ಬಯಲು ಶೌಚಾಲಯವಾದ ಕಟ್ಟಡಗಳು; ಸ್ಥಳೀಯ ಆಡಳಿತಗಳ ಅಸಡ್ಡೆಗೆ ಆಕ್ರೋಶ
ಮಳವಳ್ಳಿ: ಸರ್ಕಾರ ಕಲ್ಕುಣಿಯ ಲ್ಲಿ ಜನರಿಗೆ ಸೌಲಭ್ಯ ನೀಡಲೆಂದು ನಿರ್ಮಿಸಿರುವ ಸರ್ಕಾರಿ ಕಚೇರಿಗಳ ಕಟ್ಟಡಗಳಲ್ಲಿ ಗಿಡ ಗಂಟಿಗಳು ಬೆಳೆದುಕೊಂಡು ಪಾಳು ಬಿದ್ದಿರುವುದಲ್ಲದೇ, ಅನೈತಿಕ ಚಟುವಟಿಕೆಗಳ ತಾಣವಾಗಿರುವ ಮಾರ್ಪಟ್ಟಿವೆ.
ಕಾವೇರಿ ನೀರಾವರಿ ನಿಗಮದ ಕಚೇರಿ
ಕಲ್ಕುಣಿ ಗ್ರಾಮದಲ್ಲಿ ೩೦ ವರ್ಷಗಳ ಹಿಂದೆೆಯೇ ಸರ್ಕಾರ ರೈತರಿಗೆ ನೆರವಾಗಲೆಂದು ಸುವಾರು ೧ ಎಕರೆಗೂ ಅಧಿಕ ಪ್ರದೇಶದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಯನ್ನು ನಿರ್ಮಿಸಿ ಅಲ್ಲಿ ಕೆಲಸ ವಾಡುವ ಅಧಿಕಾರಿಗಳಿಗೆ ವಸತಿ ಗೃಹಗಳನ್ನು ನಿರ್ಮಿಸಿಕೊಟ್ಟಿದೆ. ಆದರೆ ಈಗ ಅವುಗಳು ಪಾಳುಬಿದ್ದ ಕಟ್ಟಡವಾಗಿವೆ.
ಈ ಕಚೇರಿಗಳು ಬಳಸುವುದನ್ನು ನಿಲ್ಲಿಸಿ ಸುವಾರು ವರ್ಷಗಳೇ ಕಳೆದಿವೆ.
ನೀರಾವರಿ ಇಲಾಖೆಯಲ್ಲಿ ಅಧಿಕಾರಿಗಳು ಇದ್ದಾರೆ, ಆದರೆ ಕೆಲಸವೇ ಇಲ್ಲವೆಂಬಂತಾಗಿದೆ. ಇಲ್ಲಿ ಕೇವಲ ನೆಪವಾತ್ರಕ್ಕೆ ಒಂದು ಒಂದು ಕಚೇರಿ ತೆರೆದಿರುತ್ತದೆ. ಉಳಿದಂತೆ ಕಾಂರ್ುನಿರ್ವಹಿಸುವ ಇಂಜಿನಿಯರ್‌ಗಳು ಕಚೇರಿಗೆ ಹೋಗದೆ ಸಂಚಾರ ವಾಡುತ್ತಲೇ ಸರ್ಕಾರದ ಕೆಲಸ ವಾಡುತ್ತಾರೆ. ಆದರೆ ಈ ಕಚೇರಿಗಳು, ವಸತಿಗೃಹಗಳ ಆವರಣ ಬಯಲು ಶೌಚಾಲಯಕ್ಕೆ, ಖಾಸಗಿ ವ್ಯಕ್ತಿಗಳ ವಾಹನ ನಿಲ್ದಾಣಕ್ಕೆ, ಜೂಜುಕೋರರ ಅಡ್ಡೆಯಾಗಿ ಮಾರ್ಪಟ್ಟಿದೆ.
ಪಾಳುಬಿದ್ದಿರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿ:
ಕಂದಾಯ ಇಲಾಖೆ ಗ್ರಾಮೀಣ ಪ್ರದೇಶದ ಜನರಿಗೆ ಹತ್ತಿರದಲ್ಲೇ ಸೇವೆ ಸಿಗಲೆಂದು ಗ್ರಾಮ ಲೆಕ್ಕಾಧಿಕಾರಿಯ ಕಚೇರಿಯನ್ನು ಕಲ್ಕುಣಿ ಗ್ರಾಮದಲ್ಲೇ ನಿರ್ಮಿಸಿದ್ದಾರೆ.
