ಮೈಸೂರು:ವಿದ್ಯುತ್ ತಂತಿ ತುಳಿದು ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಪರಿಹಾರ ನೀಡಲು ಸೂಚಿಸಲಾಗಿದ್ದು. ವಿದ್ಯುತ್ ಮಾರ್ಗ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಲ್ಲೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ( ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಜಯವಿಭಯಸ್ವಾಮಿ ತಿಳಿಸಿದ್ದಾರೆ.
ಬೆಳಗಿನ ಜಾವ ೪ರಿಂದ ಬೆಳಗ್ಗೆ ೧೧ರವರೆಗೆ ಪಂಪ್‌ಸೆಟ್‌ಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ವೇಳೆ ರೈತರು ಸಹಜವಾಗಿ ಜಮೀನು ಕಡೆ ಬರುತ್ತಾರೆ. ಈ ರೀತಿ ಬಂದಾಗಲೇ ತಿ.ನರಸೀಪುರ ತಾಲ್ಲೂಕಿನ ನಿಲಸೋಗೆಯಲ್ಲಿ ದುರಂತ ನಡೆದಿದೆ. ಇದು ಎಲ್‌ಟಿ ಮಾರ್ಗವಾಗಿರುವುದರಿಂದ ಅಷ್ಟಾಗಿ ವಿದ್ಯುತ್ ಪ್ರವಾಹ ಇರುವುದಿಲ್ಲ. ಆದರೂ ದುರಂತ ಸಂಭವಿಸಿರುವುದು ವಿಷಾದನೀಯ.ಎಲೆಕ್ಟ್ರಿಕಲ್ ವಿಭಾಗದವರು ತನಿಖೆ ನಡೆಸಿ ನೀಡುವ ವರದಿ ಆಧರಿಸಿ ನಮ್ಮವರ ತಪ್ಪಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವರ್ಷಕ್ಕೆ ಸೆಸ್ಕ್ ವ್ಯಾಪ್ತಿಯಲ್ಲೇ ೭೦ರಿಂದ ೮೦ ಮಂದಿ ವಿದ್ಯುತ್ ಶಾಕ್‌ನಿಂದ ಮೃತಪಡುತ್ತಿದ್ದಾರೆ. ಗಾಯಗೊಳ್ಳುವ ಪ್ರಕರಣಗಳ ಸಂಖ್ಯೆ ೧೫೦ಕ್ಕೂ ಹೆಚ್ಚಿದೆ. ಮುನ್ನೆಚ್ಚರಿಕೆ ವಹಿಸಿ ಜಾಗೃತಿ ಮೂಡಿಸಿದರೂ ಘಟನೆಗಳು ನಡೆಯುತ್ತಿವೆ. ಆದರೆ ಸೆಸ್ಕ್‌ನ ೧೭ ವರ್ಷದ ಇತಿಹಾಸದಲ್ಲಿ ಈವರೆಗೂ ಒಂದೇ ಕಡೆ ವಿದ್ಯುತ್ ದುರಂತಕ್ಕೆ ಮೂವರು ಮೃತಪಟ್ಟಿದ್ದು ಇದೇ ಮೊದಲು. ಸೆಸ್ಕ್ ಇದನ್ನು ಗಂಭೀರವಾಗಿ ಸ್ವೀಕರಿಸಿದೆ. ೫ ಲಕ್ಷ ರೂ.ವರೆಗೂ ಪರಿಹಾರ ನೀಡಲು ನಮ್ಮ ವ್ಯಾಪ್ತಿಯಲ್ಲಿ ಅವಕಾಶವಿದೆ. ಹೆಚ್ಚಿನ ಪರಿಹಾರ ನೀಡಬೇಕೆಂದರೆ ಮಂಡಳಿ ಸಭೆಯಲ್ಲಿ ತೀರ್ಮಾನ ಆಗಬೇಕಾಗುತ್ತದೆ. ಈ ಕುರಿತು ಮಂಡಳಿ ಸಭೆಯಲ್ಲೂ ಚರ್ಚಿಸಿ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇವೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ಪರಿಹಾರ ಹೆಚ್ಚಿಸಿಕೊಂಡ ಪ್ರಕರಣಗಳೂ ಇದ್ದು, ಅದನ್ನು ಸೆಸ್ಕ್ ಮಾನ್ಯ ಮಾಡಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು : ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಡಗರ ಮನೆ ಮಾಡಿದೆ. ಹೊಸ ವರ್ಷದ ಮೊದಲ ಹಬ್ಬಕ್ಕೆ ಪ್ರಧಾನಿ ನರೇಂದ್ರ…
ರಾಯಚೂರು : ದೇವದುರ್ಗ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (50) ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3:30ರ…
ಮನೆ ಮಂದಿ ಮಕ್ಕಳು ಕೂಡಿ ಕಣ ಹೊಕ್ಕಿ, ಹೊಲ ಗದ್ದೆಯೆಲ್ಲಾ ಬೆಳೆದ ಬೆಳೆ ಕೈಗೆ ಬಂದೈತಿ ನಗುವಿಂದ ಮಿಂದು ಸುಗ್ಗಿಯ…
ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬಹುರೂಪಿ ನಾಟಕೋತ್ಸವ ನಡೆಯುತ್ತಿದೆ. ಸಿನಿಮಾ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಹಾಗೂ…
ಚಿತ್ರ ನಟ ಯಶ್ ಅಭಿನಯದ ಟ್ಯಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಆಕ್ಷೇಪಾರ್ಹ…
ನನೆಗುದಿಗೆ ಬಿದ್ದಿದ್ದ ನೀರು ತುಂಬಿಸುವ ಕಾರ್ಯಕ್ಕೆ ನಾಳೆ ಶಾಸಕ ಮಂಜುನಾಥ್ ಅವರಿಂದ ಚಾಲನೆ; ರೈತರಲ್ಲಿ ಸಂತಸ ಮಹಾದೇಶ್ ಎಂ ಗೌಡ…