ಮೈಸೂರು : ಹೆಚ್.ಡಿ.ಕೋಟೆ ತಾಲ್ಲೂಕಿನ ಹೊಸಹಳ್ಳಿ ಹಾಡಿಯ ಗಿರಿಜನ ನಿವಾಸಿ, ಕರಿಯಪ್ಪ ಚಂದ್ರು ಎನ್ನುವ ವ್ಯಕ್ತಿಯನ್ನು ಜಿಂಕೆ ಮಾಂಸ ಮಾರಾಟ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳು ಬಂಧಿಸಿ ಆತನಿಗೆ ಕಿರುಕುಳ ಕೊಟ್ಟು, ಕೊಲೆ ಮಾಡಲಾಗಿದೆ ಎಂದು ಇದು ಅಮಾನವೀಯ ಘಟನೆಯಾಗಿದ್ದು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಿಪಿಐ(ಎಂ), ಮೈಸೂರು ಜಿಲ್ಲಾ ಸಮಿತಿ ಹೇಳಿದೆ.
ಘಟನೆಯ ಕುರಿತು ಕಾರ್ಯದರ್ಶಿ ಜಗದೀಶ್ ಸೂರ್ಯ ಅವರು ಹೇಳಿಕೆ ನೀಡಿದ್ದು, ಜಮೀನಿನಲ್ಲಿ ಕೃಷಿಯಲ್ಲಿ ನಿರತರಾಗಿದ್ದ ಕರಿಯಪ್ಪ ಚಂದ್ರು, ಜಿಂಕೆ ಕೊಂದು ಮಾರಾಟ ಮಾಡಿದ್ದ ಎಂಬ ಆಪಾಧನೆ ಹೊಡೆಸಿ, ಆತ ನಿಪರಾಧಿ ಎಂದು ಅಲವತ್ತುಕೊಂಡರೂ ಬಿಡದೇ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಆದಿವಾಸಿ ಜೇನು ಕುರುಬ ಸಮುದಾಯಕ್ಕೆ ಸೇರಿದ ಕೊಲೆ ಮಾಡಲಾದ ವ್ಯಕ್ತಿಯನ್ನು ಸುಮಾರು 13 ದಿನಗಳ ಕಾಲ ವಿಚಾರಣೆ ನೆಪದಲ್ಲಿ ತಮ್ಮ ಸುಪರ್ಧಿಯಲ್ಲಿ ಇಟ್ಟುಕೊಂಡಿದ್ದ. ಗುಂಡೇ ಅರಣ್ಯ ವ್ಯಾಪ್ತಿಯ ಅರಣ್ಯ ಅಧಿಕಾರಿಗಳು ಆತನ ಮೇಲೆ ದೈಹಿಕವಾಗಿ ತೀವ್ರ ಹಲ್ಲೆಯನ್ನು ನಡೆಸಿದ್ದಾರೆ. ತನಿಖೆ ಮಾಡಲು ಬೇರೆ ಹಲವಾರು ವಿಧಾನಗಳಿದ್ದರೂ ದೈಹಿಕ ಹಿಂಸೆಯಂತಹ ಅಮಾನುಷ ಕೃತ್ಯಕ್ಕೆ ಸಿಬ್ಬಂದಿ ಮುಂದಾಗಿರುವುದನ್ನು ಪಕ್ಷವು ಖಂಡಿಸುತ್ತದೆ. ಮೃತ ವ್ಯಕ್ತಿಯ ತಾಯಿ ಮಗನನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾಳೆ. ಕಾಡಿನ ಮೇಲಿನ ತಮ್ಮ ಹಕ್ಕನ್ನು ಅವಕಾಶ ನೀಡುವ ಅರಣ್ಯ ಹಕ್ಕುಗಳ ಕಾಯ್ದೆ-2006 ಬಂದ ಮೇಲೂ ಕಾಡಿನ ಹಕ್ಕನ್ನು ಚಲಾಯಿಸುವಲ್ಲಿ ಅಸಮರ್ಥರಾಗಿದ್ದು, ನಮ್ಮ ರಾಜ್ಯದ ಯಾವ ಸರ್ಕಾರವೂ ಈ ಕಾಯ್ದೆಯ ಜಾರಿಗೆ ಗಂಭೀರ ಪ್ರಯತ್ನವನ್ನು ಮಾಡಿಲ್ಲ ಎಂದು ಪಕ್ಷವು ಆಪಾದಿಸುತ್ತದೆ. ಅರಣ್ಯ ಪ್ರದೆಶವನ್ನು