ಮೈಸೂರು: ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣೆಯ ೨೭ನೇ ಸಂಗೀತ ಸಮ್ಮೇಳನ ವಿದ್ವಾನ್ ವಿ.ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ಡಿ.೨ರಿಂದ ೬ರವರೆಗೆ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.
ಡಿ.೨ರಂದು ಸಂಜೆ ೫.೩೦ಕ್ಕೆ ಸಂಗೀತ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಬಳಿಕ ಮೈಸೂರು ಎ.ಚಂದನ್ ಕುಮಾರ್ ಕೊಳಲು ವಾದನ ನೀಡಲಿದ್ದಾರೆ. ವಯೋಲಿನ್‌ನಲ್ಲಿ ಮೈಸೂರು ಎಂ.ಸುಮಂತ್, ಮೃದಂಗದಲ್ಲಿ ಕೆ.ಯು.ಜಯಚಂದ್ರರಾವ್, ಘಟ ತುಮಕೂರು ಬಿ.ಶಶಿಶಂಕರ್ ಪಕ್ಕವಾದ್ಯದಲ್ಲಿ ಸಹಕಾರ ನೀಡಲಿದ್ದಾರೆ.
೩ರಂದು ಬೆಳಗ್ಗೆ ೧೦ಕ್ಕೆ ವಿದ್ವಾನ್ ತುಮಕೂರು ಬಿ.ರವಿಶಂಕರ್ ನಿರ್ದೇಶನದಲ್ಲಿ ನಾದ ಲಹರಿ, ವಿದ್ವತ್ ಗೋಷ್ಠಿಯಲ್ಲಿ ಹೊಯ್ಸಳ ಶಿಲ್ಪದಲ್ಲಿ ಸಂಗೀತ ವಾದ್ಯಗಳು ವಿಷಯ ಕುರಿತು ಡಾ.ರಮಾ ವಿ.ಬೆಣ್ಣೂರ್, ಮಹಿಳಾ ಹರಿದಾಸರು- ಒಂದು ಅಧ್ಯಯನ ಪ್ರಾತ್ಯಕ್ಷಿಕೆ ಕುರಿತು ಡಾ.ಸುಕನ್ಯಾ ಪ್ರಭಾಕರ್, ಲಯ ವಿನ್ಯಾಸದಲ್ಲಿ ಗಣಿತ ವೈವಿಧ್ಯ- ಪ್ರಾತ್ಯಕ್ಷಿಕೆ ಕುರಿತು ವಿದ್ವಾನ್ ಎಸ್.ಸುದರ್ಶನ್ ನೀಡಲಿದ್ದಾರೆ.
ಸಂಜೆ ೫.೩೦ಕ್ಕೆ ಕೇಶವ್ ಮೋಹನ್ ಕುಮಾರ್ ಅವರಿಂದ ವಯೋಲಿನ್ ವಾದನ, ವಿಕ್ರಂ ಭಾರದ್ವಾಜ್ ಮೃದಂಗದಲ್ಲಿ ಸಹಕಾರ ನೀಡಲಿದ್ದಾರೆ. ಸಂಜೆ ೬.೩೦ಕ್ಕೆ ಮಲ್ಲಾಡಿ ಸಹೋದರರಿಂದ ದ್ವಂದ್ವ ಗಾಯನ, ವಯೋಲಿನ್‌ನಲ್ಲಿ ಅದಿತಿ ಕೃಷ್ಣಪ್ರಕಾಶ್, ಮೃದಂಗದಲ್ಲಿ ತುಮಕೂರು ಬಿ.ರವಿಶಂಕರ್, ಘಟಂನಲ್ಲಿ ರಘುನಂದನ ರಾವ್ ಸಹಕಾರ ನೀಡಲಿದ್ದಾರೆ.
೪ರಂದು ಬೆಳಗ್ಗೆ ೧೦ ಗಂಟೆಗೆ ವಿದುಷಿ ಸ್ಮಿತಾ ಶ್ರೀಕಿರಣ್ ನಿರ್ದೇಶನದಲ್ಲಿ ವೇಣುವಾದನ ತರಂಗ, ವಿದ್ವತ್ ಗೋಷ್ಠಿಯಲ್ಲಿ ಚಿಕ್ಕದೇವರಾಜ ಒಡೆಯರ್ ವಿರಚಿತ ಗೇಯ ಪ್ರಬಂಧ- ಗೀತಗೋಪಾಲ- ಪ್ರಾತ್ಯಕ್ಷಿಕೆ ಡಾ.ಮೀರಾ ರಾಜಾರಾಂ ಪ್ರಾಣೇಶ್, ಶಾಸ್ತ್ರೀಯ ಸಂಗೀತ ಅಂದು- ಇಂದು- ಮುಂದು ವೈಜ್ಞಾನಿಕ ಚಿಂತನೆ ಪ್ರಾತ್ಯಕ್ಷಿಕೆ- ವಿದ್ವಾನ್ ವಿ.ನಂಜುಂಡಸ್ವಾಮಿ ನೀಡಲಿದ್ದಾರೆ.
ಸಂಜೆ ೫.೩೦ಕ್ಕೆ ಜಿ.ಕೆ.ಮನಮೋಹನ್ ಅವರಿಂದ ಗಾಯನ, ವಯೋಲಿನ್‌ನಲ್ಲಿ ಎಂ.ಸುಮಂತ್, ಮೃದಂಗದಲ್ಲಿ ಅನಿರುದ್ಧ ಭಟ್ ಸಹಕಾರ ನೀಡಲಿದ್ದಾರೆ. ಸಂಜೆ ೬.೩೦ಕ್ಕೆ ಡಾ.ಜಯಂತಿ ಆರ್.ಕುಮರೇಶ್ ಅವರಿಂದ ವೀಣಾವಾದನ, ಮೃದಂಗದಲ್ಲಿ ತುಮಕೂರು ಬಿ.ರವಿಶಂಕರ್, ಘಟಂ ತಿರುಚಿ ಕೃಷ್ಣಸ್ವಾಮಿ ಪಕ್ಕವಾದ್ಯದಲ್ಲಿ ಸಹಕರಿಸುವರು.
೫ರಂದು ಬೆಳಗ್ಗೆ ೧೦ ಗಂಟೆಗೆ ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್ ಅವರ ಶಿಷ್ಯವೃಂದದಿಂದ ವೇಣುವಾದನ, ವಿದ್ವತ್ ಗೋಷ್ಠಿಯಲ್ಲಿ ತಿಲ್ಲಾನ-ವೈವಿಧ್ಯ ವಿಷಯ ಕುರಿತು ವಿದ್ವಾನ್ ಎನ್.ಆರ್.ಪ್ರಸಾದ್, ಸಮನ್ವಯಕಾರರಾಗಿ ಪ್ರೊ.ಜಿ.ಎಸ್.ರಾಮಾನುಜಂ ಭಾಗವಹಿಸುವರು. ಸಂಜೆ ೫.೩೦ಕ್ಕೆ ರಾವ್ ಆರ್. ಶರತ್ ಗಾಯನಕ್ಕೆ ವಯೋಲಿನ್‌ನಲ್ಲಿ ಕೇಶವ್ ಮೋಹನ್‌ಕುಮಾರ್, ಮೃದಂಗದಲ್ಲಿ ಪ್ರವೀಣ್ ಹರಿಹರನ್ ಸಹಕಾರ ನೀಡುವರು. ಸಂಜೆ ೬.೩೦ಕ್ಕೆ ರಾಮಕೃಷ್ಣ ಮೂರ್ತಿ ಗಾಯನ, ವಯೋಲಿನ್ ಮತ್ತೂರು ಆರ್.ಶ್ರೀನಿಧಿ, ಮೃದಂಗದಲ್ಲಿ ಅರ್ಜುನ್‌ಕುಮಾರ್ ಸಹಕಾರ ನೀಡಲಿದ್ದಾರೆ.
೬ರಂದು ಸಂಜೆ ೫ ಗಂಟೆಗೆ ಪ್ರಜ್ವಲ್ ರಂಗರಾಜನ್ ಮತ್ತು ತಂಡದಿಂದ ವೀಣೆ, ಸಂಜೆ ೬ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಮ್ಮೇಳನಾಧ್ಯಕ್ಷರಾದ ವಿ.ನಂಜುಂಡಸ್ವಾಮಿ ಅವರಿಗೆ ಸಂಗಿತ ವಿದ್ಯಾನಿಧಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.. ಸಂಗೀತ ವಿದ್ವಾಂಸ ಎಚ್.ಕೆ.ವೆಂಕಟರಾಮ್ ಸಮಾರೋಪ ಭಾಷಣ ಮಾಡಲಿದ್ದು, ಸಂಗೀತ ವಿದ್ಯಾನಿಧಿ ಮೈಸೂರು ಎಂ.ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೭ ಗಂಟೆಗೆ ಎಂ,ಬಿ.ಹರಿಹರನ್ ಮತ್ತು ಎಸ್.ಅಶೋಕ್ ಸಹೋದರರಿಂದ ಯುಗಳ ಗಾಯನ, ವಯೋಲಿನ್‌ನಲ್ಲಿ ನಳಿನಿ ಮೋಹನ್, ಮೃದಂಗದಲ್ಲಿ ಪಾರುಪಲ್ಲಿ ಫಲ್ಗುಣ್, ಘಟಂನಲ್ಲಿ ರಂಗನಾಥ್ ಚಕ್ರವರ್ತಿ ಸಹಕಾರ ನೀಡಲಿದ್ದಾರೆ.
ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…
ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…
ಮಂಡ್ಯ: ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು. ಮಂಡ್ಯ ತಾಲ್ಲೂಕಿನ…
ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು…
ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…
ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…