ಮೈಸೂರು : ಪೂಜಾ ಸ್ಥಳಗಳ ಕಾಯ್ದೆಯನ್ನು ಉಲ್ಲಂಘಿಸಿ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಜಾಮಿಯಾ ಮಸೀದಿಯನ್ನು ವಿವಾದವನ್ನಾಗಿಸುತ್ತಿರುವ ಸಂಘ ಪರಿವಾರ ಈ ಭಾಗದಲ್ಲಿ ಕೋಮು ವಿದ್ವೇಷ ಹರಡಿ ಸೌಹಾರ್ದತೆಗೆ ಧಕ್ಕೆ ತರುತ್ತಿದೆ. ಈ ವಿಚಾರದಲ್ಲಿ ಪೊಲೀಸ್ ಉನ್ನತಾಧಿಕಾರಿಗಳು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
ಸಂಘ ಪರಿವಾರ ಪೂಜಾ ಸ್ಥಳಗಳ ಕಾಯ್ದೆಯನ್ನು ಪದೇ ಪದೇ ಉಲ್ಲಂಘನೆ ಮಾಡುತ್ತಲೇ ಬರುತ್ತಿದೆ. 1991ರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ಯಾವುದೇ ಪೂಜಾ ಸ್ಥಳದ ವಿಚಾರದಲ್ಲಿ 1947, ಆಗಸ್ಟ್ 15ಕ್ಕೆ ಅನ್ವಯಿಸುವಂತೆ ಯಥಾಸ್ಥಿತಿ ಕಾಪಾಡಬೇಕಾಗುತ್ತದೆ. ಪೂಜಾ ಸ್ಥಳಗಳನ್ನು ವಿವಾದವಾಗಿಸುವುದು, ಪರಿವರ್ತಿಸಲು ಪ್ರಯತ್ನಿಸುವುದು, ಕೆಡವಲು ಸಂಚು ರೂಪಿಸುವುದು ಅಪರಾಧವಾಗುತ್ತದೆ. ಇಂತಹ ಕೃತ್ಯಗಳ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಜೀದ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ಶೋಭಾಯಾತ್ರೆ ಹೆಸರಲ್ಲಿ, ಹನುಮ ಜಯಂತಿಯ ನೆಪದಲ್ಲಿ ಕೋಮು ಸೌಹಾರ್ದತೆಯನ್ನು ಕದಡಿ ತನ್ನ ರಾಜಕೀಯ ಲಾಭಕ್ಕೆ ಪಟ್ಟಣವನ್ನು ಕೋಮುದಳ್ಳುರಿಗೆ ತಳ್ಳುವ ನೀಚ ಕೆಲಸಕ್ಕೆ ಸಂಘ ಪರಿವಾರ ಕೈ ಹಾಕಿದೆ ಎಂದು ಆರೋಪಿಸಿದ ಮಜೀದ್ ಅವರು, ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು, ಆದರೆ ಸಂಘ ಪರಿವಾರದ ದ್ವೇಷದ ಕೃತ್ಯಗಳಿಗೆ ಬೆಂಬಲವಾಗಿ ಸ್ವತಃ ಕೋಮುವಾದಿ ಬಿಜೆಪಿ ಪಕ್ಷದ ಸರ್ಕಾರವೇ ನಿಂತಿರುವುದರಿಂದ ಪೊಲೀಸರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿ ಕಾನೂನು ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದು ಮಜೀದ್ ಆರೋಪಿಸಿದರು.
ಶ್ರೀರಂಗಪಟ್ಟಣದ ಪ್ರಕರಣದಲ್ಲಿ ಮುಸ್ಲಿಮರ ಮನೆ ಮೇಲೆ ಹಾರಿಸಿದ್ದ ಹಸಿರು ಧ್ವಜವನ್ನು ಕಿತ್ತೆಸೆದು ವಿಕೃತಿ ಮೆರೆದಿದ್ದ ಸಂಘ ಪರಿವಾರದ ಸದಸ್ಯನ ಮೇಲೆ ಪೊಲೀಸರು ಕ್ರಮ ಕೈಗೊಂಡಾಗ ಪೊಲೀಸರ ವಿರುದ್ಧವೇ ಸಂಘ ಪರಿವಾರದ ಗೂಂಡಾಗಳು ಪ್ರತಿಭಟನೆ ನಡೆಸಿ, ಕ್ರಮ ಕೈಗೊಂಡ ಪೊಲೀಸರ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎನ್ನುವ ಭರವಸೆಯನ್ನು ಪೊಲೀಸ್ ಉನ್ನತಾಧಿಕಾರಿಗಳಿಂದಲೇ ಪಡೆದುಕೊಂಡಿದ್ದಾರೆ. ಹೀಗಿರುವಾಗ ಪೊಲೀಸರು ಕ್ರಮ ಕೈಗೊಳ್ಳಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬಿಜೆಪಿ ಸರ್ಕಾರ ತನ್ನ ರಾಜಕೀಯ ಕುತಂತ್ರಗಳನ್ನು ಬದಿಗೆ ಸರಿಸಿ ಪೂಜಾ ಸ್ಥಳಗಳ ಕಾಯ್ದೆ ಅನುಗುಣವಾಗಿ ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕು ಎಂದು ಅಬ್ದುಲ್ ಮಜೀದ್ ಅವರು ತಮ್ಮ ಹೇಳಿಕೆಯ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು: ಪ್ರಸಕ್ತ 2026-27 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ- 1 ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ಹಾಗೂ…
ಕುಶಾಲನಗರ: ಗುತ್ತಿಗೆದಾರ ಲೈಸೆನ್ಸ್ ನೀಡಲು ಲೋಕೋಪಯೋಗಿ ಇಲಾಖೆ ಕಚೇರಿಯ ನೌಕರನೊಬ್ಬ ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದು,…
ಸರಗೂರು: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ನಂಜೀಪುರ ಗ್ರಾಮದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ ಮತ್ತು ಕೊಂಡೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ…
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದೊಡ್ಡರಿ ಕಾವಲು ಗೇಟ್ ಬಳಿ ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದಾಸೋಹ ಭವನಕ್ಕೆ ಬರುವ…
ಬೆಂಗಳೂರು: ಮುಂದಿನ ಸಲ ಮಹಿಳಾ ಮೀಸಲಾತಿ ಬಂದರೆ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಈ…