ಚಾಮರಾಜನಗರ : ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿ.ವಲಯದಲ್ಲಿ ಹುಲಿಯೊಂದು ಗಾಯಗೊಂಡಿದ್ದು, ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ. ಬುಧವಾರ ಬೆಳಗ್ಗೆ ಕೆ.ಗುಡಿ. ಜಂಗಲ್ ರೆಸಾರ್ಟ್‌ನ ವಾಹನದಲ್ಲಿ ಸಫಾರಿ ಹೊರಟಿದ್ದ ಪ್ರವಾಸಿಗರಿಗೆ ಅಣ್ಣಿಕೆರೆ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದೆ. ಅದರ ಗುದದ್ವಾರದ ಬಳಿ ಗಾಯವಾಗಿರುವುದು ಕಂಡುಬಂದಿದ್ದು ಪ್ರವಾಸಿಗರೊಬ್ಬರು ಪೊಟೋ ತೆಗೆದಿದ್ದಾರೆ.
ಹುಲಿಯ ಗುದದ್ವಾರದ ಬಳಿ ಕಿತ್ತುಹೊಗಿ ಮಾಂಸ ಖಂಡ ಹೊರಕ್ಕೆ ಕಾಣುತ್ತಿದೆ. ನೈಸರ್ಗಿಕವಾಗಿ ಅಥವಾ ಮತ್ತೊಂದು ಹುಲಿಯ ಜೊತೆ ಕಾದಾಟ ನಡೆಸುವಾಗ ಗಾಯಗೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಈ ಮಾಹಿತಿ ತಿಳಿದ ಕೆ.ಗುಡಿ. ವಲಯಾರಣ್ಯಾಧಿಕಾರಿ ವಿನೋದ್ ಗೌಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಹುಲಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಗಾಯಗೊಂಡಿರುವ ಹುಲಿ ಸುಳಿವು ದೊರೆತಿಲ್ಲ. ಅಲ್ಲದೆ ಹುಲಿ ಕಾಣಿಸಿಕೊಂಡ ಜಾಗ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ಯಾಮರಾ ಟ್ರ್ಯಾಪಿಂಗ್ ಮಾಡಲಾಗಿದೆ. ಆದರೆ, ಹುಲಿ ಪತ್ತೆಯಾಗಿಲ್ಲ ಎಂದು ವಿನೋದ್ ಗೌಡ ಅವರು ತಿಳಿಸಿದ್ದಾರೆ.
ಕ್ಯಾಮರಾ ಟ್ರ್ಯಾಪಿಂಗ್ ಮಾಡಲಾಗುತ್ತಿದ್ದು, ಹುಲಿ ಸೆರೆಯಾದರೆ ಗಾಯವಾಗಿರುವುದನ್ನು ಗುರುತಿಸಲಾಗುವುದು. ಗಂಭೀರ ಗಾಯವಾಗಿದ್ದರೆ ಅರಣ್ಯ ಇಲಾಖೆ ಪಶು ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಲು ಕ್ರಮ ವಹಿಸಲಾಗುವುದು ತಿಳಿಸಿದ್ದಾರೆ.
ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಅಭಿಲೇಖಾಲಯದ ದಾಖಲೆಗಳು ಸ್ಕ್ಯಾನಿಂಗ್ ಬಿ. ಟಿ. ಮೋಹನ್ ಕುಮಾರ್ ಮಂಡ್ಯ: ಕಂದಾಯ ದಾಖಲೆಗಳ ಗಣಕೀಕರಣ…
ನ. ೨೩ಕ್ಕೆ ಹನೂರು ಪಪಂ ೧೨ನೇ ವಾರ್ಡ್ ಉಪಚುನಾವಣೆ; ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ ಮಹಾದೇಶ್ ಎಂ ಗೌಡ…
ಸ್ಪೇನಿನಲ್ಲಿ ನನ್ನನ್ನು ಬಹಳಮಟ್ಟಿಗೆ ಕಲಕಿದ ವಿಷಯ ಎಂದರೆ ತೀರಾ ಎಳೆವಯಸ್ಸಿನ ಹುಡುಗ ಹುಡುಗಿಯರು ಮಕ್ಕಳನ್ನು ಹೊತ್ತು ಓಡಾಡುತ್ತಿದ್ದದ್ದು. ಕಾಲೇಜಿಗೆ ಹೋಗಬೇಕಾದ…
ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಈ ವರ್ಷದ ಕೊನೆಯ ಚುನಾವಣೆ. ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ…
ವಾಣಿವಿಲಾಸ ಮಾರುಕಟ್ಟೆ ಒಳಗಿನ ಶೌಚಾಲಯದ ದುಸ್ಥಿತಿ; ಬಹುತೇಕ ಶೌಚಾಲಯಗಳಲ್ಲೂ ಇದೇ ಸ್ಥಿತಿ ಹೆಚ್. ಎಸ್. ದಿನೇಶ್ ಕುಮಾರ್ ಮೈಸೂರು: ದೇಶದ…
ಕೆ. ಬಿ. ರಮೇಶನಾಯಕ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಽಕಾರದಲ್ಲಿ ೫೦:೫೦ ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿ ರುವ ಹಗರಣ ಕುರಿತು…