿ ಮಾರ್ಪಟ್ಟಿದೆ.

 

ಪಾಳುಬಿದ್ದಿರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿ:

ಕಂದಾಯ ಇಲಾಖೆ ಗ್ರಾಮೀಣ ಪ್ರದೇಶದ ಜನರಿಗೆ ಹತ್ತಿರದಲ್ಲೇ ಸೇವೆ ಸಿಗಲೆಂದು ಗ್ರಾಮ ಲೆಕ್ಕಾಧಿಕಾರಿಯ ಕಚೇರಿಯನ್ನು ಕಲ್ಕುಣಿ ಗ್ರಾಮದಲ್ಲೇ ನಿರ್ಮಿಸಿದ್ದಾರೆ.

ಆದರೆ ಇದರ ಉಪಯೋಗವಾಗುತ್ತಿಲ್ಲ. ಕೆಲಸ ವಾಡುವ ಗ್ರಾಮಲೆಕ್ಕಾಧಿಕಾರಿಗಳು ತಮಗೆ ಅನುಕೂಲವಾಗುವ ಸ್ಥಳದಲ್ಲೇ ಕಚೇರಿ ವಾಡಿಕೊಂಡು ಕೆಲಸ ನಿರ್ವಹಿಸುತ್ತಿರುವುದರಿಂದ ಈ ಸುಸಜ್ಜಿತ ಕಟ್ಟಡ ಗಿಡಗಂಟಿಗಳು ಬೆಳೆದುಕೊಂಡು ಪಾಳುಬಿದ್ದಿರುವುದಲ್ಲದೆ, ಸಾರ್ವಜನಿಕರ ಬಯಲು ಶೌಚಾಲಯಕ್ಕೆ ಬಳಕೆಯಾಗುತ್ತಿರುವುದು ವ್ಯವಸ್ಥೆಗೆ ಸಾಕ್ಷಿಯಾಗಿದೆ. ಇದಲ್ಲದೆ ಪಕ್ಕದಲ್ಲೇ ಇರುವ ಪಶು ಇಲಾಖೆy ಕಚೇರಿಯ ಪರಿಸ್ಥಿತಿಯೂ ಹೇಳತೀರದಾಗಿದೆ.

ಶಾಲೆಯ ಮುಂದೆ ಅಶುಚಿತ್ವ 

ಗ್ರಾಮದಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರಾರು ಮಕ್ಕಳು ವ್ಯಾಸಂಗ ಮಡುತ್ತಿದ್ದಾರೆ. ಶಾಲೆಗೆ ಕೌಂಪೌಂಡ್ ಸಹ ನಿರ್ಮಿಸಲಾಗಿದೆ. ಕೌಂಪೌಂಡ್ ಒಳಗೆ ಸ್ವಚ್ಛತೆ ಕಾಪಾಡಿರುವ ಶಿಕ್ಷಕರು ಶಾಲೆಯ ಮುಂಭಾಗದ ಆವರಣದ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಶಾಲೆಯ ಮುಂಭಾಗದ ರಸ್ತೆಯ ಆಜುಬಾಜು ಬಯಲು ಶೌಚಾಲಯ ಕ್ಕೆ ಬಳಕೆಯಾಗುತ್ತಿದೆ.

 

ಆರೋಗ್ಯ ಕೇಂದ್ರದ ಆರೋಗ್ಯವೇ ಸರಿಯಿಲ್ಲ

ಗ್ರಾಮದ ಸುತ್ತಮುತ್ತಲ ಜನರಿಗೆ ಆರೋಗ್ಯದ ಕಾಳಜಿ ವಹಿಸುವ ಪ್ರಾಥಮಿಕ ಆರೋಗ್ಯದ ಕೇಂದ್ರದ ಬಗ್ಗೆ ಕಾಳಜಿಯಿಲ್ಲದಿರುವುದು ಇಲ್ಲಿಯ ವ್ಯವಸ್ಥೆ ನೋಡಿದರಿಗೆ ತಿಳಿಯಲಿದೆ. ಜನರಿಗೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಬದಲಾವಣೆ ತರುವತ್ತ ಕೆಲಸ ನಿರ್ವಹಿಸಬೇಕಾದ ಆರೋಗ್ಯ ಕೇಂದ್ರದ ಆವರಣವೇ ಅನೈರ್ಮಲ್ಯದಿಂದ ಕೂಡಿದೆ.

