ಮೈಸೂರು: ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಿರುವ ಕಾರಣ, ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ದೇಶದಲ್ಲಿ ಸಾಕಷ್ಟು ಸಂಪತ್ತಿದ್ದರೂ, ಪರಸ್ಪರ ಕಚ್ಚಾಟದಿಂದ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಲಯನ್ಸ್ ಕ್ಲಬ್‌ನ ಪಿಎಂಜೆಎಫ್ ಡಾ.ನಾಗರಾಜು.ವಿ.ಬೈರಿ ತಿಳಿಸಿದರು.
ನಗರದ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಮೈಸೂರಿನ ಲಯನ್ಸ್ ಕ್ಲಬ್ ಜೆ.ಪಿ.ನಗರ ಘಟಕ ಹಾಗೂ ಎಸ್ಎಂಪಿ ಡೆವಲಪರ್ಸ್ ಜೆ.ಪಿ.ನಗರ ಘಟಕದಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ವಪಲ್ಲಿ ರಾಧಾಕೃಷ್ಣ ಅವರು ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ಬಂದಿದ್ದ ವೇಳೆ ಆ ವಿಷಯ ಕಲಿಯಲು ಯಾರು ಬರುವುದಿಲ್ಲ ಎಂದು ಅಪಹಾಸ್ಯ ಮಾಡಿದ್ದರು. ಇಲ್ಲಿಂದ ಬೀಳ್ಕೊಡುವ ವೇಳೆ, ಸಾರೋಟಿನಲ್ಲಿ ಅವರನ್ನು ಕೂರಿಸಿ ವಿದ್ಯಾರ್ಥಿಗಳೇ ಅದನ್ನು ಎಳೆದೊಯ್ದು, ರೈಲು ನಿಲ್ದಾಣಕ್ಕೆ ಬಿಟ್ಟುಬಂದಿದ್ದರು. ಅಷ್ಟರ ಮಟ್ಟಿಗೆ, ಎಲ್ಲ ವರ್ಗದ ವಿದ್ಯಾರ್ಥಿಗಳಿಂದ ಜನಪ್ರಿಯತೆ ಪಡೆದುಕೊಂಡಿದ್ದರು.
ಸರ್‌ಎಂವಿ ವಿಶ್ವೇಶ್ವರಯ್ಯ ಅವರು ಭಾರತದ ಜೊತೆಗೆ, ಪಾಕಿಸ್ತಾನ, ನೇಪಾಳದಲ್ಲೂ ಅನೇಕ ಜನಪರ ಕಾರ್ಯ ಜಾರಿಗೊಳಿಸಿ, ಅಲ್ಲಿನ ಜನರ ಗೌರವಕ್ಕೆ ಪಾತ್ರರಾಗಿದ್ದರು. ಎಲ್ಲರೂ ಪ್ರಾತ ಸ್ಮರಣೀಯರು’ ಎಂದು ನೆನಪಿಸಿಕೊಂಡರು.
ಕೆಎಎಸ್ ಪರೀಕ್ಷೆಯಲ್ಲಿ ಮೂರನೇ ರ‍್ಯಾಂಕ್ ಪಡೆದ ಕಾವ್ಯಾ, ಶಿಕ್ಷಕರಾದ ಕೆಂಪಣ್ಣ, ಗುರುಪಾದಪ್ಪ, ಶಾರದಮ್ಮ, ಆಶಾರಾಣಿ, ಇಂಜಿನಿಯರ್ ಗಳಾದ ಷಣ್ಮಖಪ್ಪ, ವಿ.ಸತ್ಯನಾರಾಯಣ, ಪ್ರಶಾಂತ ಕುಮಾರ್, ವೈದ್ಯರಾದ ಡಾ.ಯೋಗೇಶ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ರೇಣುಕಪ್ಪ, ಸರೋಜಮ್ಮ, ಮಂಜಯ್ಯ ದಂಪತಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂತೀಯ 9ರ ಅಧ್ಯಕ್ಷೆ ಲಯನ್ಸ್ ರತ್ನಮ್ಮ, ಜೆ.ಪಿ.ನಗರ ವಾರ್ಡ್‌ನ ನಗರ ಪಾಲಿಕೆ ಸದಸ್ಯೆ ಶಾರದಮ್ಮ ಈಶ್ವರ್, ಜೆ.ಪಿ.ನಗರ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಯು.ಎಸ್.ಸದಾಶಿವ, ಜೆ.ಪಿ.ನಗರ ಲಯನ್ಸ್ ಕ್ಲಬ್‌ನ ಖಜಾಂಚಿ ಬಿ.ಮಲ್ಲಿಕಾರ್ಜುನಪ್ಪ, ಎಸ್‌ಎಂಪಿ ಡೆವಲಪರ್ಸ್‌ನ ಮಾಲೀಕ ಎಸ್.ಎಂ.ಶಿವಪ್ರಕಾಶ್ ಇದ್ದರು..
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…