ಪ್ರವೇಶಿಸುವ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವ ಅವಕಾಶವನ್ನು ಅರಣ್ಯ ಹಕ್ಕು ಕಾಯ್ದೆ ನೀಡಿದ್ದು, ಗಿರಿಜನರಿಗೆ ಅರಣ್ಯ ಸಿಬ್ಬಂದಿಯು ಕಿರುಕುಳ ನೀಡುವ ಹಲ್ಲೆ ಮಾಡುವ ಪ್ರಕರಣಗಳು ವರದಿಯಾಗುತ್ತಲೇ ಇರುವುದು ಖಂಡನೀಯವಾಗಿದೆ. ಈಗಲೂ ಕೊಲೆಯಂತಹ ಕೃತ್ಯಕ್ಕೆ ಅರಣ್ಯ ಸಿಬ್ಬಂದಿ ಮುಂದಾಗಿರುವುದು ಯಾವ ಕಾರಣಕ್ಕೂ ಸಹಿಸಲು ಅಸಾಧ್ಯವಾಗಿದೆ. ಯಾವ ದೂರು ಬಂದಿಲ್ಲ ಎಂದು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲು ಮುಂದಾಗದಿರುವುದು ಸರಿಯಲ್ಲ. ಗಿರಿಜನ ವ್ಯಕ್ತಿಯನ್ನು ಕೊಲೆ ಮಾಡಿರುವ ಅರಣ್ಯ ಅಧಿಕಾರಿ ಸಿಬ್ಬಂದಿಗಳನ್ನು ತಕ್ಷನ ಬಂಧಿಸಿ, ನ್ಯಾಯ ದೊರಕಿಸಬೇಕು ಮತ್ತು ಮೃತ ವ್ಯಕ್ತಿಯ ಕುಟುಂಬಕ್ಕೆ ಜೀವನಾಧಾರವನ್ನು ಕಲ್ಪಿಸಬೇಕೆಂದು ಎಂದು ಸಿ.ಪಿ.ಐ.(ಎಂ) ಪಕ್ಷವು ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ.
ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ : ಸಿಎಂ ಸಿದ್ದರಾಮಯ್ಯ ಆಕ್ರೋಶ ಬೆಂಗಳೂರು : ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ…
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ ವಾಪಸ್ ದ್ವೇಷ ಭಾಷಣ, ಅಪರಾಧಗಳ ಪ್ರತಿಬಂಧಕ ಮಸೂದೆಯೂ ಹಿಂದಕ್ಕೆ ಬೆಂಗಳೂರು :…
ಎರಡು ದಶಕಗಳ ಕೂಗು,ಬೇಡಿಕೆ ಈಡೇರಿಕೆ ಮೈಸೂರು : ಮೈಸೂರಿನ ಲಕ್ಷಾಂತರ ಜನರ ಎರಡು ದಶಕದ ಕನಸು, ಬೇಡಿಕೆ ನನಸಾಗುವ ಕಾಲ…
ಬೆಂಗಳೂರು : ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ…
ನಂಜನಗೂಡು : ಎರಡು ವರ್ಷಗಳಿಂದ ಪತ್ನಿಯಿಂದ ದೂರವಾಗಿದ್ದ ಪತಿ ರಾತ್ರೋರಾತ್ರಿ ದಿಢೀರನೆ ಪ್ರತ್ಯಕ್ಷವಾಗಿ ಪತ್ನಿಯನ್ನು ಕೊಂದಿರುವ ಘಟನೆ ನಂಜನಗೂಡು ತಾಲೂಕಿನ…
ನಂಜನಗೂಡು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಆದಷ್ಟು ಬೇಗ ಸಮಸ್ಯೆಗಳಿಗೆ ಸ್ಪಂದಿಸುವ…