ಹಾಸನ

ಆಡಳಿತದಲ್ಲಿರುವವರಿಗೆ ಹಾಸನಾಂಬೆ ಸದ್ಭುದ್ಧಿ ಕೊಟ್ಟು ಕಾಪಾಡಲಿ : ಎಚ್‌ಡಿಕೆ

ಹಾಸನ : ಇತಿಹಾಸ ಹೊಂದಿರುವ ಹಾಸನಾಂಬ ದೇಗುಲಕ್ಕೆ ಸಮಸ್ಯೆಗೆ ಪರಿಹಾರ ಬೇಡಿಕೊಳ್ಳಲು ಜನ ಬರುತ್ತಾರೆ. ನಾವೂ ಚಿಕ್ಕ ವಯಸ್ಸಿನ ಮಕ್ಕಳಿದ್ದಾಗಿನಿಂದ ದೇವಿ ಆಶೀರ್ವಾದ ಪಡೆಯಲು ಬರುತ್ತಿದ್ದೆವು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೆನೆದಿದ್ದಾರೆ.

ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನ ನಂತರ ಮಾತನಾಡಿದ ಅವರು, ಅಂದಿನ ದಿನಗಳು‌ ಇಂದಿಗೂ ನೆನಪಿನಲ್ಲಿವೆ. ನಮಗೆ ಜಾತ್ರೆಗಳಿಗೆ ಹೋಗುವಾಗ ಬಹಳ ಖುಷಿ ಇತ್ತು. ಈಗ ರಾಜ್ಯದಲ್ಲಿ ಗ್ರಾಮೀಣ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಅವಾಂತರದಿಂದ ಬೆಳೆ ನಾಶವಾಗಿದೆ. ರಾಜ್ಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಂಕಷ್ಟ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಹಾಸನಾಂಬೆ ದೇವಿಯ ದರ್ಶನ ಮಾಡಿ ತಾಯಿಯ ಅನುಗ್ರಹ ಕೋರಿದ್ದೇನೆ. ನಾಡಿನಲ್ಲಿ ಸಂಪತ್ತಿನ ಕೊರತೆಯಿಲ್ಲ. ಆದರೆ‌ ಅದು ಸಮಾನವಾಗಿ ಹಂಚಿಕೆಯಾಗಬೇಕು. ನಾಡಿನ ಸಂಪತ್ತು ಸರಿಯಾಗಿ ಸದ್ಬಳಕೆ ಆಗಬೇಕು. ಆಡಳಿತ ಮಾಡುವವರಿಗೆ ಒಳ್ಳೆಯ ಸದ್ಭುದ್ಧಿ ಕೊಟ್ಟು ಆ ತಾಯಿ ಕಾಪಾಡಲಿ ಎಂದು‌ ಆಶಿಸಿದ್ದಾರೆ.

ಮನುಷ್ಯರು ನಾವು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಸತ್ಯ ಧರ್ಮ ಹಿಂದಿನ ಕಾಲದಲ್ಲಿ ಇತ್ತು ಈಗ ಕಳೆದುಹೋಗುತ್ತಿದೆ. ಮತ್ತೆ ಅಂತಹ ದಿನಗಳು ಬರಲಿ‌ ಎಂದು ವಿಶೇಷವಾಗಿ ಬೇಡಿದ್ದೇನೆ. ನಮ್ಮ ಜೆಡಿಸ್ ಪಕ್ಷಕ್ಕೂ ಹೆಚ್ಚಿನ ಶಕ್ತಿ ಸಿಕ್ಕಿ ಜನತೆಗೆ ನಮ್ಮ ಪಕ್ಷದಿಂದ ಒಳ್ಳೆಯ ಕೆಲಸ ಮಾಡಲು ದೇವಿ ಶಕ್ತಿ‌ ನೀಡಲಿ ಎಂದು ಬೇಡಿದ್ದೇನೆ ಎಂದಿದ್ದಾರೆ.

lokesh

Recent Posts

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಮಹಿಳೆ ಸ್ವಾಭಿಮಾನದಿಂದ ಬದುಕಲಿ ಎಂಬ ಉದ್ದೇಶದಿಂದ…

1 hour ago

ಕಾಡಾನೆ ದಾಳಿ ; ಜಮೀನಿನ ಶೀಟಿನ ಮನೆ, ಟೊಮೆಟೊ ಬೆಳೆ ನಾಶ

ಗುಂಡ್ಲುಪೇಟೆ : ತಾಲ್ಲೂಕಿನ ಮಂಚಹಳ್ಳಿ ಗ್ರಾಮದ ಮಂಜುನಾಥ ಎಂಬವರ ಜಮೀನಿಗೆ ಶನಿವಾರ ರಾತ್ರಿ ಕಾಡಾನೆ ನುಗ್ಗಿ ಕಟಾವು ಮಾಡಿ ಜಮೀನಿನ…

2 hours ago

ಏಪ್ರಿಲ್.‌11ರಂದು ಬೆಂಗಳೂರಿನಲ್ಲಿ ಜೆಡಿಎಸ್‌ ಜನತಾ ಸಮಾವೇಶ

ಬೆಂಗಳೂರು: ಹಾಸನ ಹಾಗೂ ವಿಜಯಪುರದಲ್ಲಿ ನಡೆಸಿದ ಮಾದರಿಯಲ್ಲೇ ಬೆಂಗಳೂರಿನಲ್ಲೂ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಹಾಗೂ ಜನತಾ ಸಮಾವೇಶವನ್ನು ನಡೆಸಲು…

3 hours ago

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಇಬ್ಬರು ಸಾವು

ಬೆಂಗಳೂರು: ಸಾಲಗಾರರ ಕಾಟದಿಂದ ಮನನೊಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು ತಾಯಿ-ಮಗಳು ಸಾವನ್ನಪ್ಪಿದರೆ, ಮತ್ತಿಬ್ಬರು ಸಾವು ಬದುಕಿನ ನಡುವೆ…

3 hours ago

ತಮಿಳುನಾಡು ಚುನಾವಣೆ: ಎರಡು ಕ್ಷೇತ್ರಗಳಿಂದ ನಟ ವಿಜಯ್‌ ಸ್ಪರ್ಧೆ

ಚೆನ್ನೈ: ಏಪ್ರಿಲ್.23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ನಟ ವಿಜಯ್‌ ಘೋಷಣೆ ಮಾಡಿದ್ದಾರೆ. ಚೆನ್ನೈನ…

3 hours ago

ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ ಒಂದು ಸಿಲಿಂಡರ್:‌ ಸಚಿವ ಮುನಿಯಪ್ಪ

ಬೆಂಗಳೂರು: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ ಒಂದು ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು…

3 hours ago