ಕೊಲೆ ಆರೋಪ; ಪತಿ ವಿರುದ್ಧ ದೂರು
ಮೈಸೂರು: ಜಿಮ್ ಟ್ರೈನರ್ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ ಆರೋಪದಲ್ಲಿ ಅವರ ಪತಿ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯಗಿರಿಯ ರೆಹಮಾನ್ ರಸ್ತೆಯ ನಿವಾಸಿ ತರನುಮ್ ಖಾನಂ(೨೨) ಅವರೇ ಮೃತಪಟ್ಟವರು. ಇವರ ಪತಿ ಸೈಯದ್ ಉಮರ್ ಮತ್ತು ಅಮೀನ್ ಬಾನು (ಉಮರ್ ಅವರ ಅಕ್ಕ) ವಿರುದ್ಧ ತರನುಮ್ ತಾಯಿ ನಾಜೀಮಾ ದೂರು ನೀಡಿದ್ದಾರೆ.
ತರನುಮ್ ಖಾನಂ ಅವರನ್ನು ೨೦೧೯ರಲ್ಲಿ ಸೈಯದ್ ಉಮರ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ ೭ ಲಕ್ಷ ರೂ.ಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಚಿನ್ನ ಕೊಡುವಂತೆ ಕೇಳಿದಾಗ ಇದಕ್ಕೆ ೬.೫೦ ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿ, ಮದುವೆಗೂ ಎರಡು ತಿಂಗಳ ಮುಂಚೆ ೫ ಲಕ್ಷ ರೂ. ನೀಡಲಾಗಿತ್ತು. ಈಗ ಈ ದಂಪತಿಗೆ ೧೧ ತಿಂಗಳ ಗಂಡು ಮಗು ಇದೆ.
ಒಂದು ವರ್ಷದ ಹಿಂದೆ ಜಿಮ್ ಆರಂಭಿಸಿದ್ದ ಸೈಯದ್ ಉಮರ್ ಅದರ ನಿರ್ವಹಣೆಗೆ ಹಣ ತರುವಂತೆ ಪತ್ನಿಗೆ ದೈಹಿಕ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಹಿರಿಯರ ಸಮ್ಮುಖದಲ್ಲಿ ನ್ಯಾಯ ಮಾಡಿ ಉಮರ್‌ಗೆ ಬುದ್ಧಿವಾದ ಹೇಳಿ, ಪತ್ನಿಯನ್ನು ಮನೆಗೆ ಕಳುಹಿಸಲಾಗಿತ್ತು. ಆ ನಂತರವೂ ಕಿರುಕುಳ ನೀಡುವುದನ್ನು ನಿಲ್ಲಿಸದ ಉಮರ್ ನ.೧೦ರಂದು ತಡರಾತ್ರಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನನ್ವಯ ಉದಯಗಿರಿ ಠಾಣೆಯಲ್ಲಿ ವರದಕ್ಷಿಣೆ ನಿಷೇಧ ಕಾಯಿದೆ ೧೯೬೨ ಮತ್ತು ಸೆಕ್ಷನ್ ೩೦೨ ಅಡಿ ಪ್ರಕರಣ ದಾಖಲಾಗಿದೆ.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…