ಚಾಮರಾಜನಗರ : ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯು ಈ ಭಾಗದ ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹೇಳಿದರು.
ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಕಾಮಗೆರೆಯಲ್ಲಿರುವ ಹೋಲಿಕ್ರಾಸ್ ನರ್ಸಿಂಗ್ ಕಾಲೇಜಿನ ರಜತಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಾವು ಕಚ್ಚುವ ಪ್ರಕರಣ, ಅಪಘಾತ ಸೇರಿದಂತೆ ಯಾವುದೇ ಪ್ರಕರಣ ನಡೆದರೂ ಮೊದಲು ಜನ ಹೋಲಿಕ್ರಾಸ್ ಆಸ್ಪತ್ರೆಯೆಡೆಗೆ ಬರುತ್ತಾರೆ. ಇಲ್ಲಿನ ಸಿಬ್ಬಂದಿ ಸೇವಾ ಮನೋಭಾವದಿಂದಲೇ ನೋಡುತ್ತಾರೆ. ಇದರಿಂದಲೇ ಈ ಸಂಸ್ಥೆ ಬಗ್ಗೆ ಜನರಲ್ಲೂ ಸದಾಭಿಪ್ರಾಯವಿದೆ ಎಂದು ನುಡಿದರು.
ಮಕ್ಕಳ ತಜ್ಞ ಡಾ.ಶಿವು ಮಾತನಾಡಿ, ಈ ಭಾಗದಲ್ಲಿ ನಾನು ಕೆಲಸ ಮಾಡಿದ್ದೇನೆ. ಚಿಕಿತ್ಸೆ ವಿಚಾರದಲ್ಲಿ ಹೋಲಿಕ್ರಾಸ್ ಸಂಸ್ಥೆಯ ಸಿಬ್ಬಂದಿ ಸೇವೆ ಸ್ಮರಣೀಯ. ಇಂಥ ಮನೋಭಾವದಿಂದಲೇ ಯಾವುದೇ ಸಂಸ್ಥೆ ಬೆಳೆಯಲು ಸಾಧ್ಯ ಎಂದು ಹೇಳಿದರು.
ಕೊಳ್ಳೇಗಾಲ ಪಿಎಸ್‌ಐ ಬಿ.ಸಿ.ಮಂಜುನಾಥ್ ಮಾತನಾಡಿ, ಗ್ರಾಮಾಂತರ ವ್ಯಾಪ್ತಿಯಲ್ಲಿ ಯಾವುದೇ ತುರ್ತು ಪ್ರಕರಣವಿದ್ದಾಗ ನಾವು ಹೋಲಿಕ್ರಾಸ್ ಸಂಸ್ಥೆ ಸಂಪರ್ಕಿಸುತ್ತೇವೆ. ಮೊದಲು ಇಲ್ಲಿ ಸೇವೆ ಪಡೆದವರು ನಂತರ ಬೇರೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಹೋಗುತ್ತಾರೆ. ಪೊಲೀಸ್ ಇಲಾಖೆಯ ಹೆಚ್ಚಿನ ಪ್ರಕರಣಗಳಿಗೆ ಇಲ್ಲಿಯೇ ಚಿಕಿತ್ಸೆ ಸಿಗುವುದನ್ನು ನಾನೇ ನೋಡಿದ್ದೇನೆ ಎಂದು ಶ್ಲಾಘಿಸಿದರ
ಕಾರ್ಯಕ್ರಮದಲ್ಲಿ ಮೈಸೂರು ಬಿಷಪ್ ಥಾಮಸ್ ವಾಜಪಿಳ್ಳೈ, ಆರೋಗ್ಯ ವಿವಿ ಸೆನೆಟ್ ಸದಸ್ಯರಾದ ಡಾ.ಬಿಂದು ಮ್ಯಾಥ್ಯು, ಕಾಂಗ್ರೆಸ್ ಮುಖಂಡ ಪುಟ್ಟರಾಜು, ಶಿನಿಜೋಸ್, ಫಾದರ್ ಶಾಂತರಾಜ್, ಪ್ರಾಂಶುಪಾಲರಾದ ಲೂಸಿ ಜಾನ್ ಮತ್ತಿತರರು ಹಾಜರಿದ್ದರು.
ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…
ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…
ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…
ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…
ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…