ಹೊಸೂರು : ಜಮೀನಿಗೆ ನುಗ್ಗಿದ ಕಳ್ಳರು 1 ಎಕರೆಯಲ್ಲಿ ಬೆಳೆದಿದ್ದ ಸಿಹಿಕುಂಬಳ ಕಾಯಿಗಳನ್ನು ಕದ್ದು ಹೊತ್ತೊಯ್ದಿದ್ದಾರೆ.
ಸಾಲಿಗ್ರಾಮ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದ ರೈತ ಅಪ್ಪಾಜಿಗೌಡ ಅವರ ಜಮೀನಿಗೆ ನುಗ್ಗಿದ ಕಳ್ಳರು, ಬೆಳೆದಿದ್ದ ಸುಮಾರು 3ಟನ್‌ಗೂ ಅಧಿಕ ಪ್ರಮಾಣದ ಕುಂಬಳಕಾಯಿಗಳನ್ನು ದೋಚಿದ್ದಾರೆ. ಇದರಿಂದ 40 ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದೆ.
ಬೆಳಿಗ್ಗೆ ಜಮೀನಿಗೆ ತೆರಳಿದ ಅಪ್ಪಾಜಿಗೌಡ ಅವರು ಕುಂಬಳಕಾಯಿ ಕಳ್ಳತನವಾಗಿರುವುದನ್ನು ಮನಗಂಡು, ಬೆಳೆ ಕೈಗೆ ಬರುವ ಸಮಯದಲ್ಲಿ ಈ ರೀತಿ ಕಳ್ಳರು ಕದ್ದರೆ ನಮ್ಮಂತಹ ಬಡ ರೈತರು ಬದುಕುವುದು ಹೇಗೆ ಎಂದು ಅಳಲು ತೋಡಿಕೊಂಡರು.
ಚುಂಚನಕಟ್ಟೆ ಉಪಠಾಣೆಯ ಸಿಬ್ಬಂದಿ ಪ್ರವೀಣ್, ಕೇಶವರಾಜೇಅರಸ್ ಸ್ಥಳ ಪರಿಶೀಲನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10ಕ್ಕೂ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಸಜೀವ…
ಜಾತಿ ವ್ಯವಸ್ಥೆಯು ಅಸಮಾನತೆಯನ್ನು ಸೃಷ್ಟಿ ಮಾಡಿದೆ. ಈ ಜಾತಿ ವ್ಯವಸ್ಥೆ ಈಗಲೂ ಜೀವಂತ ವಾಗಿದೆ ಎನ್ನುವುದಕ್ಕೆ ಬೇರೆ ಜಾತಿಯ ಹುಡುಗನನ್ನು…
೬೦ರ ದಶಕದ ಸಿನಿಮಾರಂಗ ಯಾವ ಗಲಾಟೆ ಇಲ್ಲದೆ ಸಾಗಿತ್ತು. ರಾಜಕುಮಾರ್ ಅವರ ಸಮಕಾಲಿನ ನಟರಾದ ಕಲ್ಯಾಣ್ ಕುಮಾರ್, ಶ್ರೀನಾಥ್, ನರಸಿಂಹರಾಜು,…
ನಾಡದೇವತೆಯಾದ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಬೆಟ್ಟವನ್ನು ಯಥಾಸ್ಥಿತಿಯಲ್ಲಿ ಇರುವಂತೆ ಉಳಿಸಿಕೊಳ್ಳುವುದು ಮೈಸೂರಿಗರ ಆದ್ಯ ಕರ್ತವ್ಯವಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ…
ಚಿತ್ರದುರ್ಗದ ಪೇಟೆ ಬೀದಿಯ ಉಡುಗೊರೆ (ಗಿಫ್ಟ್) ಮಾರಾಟ ಮಳಿಗೆ ಮಕ್ಕಳು ಮತ್ತು ಪೋಷಕರಿಂದ ತುಂಬಿ ಹೋಗಿತ್ತು. ಅಲ್ಲಿದ್ದ ಹುಡುಗರನ್ನು ಏಕೆ…