ಜಿಲ್ಲೆಗಳು

‘ಆತಿಥ್ಯ ನೀಡಿದ್ದಕ್ಕೆ ಮಠದ ಜಾಗ ನೀಡಿ ಎನ್ನುವುದು ಸರಿಯೇ?’

ಮೈಸೂರು: ಮೈಸೂರಿನಲ್ಲಿರುವ ನಿರಂಜನ ಮಠಕ್ಕೆ ಸೇರಿರುವ ಒಂದು ಚದರ ಅಡಿ ಜಾಗಕ್ಕೆ ಕುತ್ತು ಬಂದರೆ, ರಾಜ್ಯದ ೧ಲಕ್ಷದ ೯೨ ಸಾವಿರದ ೮೦೦ ಚದರ ಕಿ.ಮೀ. ಆಡಳಿತವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷೃ ಶಂಕರ ಮಹದೇವ ಬಿದರಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಶ್ರೀ ನಿರಂಜನ ಮಠ ಒಂದು ಅವಲೋಕನ-೨೦೨೨’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬೀದರಿನ ಬಸವಕಲ್ಯಾಣದಿಂದ ಒಂದು ಯಾತ್ರೆ, ಕೂಡಲಸಂಗಮದಿಂದ ಒಂದು ಯಾತ್ರೆ ಮತ್ತು ಉಳವಿಯಿಂದ ಒಂದು ಯಾತ್ರೆಯನ್ನು ಸಂಘಟನೆ ಮಾಡಿ ವೀರಶೈವ-ಲಿಂಗಾಯತರನ್ನು ಜಾಗೃತಿಗೊಳಿಸಲಾಗುತ್ತದೆ. ಈ ಹೋರಾಟ ಕೇವಲ ಕರ್ನಾಟಕದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೇ ಇಡೀ ದೇಶದ ಹೋರಾಟವಾಗುತ್ತದೆ ಎಂದು ಅವರು ಗುಡುಗಿದರು.

ನಾವು ಈವರೆಗೂ ಯಾವ ಸಮಾಜದಿಂದಲೂ ಏನನ್ನೂ ಕಿತ್ತುಕೊಂಡಿಲ್ಲ. ನಮ್ಮಿಂದ ಸಾಕಷ್ಟನ್ನು ಕೊಟ್ಟಿದ್ದೇವೆ. ಆದರೂ ನಮ್ಮ ಅಸ್ತಿತ್ವ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಎಲ್ಲಾ ದಾರ್ಶನಿಕರ ಬಗ್ಗೆ ಗೌರವವಿದೆ. ಬಸವಣ್ಣ, ಅಲ್ಲಮ ಅವರಂತೆ ಕನಕದಾಸರು, ಪುರಂದರದಾಸರು, ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಸೇರಿದಂತೆ ಎಲ್ಲರ ಬಗ್ಗೆಯೂ ಗೌರವವಿದೆ. ಆದರೆ ವಿವೇಕಾನಂದರಿಗೆ ನಿರಂಜನ ಮಠದಲ್ಲಿ ಆತಿಥ್ಯ ನೀಡಲಾಯಿತು ಎಂಬ ಕಾರಣಕ್ಕೆ ಮಠದ ಜಾಗವನ್ನೇ ಕೊಡಿ ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ನಮ್ಮ ಸಮಾಜದ ಸ್ವಾಮೀಜಿಗಳು ಪಶ್ಚಿಮಬಂಗಾಳದ ಬೇಲೂರು ಮಠಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಆ ಮಠದವರು ಶಿಷ್ಠಾಚಾರದಂತೆ ಅತಿಥ್ಯ ನೀಡಿ, ಸತ್ಕಾರ ಮಾಡುತ್ತಾರೆ. ಅಂದ ಮಾತ್ರಕ್ಕೆ ನಮ್ಮ ಶ್ರೀಗಳ ಪ್ರತಿಮೆ ಹಾಕಿ, ಬಸವಣ್ಣನವರ ಪ್ರತಿಮೆ ಹಾಕಿ ಎನ್ನಲು ಸಾಧ್ಯವೇ? ಹಾಗೆೆುೀಂ ವಿವೇಕಾನಂದರು ಇಲ್ಲಿ ತಂಗಿದ್ದರು ಎಂಬ ಕಾರಣಕ್ಕೆ ಈಗ ಮಠವನ್ನೇ ಕೊಡಿ ಎನ್ನುವುದು ಅದು ವಿವೇಕ ರಹಿತ ಚಿಂತನೆ, ವಿವೇಕ ರಹಿತ ತೀರ್ಮಾನ ಎಂದು ಬಿದರಿ ಕಟುವಾಗಿ ಟೀಕಿಸಿದರು.

ಹೊಸಮಠದ ಚಿದಾನಂದಸ್ವಾಮೀಜಿ, ಕುದೇರು ಮಠದ ಗುರುಶಾಂತಸ್ವಾಮೀಜಿ ಉಪಸ್ಥಿತರಿದ್ದರು. ನಿರಂಜನ ಮಠ ಸಂರಕ್ಷಣಾ ಸಮಿತಿ ಅಧ್ಯಕ್ಷ ಎಚ್.ವಿ. ಬಸವರಾಜು ಹಿನಕಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಸುನಂದಾ ಪಾಲನೇತ್ರ,ಮಹಾಸಭಾದ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಕೆ.ಎಸ್.ಮಹದೇವ ಪ್ರಸಾದ್, ನಗರ ಘಟಕದ ಅಧ್ಯಕ್ಷ ಎಂ.ಎಚ್.ಚಂದ್ರಶೇಖರ್, ಬಸವಬಳಗಗಳ ಅಧ್ಯಕ್ಷ ಎಲ್.ಎಸ್.ಮಹದೇವಸ್ವಾಮಿ, ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಕೆ.ನಾಗರಾಜು, ನಟರಾಜ, ಶಶಿಧರ ಶಾನಭಾಗ್, ಟಿ.ಎಸ್.ಲೋಕೇಶ್ ಮತ್ತಿತರರು ಹಾಜರಿದ್ದರು.

 

 

 

andolana

Recent Posts

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

17 hours ago

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

17 hours ago

ರಾಜ್ಯದಲ್ಲಿ ೧೯೮೩ರ ಇತಿಹಾಸ ಮರುಕಳಿಸುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…

17 hours ago

ಕೆಎಚ್‌ಬಿ ಕಾಲೋನಿ ನಿವಾಸಿಗಳ ಜೀವನ ಹೈರಾಣ

ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…

17 hours ago

ಗಣೇಶೋತ್ಸವಕ್ಕೆ ಡಿಜೆ ನಿಷೇಧ: ಮಿಶ್ರ ಪ್ರತಿಕ್ರಿಯೆ

ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…

18 hours ago

50 ವರ್ಷಗಳ ನಂತರ ಮೊದಲ ಬಾರಿ ಬರಿದಾದ ಕಾರಿಗನಹಳ್ಳಿ ಅಣೆಕಟ್ಟೆ

ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ  ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…

18 hours ago