ನ್ಯಾಯಾಲಯಕ್ಕೆ ದೂರು ನೀಡಲಾಗುವುದು

ಕಲ್ಕುಣಿ ಗ್ರಾಮದಲ್ಲಿ ತೀರಾ ಹಿಂದುಳಿದ ಬಡ ಜನರೇ ಹೆಚ್ಚಾಗಿ ವಾಸ ವಾಡುತ್ತಿದ್ದಾರೆ. ಇವರಿಗೆ ಅರಿವಿನ ಕೊರತೆ ಇದ್ದು, ಇದನ್ನೇ ಬಂಡವಾಳ ವಾಡಿಕೊಂಡಿರುವ ಅಧಿಕಾರಿಗಳು ನಿಂತಲ್ಲೇ ನಿಂತಿರುವ ಚರಂಡಿ ಸ್ವಚ್ಛತೆ ವಾಡಿಲ್ಲ.

ಇಡೀ ಗ್ರಾಮವೇ ಬಯಲು ಶೌಚಾಲಯವಾಗಿದೆ. ಕೊಳಚೆ ಮಲಮೂತ್ರದ ಚರಂಡಿ ನೀರು ದೊಡ್ಡಕೆರೆ-ಚಿಕ್ಕಕೆರೆಗಳಿಗೆ ಹೋಗುತ್ತಿದೆ. ಇದರಿಂದ ಗ್ರಾಮದ ಜನರಿಗೆ ಅನಾರೋಗ್ಯ ಹೆಚ್ಚಾಗಿದೆ. ಇಲ್ಲಿ ಕೆಲಸ ವಾಡುವ ಅಧಿಕಾರಿಗಳಿಗೆ ಕನಿಷ್ಠ ಜ್ಞಾನವೂ ಇಲ್ಲದಾಗಿದೆ. ಸರ್ಕಾರದಿಂದ ಬರುವ ಸೌಲಭ್ಯಗಳು ಉಳ್ಳವರ ಪಾಲಾಗಿವೆ. ಸಾವಾನ್ಯ ಜನರ ಪರಿಸ್ಥಿತಿ ಗಬ್ಬು ನಾರುತ್ತಿರುವ ವ್ಯವಸ್ಥೆಯಲ್ಲಿ ಬದುಕಬೇಕಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಗ್ರಾಮದ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಹಸಿರು ನ್ಯಾಯಾಲಯ ಅಧಿಕಾರಿಗಳ ವಿರುದ್ಧ ದೂರು ನೀಡಲಾಗುವುದು ಎನ್ನುತ್ತಾರೆ ಗ್ರಾಮದ ವೆಂಕಟಾಚಲಯ್ಯ


ಅಧಿಕಾರಿಗಳು ಕ್ರಮವಹಿಸಿಲ್ಲ

ಪಿ.ಎಂ. ನರೇಂದ್ರಸ್ವಾಮಿಯವರು ಸಚಿವರಾಗಿದ್ದಾಗ ಗ್ರಾಮದ ಕೊಳಚೆ ಮಲಮೂತ್ರದ, ಚರಂಡಿ ನೀರು ಪ್ರತ್ಯೇಕವಾಗಿ ಹೋಗಲು ಪೈಪ್‌ಲೈನ್ ವಾಡಿ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸಿದ್ದೆ. ನಂತರ ಸಾಧ್ಯವಾಗಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಚರಂಡಿ ಕೊಳಚೆ ನೀರಿನಿಂದ ಗಬ್ಬು ನಾರುತ್ತಿರುವ ಸಮಸ್ಯೆಯನ್ನು ಬಗೆಹರಿಸಿ ಎಂದು ಅಧಿಕಾರಿಗಳಿಗೆ ಮನವಿ ವಾಡಿದ್ದೆ. ಆದರೆ ಯಾರು ಬಗ್ಗೆ ಕ್ರಮ ವಹಿಸಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ಕೆ.ಜೆ.ದೇವರಾಜು

andolanait

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

16 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

18 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

18 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

18 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

18 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

22 hours ago