ಹೇಮಲತಾ ಮನೆಯಲ್ಲಿ ಬೊಂಬೆಗಳ ದರ್ಬಾರ್
ಅತಿ ಪುರಾತನವಾದ, ದೇಶ-ವಿದೇಶಗಳಿಂದ ತಂದ, ಮಣ್ಣಿನ, ಕಂಚಿನ, ಮರದ, ವಿವಿಧ ಬಗೆಯ ಲೋಹಗಳಿಂದ ಮಾಡಿದ ಅತ್ಯಾಕರ್ಷಕ, ಒಂದೊಂದು ಪರಿಕಲ್ಪನೆ ಇಟ್ಟುಕೊಂಡು ಕೂರಿಸಿದ ಬೊಂಬೆಗಳನ್ನು ನೋಡಬೇಕು ಎಂದರೆ ಮೈಸೂರಿನ ರಾಮಚಂದ್ರ ಅಗ್ರಹಾರದಲ್ಲಿರುವ ನಿವೃತ್ತ ಉಪತಹಶಿಲ್ದಾರ್ ಹೇಮಲತಾ ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಬೇಕು.
ಸುಮಾರು ೩೦-೩೫ ವರ್ಷಗಳಿಂದಲೂ ಬೊಂಬೆಗಳನ್ನು ಕೂರಿಸುತ್ತಾ ಬಂದಿರುವ ಇವರ ಬಳಿ ೧೫ ಸಾವಿರಕ್ಕೂ ಹೆಚ್ಚು ಬೊಂಬೆಗಳ ಸಂಗ್ರವಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿಯೂ ಮನೆಯಲ್ಲಿ ೯ ಹಂತಗಳಲ್ಲಿ ಬೊಂಬೆಗಳನ್ನು ಕೂರಿಸುವ ಇವರು ಈ ಬಾರಿ ಕೆಆರ್‌ಎಸ್ ಡ್ಯಾಂ, ಕೊಲ್ಲೂರು ಮೂಕಾಂಬಿಕೆ, ಹೊರನಾಡು ಅನ್ನಪೂರ್ಣೆ, ಶೃಂಗೇರಿ ಶಾರದೆ, ಮೈಸೂರು ಚಾಮುಂಡೇಶ್ವರಿ, ಕಂಚಿ ಕಾಮಾಕ್ಷಿ, ಮಧುರೈ ಮೀನಾಕ್ಷಿ, ಕಾಶಿ ಅನ್ನಪೂರ್ಣೇಶ್ವರಿ, ತಮಿಳುನಾಡಿನ ಚೋಟಾಣಿ ಅಮ್ಮನವರ ಬೊಂಬೆಗಳನ್ನು ಕೂರಿಸಲಾಗಿದೆ.
ಪಟ್ಟದ ಬೊಂಬೆಗಳು, ರಾಜರಾಜೇಶ್ವರಿ ದರ್ಬಾರು, ದುರ್ಗಾಪೂಜೆ, ದಶಾವತಾರ, ಸಪ್ತಋಷಿಗಳು, ಶಂಕರಾಚಾರ್ಯ ಜೀವನ ಚರಿತ್ರೆ, ರಾಮಾಯಣ ಕಥೆ ಹೇಳುವ ಬೊಂಬೆಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ.
ಬೊಂಬೆಗಳನ್ನು ಕೂರಿಸುವಾಗ ಎಷ್ಟು ಖುಷಿಯಿಂದ ಕೂರಿಸುತ್ತವೆೋಂ ಅಷ್ಟೇ ಜಬ್ದಾರಿಯುತವಾಗಿ, ಎತ್ತಿಡಬೇಕು. ಇದರಲ್ಲಿ ಆಸಕ್ತಿ ಮತ್ತು ತಾಳ್ಮೆ ಬಹುಮುಖ್ಯ ಎನ್ನುವ ಹೇಮಲತಾ ಅವರು ಹೋದ ಕಡೆಗಳಲೆಲ್ಲಾ ಇಷ್ಟವಾದ ಬೊಂಬೆಗಳನ್ನು ತರುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಮಗ ಕಾರ್ತಿಕ್ ಅವರೂ ತಾಯಿಯ ಈ ಚೆಂದದ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ.
ಬೊಂಬೆ ಕೂರಿಸಿದವರು
ಹೇಮಲತಾ ಕುಮಾರಸ್ವಾಮಿ
ನಿವೃತ್ತ ಉಪತಹಶಿಲ್ದಾರ್, ನಂ. ೫೬೭/೩೨ನೇ ರಾಮಚಂದ್ರ ಅಗ್ರಹಾರ, ಮೈಸೂರು
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…