ಆದರೆ ಇದರ ಉಪಯೋಗವಾಗುತ್ತಿಲ್ಲ. ಕೆಲಸ ವಾಡುವ ಗ್ರಾಮಲೆಕ್ಕಾಧಿಕಾರಿಗಳು ತಮಗೆ ಅನುಕೂಲವಾಗುವ ಸ್ಥಳದಲ್ಲೇ ಕಚೇರಿ ವಾಡಿಕೊಂಡು ಕೆಲಸ ನಿರ್ವಹಿಸುತ್ತಿರುವುದರಿಂದ ಈ ಸುಸಜ್ಜಿತ ಕಟ್ಟಡ ಗಿಡಗಂಟಿಗಳು ಬೆಳೆದುಕೊಂಡು ಪಾಳುಬಿದ್ದಿರುವುದಲ್ಲದೆ, ಸಾರ್ವಜನಿಕರ ಬಯಲು ಶೌಚಾಲಯಕ್ಕೆ ಬಳಕೆಯಾಗುತ್ತಿರುವುದು ವ್ಯವಸ್ಥೆಗೆ ಸಾಕ್ಷಿಯಾಗಿದೆ. ಇದಲ್ಲದೆ ಪಕ್ಕದಲ್ಲೇ ಇರುವ ಪಶು ಇಲಾಖೆy ಕಚೇರಿಯ ಪರಿಸ್ಥಿತಿಯೂ ಹೇಳತೀರದಾಗಿದೆ.
ಶಾಲೆಯ ಮುಂದೆ ಅಶುಚಿತ್ವ
ಗ್ರಾಮದಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರಾರು ಮಕ್ಕಳು ವ್ಯಾಸಂಗ ಮಡುತ್ತಿದ್ದಾರೆ. ಶಾಲೆಗೆ ಕೌಂಪೌಂಡ್ ಸಹ ನಿರ್ಮಿಸಲಾಗಿದೆ. ಕೌಂಪೌಂಡ್ ಒಳಗೆ ಸ್ವಚ್ಛತೆ ಕಾಪಾಡಿರುವ ಶಿಕ್ಷಕರು ಶಾಲೆಯ ಮುಂಭಾಗದ ಆವರಣದ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಶಾಲೆಯ ಮುಂಭಾಗದ ರಸ್ತೆಯ ಆಜುಬಾಜು ಬಯಲು ಶೌಚಾಲಯ ಕ್ಕೆ ಬಳಕೆಯಾಗುತ್ತಿದೆ.
ಆರೋಗ್ಯ ಕೇಂದ್ರದ ಆರೋಗ್ಯವೇ ಸರಿಯಿಲ್ಲ
ಗ್ರಾಮದ ಸುತ್ತಮುತ್ತಲ ಜನರಿಗೆ ಆರೋಗ್ಯದ ಕಾಳಜಿ ವಹಿಸುವ ಪ್ರಾಥಮಿಕ ಆರೋಗ್ಯದ ಕೇಂದ್ರದ ಬಗ್ಗೆ ಕಾಳಜಿಯಿಲ್ಲದಿರುವುದು ಇಲ್ಲಿಯ ವ್ಯವಸ್ಥೆ ನೋಡಿದರಿಗೆ ತಿಳಿಯಲಿದೆ. ಜನರಿಗೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಬದಲಾವಣೆ ತರುವತ್ತ ಕೆಲಸ ನಿರ್ವಹಿಸಬೇಕಾದ ಆರೋಗ್ಯ ಕೇಂದ್ರದ ಆವರಣವೇ ಅನೈರ್ಮಲ್ಯದಿಂದ ಕೂಡಿದೆ.
ನ್ಯಾಯಾಲಯಕ್ಕೆ ದೂರು ನೀಡಲಾಗುವುದು
ಕಲ್ಕುಣಿ ಗ್ರಾಮದಲ್ಲಿ ತೀರಾ ಹಿಂದುಳಿದ ಬಡ ಜನರೇ ಹೆಚ್ಚಾಗಿ ವಾಸ ವಾಡುತ್ತಿದ್ದಾರೆ. ಇವರಿಗೆ ಅರಿವಿನ ಕೊರತೆ ಇದ್ದು, ಇದನ್ನೇ ಬಂಡವಾಳ ವಾಡಿಕೊಂಡಿರುವ ಅಧಿಕಾರಿಗಳು ನಿಂತಲ್ಲೇ ನಿಂತಿರುವ ಚರಂಡಿ ಸ್ವಚ್ಛತೆ ವಾಡಿಲ್ಲ.
ಇಡೀ ಗ್ರಾಮವೇ ಬಯಲು ಶೌಚಾಲಯವಾಗಿದೆ. ಕೊಳಚೆ ಮಲಮೂತ್ರದ ಚರಂಡಿ ನೀರು ದೊಡ್ಡಕೆರೆ-ಚಿಕ್ಕಕೆರೆಗಳಿಗೆ ಹೋಗುತ್ತಿದೆ. ಇದರಿಂದ ಗ್ರಾಮದ ಜನರಿಗೆ ಅನಾರೋಗ್ಯ ಹೆಚ್ಚಾಗಿದೆ. ಇಲ್ಲಿ ಕೆಲಸ ವಾಡುವ ಅಧಿಕಾರಿಗಳಿಗೆ ಕನಿಷ್ಠ ಜ್ಞಾನವೂ ಇಲ್ಲದಾಗಿದೆ. ಸರ್ಕಾರದಿಂದ ಬರುವ ಸೌಲಭ್ಯಗಳು ಉಳ್ಳವರ ಪಾಲಾಗಿವೆ. ಸಾವಾನ್ಯ ಜನರ ಪರಿಸ್ಥಿತಿ ಗಬ್ಬು ನಾರುತ್ತಿರುವ ವ್ಯವಸ್ಥೆಯಲ್ಲಿ ಬದುಕಬೇಕಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಗ್ರಾಮದ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಹಸಿರು ನ್ಯಾಯಾಲಯ ಅಧಿಕಾರಿಗಳ ವಿರುದ್ಧ ದೂರು ನೀಡಲಾಗುವುದು ಎನ್ನುತ್ತಾರೆ ಗ್ರಾಮದ ವೆಂಕಟಾಚಲಯ್ಯ
ಅಧಿಕಾರಿಗಳು ಕ್ರಮವಹಿಸಿಲ್ಲ
ಪಿ.ಎಂ. ನರೇಂದ್ರಸ್ವಾಮಿಯವರು ಸಚಿವರಾಗಿದ್ದಾಗ ಗ್ರಾಮದ ಕೊಳಚೆ ಮಲಮೂತ್ರದ, ಚರಂಡಿ ನೀರು ಪ್ರತ್ಯೇಕವಾಗಿ ಹೋಗಲು ಪೈಪ್‌ಲೈನ್ ವಾಡಿ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸಿದ್ದೆ. ನಂತರ ಸಾಧ್ಯವಾಗಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಚರಂಡಿ ಕೊಳಚೆ ನೀರಿನಿಂದ ಗಬ್ಬು ನಾರುತ್ತಿರುವ ಸಮಸ್ಯೆಯನ್ನು ಬಗೆಹರಿಸಿ ಎಂದು ಅಧಿಕಾರಿಗಳಿಗೆ ಮನವಿ ವಾಡಿದ್ದೆ. ಆದರೆ ಯಾರು ಬಗ್ಗೆ ಕ್ರಮ ವಹಿಸಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ಕೆ.ಜೆ.ದೇವರಾಜು
ಮೈಸೂರು: ಹೊಸ ವರ್ಷ 2025ರ ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನತೆ ಸಂಭ್ರಮಾಚರಣೆ ಮಾಡಲು…
ಹಾಸನ/ಸಕಲೇಶಪುರ: ಕೇಂದ್ರ ಸರ್ಕಾರದ ನೆರವಿನೊಂದಿಗೆ ಕಾಫಿ ಬೆಳೆಗಾರರಿಗೆ ಪರಿಹಾರಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದಾರೆ. ಹಾಸನ…
ಬೆಂಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ಬೆಳಗಾವಿ ಚಲೋ ನಡೆಸಲು ಮುಂದಾಗಿದೆ. ಈ ಬಗ್ಗೆ…
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…