ಹಾಸನ

ಹಾಸನ: ಸಿದ್ದೇಶ್ವರಸ್ವಾಮಿ ಕೊಂಡೋತ್ಸವದಲ್ಲಿ ಕೆಂಡ ಹಾಯ್ದ ಜಿಲ್ಲಾಧಿಕಾರಿ

ಹಾಸನ: ಹಾಸನಾಂಬೆ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ನಡೆದ ಕೊಂಡೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಕೆಂಡ ಹಾಯ್ದು ಎಲ್ಲರ ಗಮನ ಸೆಳೆದರು.

ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಭಕ್ತಿ, ಭಾವನಾಭರಿತ ವಾತಾವರಣದಲ್ಲಿ ಅದ್ಧೂರಿಯಾಗಿ ನೆರವೇರಿತು. ಬೆಳಗಿನ ಜಾವದಿಂದಲೇ ದೇವಾಲಯ ಆವರಣದಲ್ಲಿ ಭಕ್ತರ ದೊಡ್ಡ ಜನಸಂದಣಿ ಕಂಡುಬಂತು.

ಇದನ್ನು ಓದಿ: ದೀಪಾವಳಿ ಹಬ್ಬದ ದಿನವೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಜನಸಾಗರ

ಭಕ್ತರು ಕೆಂಡದ ಮೇಲೆ ನಡಿದು ತಾಯಿಯ ಕೃಪೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ವಿಶೇಷವಾಗಿ ಜಿಲ್ಲಾಧಿಕಾರಿಗಳು ಕೆಂಡವನ್ನು ತುಣಿದರು. ಧಾರ್ಮಿಕ ಭಾವನೆ, ನಂಬಿಕೆ ಮತ್ತು ಪರಂಪರೆಯ ಸಂಯೋಜನೆಯ ಈ ವೈಭವಶಾಲಿ ಕೆಂಡೋತ್ಸವವನ್ನು ನೋಡುವ ಸಲುವಾಗಿ ಸಾವಿರಾರು ಭಕ್ತರು ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದ್ದರು. ಪೊಲೀಸ್ ಇಲಾಖೆ ಹಾಗೂ ಆಡಳಿತದಿಂದ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆಂದೋಲನ ಡೆಸ್ಕ್

Recent Posts

ಆಸಕ್ತಿಗೆ ಅನುಗುಣವಾಗಿ ಉಚಿತ ಕೌಶಲ್ಯ ತರಬೇತಿ ನೀಡಿ: ಡಾ.ಕುಮಾರ

ಮಂಡ್ಯ: ಯುವಕ-ಯುವತಿಯರಿಗೆ ಆಸಕ್ತಿಯ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಉಚಿತ ಕೌಶಲ್ಯ ತರಬೇತಿ ಹಾಗೂ ಸ್ವಉದ್ಯೋಗ ನೀಡಲು ಮಾರ್ಗದರ್ಶನ ನೀಡಲು ಅಗತ್ಯ…

1 hour ago

ಜನರು ಹೆಚ್ಚು ಹೆಚ್ಚು ಗ್ಯಾಸ್‌ ಬುಕ್‌ ಮಾಡಬೇಡಿ: ಸಚಿವ ಕೆ.ಎಚ್.ಮುನಿಯಪ್ಪ ಮನವಿ

ಬೆಂಗಳೂರು: ರಾಜ್ಯದಲ್ಲಿ ಗ್ಯಾಸ್‌ ಸಿಲಿಂಡರ್‌ ಅಭಾವವಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದ್ದಾರೆ. ಈ…

1 hour ago

ಯುದ್ಧದ ನಡುವೆಯೇ ಭಾರತಕ್ಕೆ ಗುಡ್‌ನ್ಯೂಸ್: 45,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತು ತಂದ ಹಡಗು

ಅಹಮದಾಬಾದ್:‌ 45,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಶಿವಾಲಿಕ್‌ ಹಡಗು ಗುಜರಾತ್‌ನ ಮುಂದ್ರಾ ಬಂದರಿಗೆ ಬಂದು ತಲುಪಲಿದೆ. ಈ ಬಗ್ಗೆ…

2 hours ago

110 ಅಡಿಗೆ ಇಳಿದ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ: ಕುಡಿಯುವ ನೀರಿಗಿಲ್ಲ ತೊಂದರೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ರೈತರ ಜೀವನಾಡಿ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 110.44 ಅಡಿಗೆ ಇಳಿದಿದೆ. ಈ ಬಗ್ಗೆ…

2 hours ago

ರಾಜ್ಯಾದ್ಯಂತ ಮಾರ್ಚ್.‌18ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ಬೆಂಗಳೂರು: ಮಾರ್ಚ್.‌18ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಲಿವೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಪಾರದರ್ಶಕತೆ ಕಾಪಾಡಲು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ…

3 hours ago

ನಾನಿನ್ನೂ ಬದುಕಿದ್ದೇನೆ: ಕ್ಯಾಮರಾ ಮುಂದೆ ಪ್ರತ್ಯಕ್ಷರಾದ ಇಸ್ರೇಲ್‌ ಪ್ರಧಾನಿ

ಜೆರುಸೇಲಂ: ನಾನಿನ್ನೂ ಬದುಕಿದ್ದೇನೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಸಾವಿನ ವದಂತಿಗಳ ನಡುವೆ ವಿಡಿಯೋದಲ್ಲಿ ಕಾಣಿಸಿಕೊಂಡು ಸಂದೇಶ…

3 hours ago