ಜಿಲ್ಲೆಗಳು

ಮನೆ ಬಾಡಿಗೆ ನೀಡುವ ಮುನ್ನ ಮಾಲೀಕರೇ ಇರಲಿ ಎಚ್ಚರ!

ಮನೆ, ರೂಮ್ ಬಾಡಿಗೆ ಪಡೆಯುವವರ ಪೂರ್ವಾಪರ ದಾಖಲಾತಿಗಳ ಪರಿಶೀಲನೆ ಅಗತ್ಯ

ಬಿ.ಎನ್.ಧನಂಜಯಗೌಡ 
ಮೈಸೂರು: ಅನ್ಯ ಸ್ಥಳಗಳಿಂದ ನಗರಕ್ಕೆ ಆಗಮಿಸುವವರಿಗೆ ಮನೆ, ರೂಮ್‌ಗಳನ್ನು ಬಾಡಿಗೆ ನೀಡುವ ಮುನ್ನ ಮಾಲೀಕರು ಎಚ್ಚರವಹಿಸಬೇಕಿರುವುದು ಅಗತ್ಯ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಖ್ ಮೈಸೂರಿನ ಲೋಕನಾಯಕನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ ಎಂಬ ವಿಚಾರವೇ ಈಗ ಬಾಡಿಗೆ ನೀಡುವ ಮುನ್ನ ಯಾಕೆ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಸಾಕ್ಷಿಯಾಗಿದೆ.
ಸಾಂಸ್ಕೃತಿಕ ನಗರ, ಸ್ವಚ್ಛ ನಗರ, ವಿದ್ಯಾ ನಗರ, ಶಾಂತಿಪ್ರಿಯ ನಗರ ಎಂದೆಲ್ಲಾ ಮನ್ನಣೆಗಳನ್ನು ಪಡೆದಿರುವ ಮೈಸೂರು, ಭಯೋತ್ಪಾದನಾ ಚಟುವಟಿಕೆಗಳಿಗೆ ಸುರಕ್ಷಿತ ನಗರ ಎಂಬ ಭಾವನೆ ಉಗ್ರರಲ್ಲಿ ಇದೆ. ಹಾಗಾಗಿಯೇ, ಇಂತಹ ಚಟುವಟಿಕೆಗಳಲ್ಲಿ ನಿರತರಾಗಿರುವವರು ಮೈಸೂರಿನಲ್ಲಿ ವಾಸ್ತವ್ಯ ಹೂಡಬಹುದು. ಆದ್ದರಿಂದ, ಮನೆ ಅಥವಾ ರೂಮ್‌ಗಳನ್ನು ಬಾಡಿಗೆ ನೀಡುವಾಗ ಮಾಲೀಕರು ಜಾಗ್ರತೆಯಿಂದ ಪರಿಶೀಲನೆ ಮಾಡಬೇಕಿದೆ.
ಹೀಗೊಂದು ಪ್ರಕರಣ: ಇನ್ನು ಕೆಲವರು ಮನೆ, ರೂಮ್, ಮಳಿಗೆಗಳನ್ನು ಬಾಡಿಗೆಗೆ ಪಡೆದು, ಮನೆ ಕಳ್ಳತನ, ಸರಗಳ್ಳತನದಂತಹ ಕೃತ್ಯವನ್ನು ಎಸಗಬಹುದು ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಿದೆ.
೨೦೧೯ರ ಆಗಸ್ಟ್‌ನಲ್ಲಿ ಮನೆ ಮತ್ತು ಮಳಿಗೆಯ ಬಾಡಿಗೆದಾರನೂ ಆದ ಹಣ್ಣಿನ ವ್ಯಾಪಾರಿ, ಹಾಡಹಗಲೇ ತನ್ನ ಮಳಿಗೆ ಮಾಲೀಕರ ಮನೆಗೆ ನುಗ್ಗಿ, ಮನೆಯಲ್ಲಿದ್ದ ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ಅವರ ಕೈಗಳಲ್ಲಿದ್ದ ೭ ಚಿನ್ನದ ಬಳೆಗಳನ್ನು ದೋಚಿ ಪರಾರಿಯಾಗಿದ್ದ. ಇಂತಹ ಆಘಾತಕಾರಿ ಘಟನೆ ಮೈಸೂರಿನ ಜಿಲ್ಲಾ ನ್ಯಾಯಾಲಯ ಎದುರಿನ ಚಾಮರಾಜಪುರಂನಲ್ಲಿ ಸಂಭವಿಸಿತ್ತು. ಅಪರಾಧಿಯನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದರು.
ಮೈಸೂರಿಗೆ ಉಗ್ರರ ನಂಟು ಹೊಸದೇನಲ್ಲ : ೨೦೦೬ರಲ್ಲಿ ಹಿನಕಲ್ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ಕಂಡುಬಂದ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಸೆರೆಹಿಡಿಯಲು ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆಗ ಪೊಲೀಸರು ಅವರನ್ನು ಹಿಡಿಯಲು ಗುಂಡು ಹಾರಿಸಿದ್ದರು. ಅಂತಿಮವಾಗಿ ಫಹಾದ್ ಮತ್ತು ಸಲೀಂ ಹುಸೇನ್ ಎಂಬವರನ್ನು ಬಂಧಿಸಲಾಗಿತ್ತು. ಊಟದ ಬಾಕ್ಸ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲು ಅವರು ಸಂಚು ನಡೆಸಿದ್ದರು ಎಂಬ ಅಂಶ ತನಿಖೆಯಿಂದ ತಿಳಿದು ಬಂದಿತ್ತು. ೨೦೧೬ರಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಕುಕ್ಕರ್ ಸ್ಫೋಟಿಸಿದ್ದರು. ಈ ಸಂಬಂಧ ಐವರನ್ನು ಬಂಧಿಸಲಾಗಿತ್ತು.
————-

ಮಾಲೀಕರು ವಹಿಸಬೇಕಾದ ಜಾಗ್ರತೆಗಳೇನು?
* ಮನೆ ಬಾಡಿಗೆ ಪಡೆಯಲು ಬಂದವರ ಪೂರ್ವಾಪರವನ್ನು ಮೊದಲು ತಿಳಿಯಲು ಸೂಕ್ಷ್ಮ ಪ್ರಯತ್ನ ಮಾಡುವುದು.
* ಬಾಡಿಗೆದಾರರ ಆಧಾರ್ ಸೇರಿದಂತೆ ಮನೆ ಬಾಡಿಗೆ ಕರಾರಿಗೆ ತೆಗೆದುಕೊಳ್ಳುವ ದಾಖಲಾತಿಗಳನ್ನು ಒಂದಷ್ಟು ಸಮಯ ತೆಗೆದುಕೊಂಡು ಪರಿಶೀಲನೆ ಮಾಡಬೇಕು.
* ಬಾಡಿಗೆ ನೀಡಿದ ನಂತರವೂ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಜೊತೆಗೆ ದಾಖಲಾತಿಯ ನಕಲುಗಳನ್ನು ನೀಡಬೇಕು.  


ಆಧಾರ್ ಕಾರ್ಡ್ ನೀವೇ ಪರಿಶೀಲಿಸಬಹುದು?
ತಕ್ಷಣಕ್ಕೆ ಆಧಾರ್ ಕಾರ್ಡ್ ಪರಿಶೀಲನೆ ಮಾಡುವುದು ಹೇಗಾಗುತ್ತದೆ? ಎಂಬ ಗೊಂದಲವಿದ್ದರೆ ಅದನ್ನು ಬಿಡಿ. ಒಂದೆರಡು ಗಂಟೆ ಸಮಯ ತೆಗೆದುಕೊಂಡು ಆಧಾರ್ ಕಾರ್ಡ್ ನಕಲಿಯೋ ಅಥವಾ ಅಸಲಿಯೋ? ಎಂಬುದನ್ನು ಹೀಗೆ ಪರಿಶೀಲಿಸಿ.
* ಮೊದಲಿಗೆ ಅಧಿಕೃತ UIDAI ಪೋರ್ಟಲ್ uidai.gov.in ಗೆ ಭೇಟಿ ನೀಡಿ.
* ಇಲ್ಲಿ ’ My Aadhaar’ ಮೇಲೆ ಕ್ಲಿಕ್ ಮಾಡಿ.
* ’ My Aadhaar’  ಅನ್ನು ಕ್ಲಿಕ್ ಮಾಡಿದ ನಂತರ, ಅದಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳ ಪಟ್ಟಿಯು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
* ಈ ಪಟ್ಟಿಯಲ್ಲಿ, ವೆರಿಫೈ ಆನ್ ಆಧಾರ್ ಸಂಖ್ಯೆಯನ್ನು ಕ್ಲಿಕ್ ಮಾಡಿ.
* ಅದರ ನಂತರ ೧೨ ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಪರಿಶೀಲನೆಯನ್ನು ಮಾಡಿ.
* ಈಗ  Proceed to verify ಮೇಲೆ ಕ್ಲಿಕ್ ಮಾಡಿ.
ಈ ವೇಳೆ ಈ ಆಧಾರ್ ಸಂಖ್ಯೆ ಇದೆಯೇ, ಈ ಆಧಾರ್‌ನಲ್ಲಿ ಎಲ್ಲಾ ಮಾಹಿತಿಗಳೂ ಸರಿಯಾಗಿದೆಯೇ ಎಂಬುದು ತಿಳಿಯಲಿದೆ.


ಮನೆ, ರೂಮ್, ಮಳಿಗೆಗಳನ್ನು ಬಾಡಿಗೆ ನೀಡುವ ಮುನ್ನ ಮಾಲೀಕರು ಜಾಗ್ರತೆ ವಹಿಸಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಉಂಟಾಗಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ನಗರದಲ್ಲಿ ಬಾಡಿಗೆ ಮನೆ ಹಾಗೂ ಬಾಡಿಗೆ ರೂಮ್‌ಗಳಲ್ಲಿ ವಾಸವಿರುವ ಬಾಡಿಗೆದಾರರ ದಾಖಲಾತಿಗಳನ್ನು ಮನೆಯ ಮಾಲೀಕರು ಕಡ್ಡಾಯವಾಗಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ನೀಡಬೇಕು. ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಲಾಗುವುದು.
-ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ, ಮೈಸೂರು.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago