ಹಾಸನ: ಯುವತಿಯರಿಗೆ ಮದುವೆಯ ಕುರಿತು ಸಾಕಷ್ಟು ಕನಸುಗಳಿರುತ್ತವೆ ಇದೆ ಬಣ್ಣದ ಸ್ಯಾರಿ, ಇಂತದ್ದೆ ಡಿಸೖೆನ್ ಆಭರಣ ಹೀಗೆ ಹಲವಾರು ಕನಸುಗಳಿರುತ್ತವೆ. ಇವೆಲ್ಲದರ ನಡುವೆ ಇಲ್ಲೊಬ್ಬ ಮದುಮಗಳು ತನ್ನ ಮೆಹಂದಿ ಶಾಸ್ತ್ರದಲ್ಲಿ ಕೖೆಗಳಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬುದ್ದರ ಚಿತ್ರ ಬಿಡಿಸಿಕೊಳ್ಳುವುದರ ಮೂಲಕ ಮದುವೆ ಅಭಿಮಾನ ಮೆರೆದಿದ್ದಾರೆ. ಮೆಹಂದಿ ಹಚ್ಚಿಕೊಂಡಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು ಹಾಸನ ಮೂಲದ ಯುವತಿ ವಿನೇತ್ರ ಶ್ರೀ ರವರ ವಿವಾಹವು ಬಿಇ ಮೆಕ್ಯಾನಿಕಲ್ ಇಂಜಿನಿಯರ್ ವಿವೇಕ್ ಮೌರ್ಯ ಎಂಬುವವರ ಜೊತೆ ಇದೆ ಜೂನ್ 5 ರ ಪರಿಸರ ದಿನದಂದು ನಿಶ್ಚಯವಾಗಿದ್ದು. ಹೀಗಾಗಿ ಮದುವೆ ತಯಾರಿಯು ವಿಭಿನ್ನವಾಗಿಯೇ ನಡೆದಿದೆ ಎಂದೇ ಹೇಳಬಹುದು.
ಈ ಬಗ್ಗೆ ಆಂದೋಲನದೊಟ್ಟಿಗೆ ಮಾತನಾಡಿದ ಮದುಮಗ ವಿವೇಕ್ ಮೌರ್ಯ ರವರು ನನ್ನ ಮದುವೆ ಭಿನ್ನವಾಗಿ, ವಿಶೇಷವಾಗಿ, ಇರಬೇಕು ಅಂಥ ತುಂಬ ದಿನದ ಕನಸು ಅದರಂತೆ ವಿವಾಹ ಪೂರ್ಣ ಛಾಯಾಚಿತ್ರಕ್ಕೆ ನಮ್ಮೆಲ್ಲರಿಗೂ ಆದರ್ಶವಾಗಿರುವ ಫುಲೆ ದಂಪತಿಗಳ ರೀತಿ ವೇಷ ಭೂಷಣ ಧರಿಸಿ ಫೋಟೋ ತೆಗೆಸಿಕೊಂಡಿದ್ವಿ. ಈಗ ಮೆಹೆಂದಿ ಶಾಸ್ತ್ರ ಕಾರ್ಯಕ್ರಮದಲ್ಲೂ ನನ್ನ ಸಂಗಾತಿ ವಿನೇತ್ರಶ್ರೀ ವಿಶೇಷ ರೀತಿಯಲ್ಲಿ ಭಗವಾನ್ ಬುದ್ಧ ಮತ್ತು ಬಾಬಾಸಾಹೇಬರ ಚಿತ್ರಗಳನ್ನು ನನ್ನ ಆತ್ಮೀಯ ಗೆಳೆಯ ಯೋಗೇಶ್ ಛಲವಾದಿ ಮೆಹೆಂದಿಯಲ್ಲಿ ಹಾಕುವ ಮೂಲಕ ಹೀಗೂ ಮಾಡಬಹುದು ಅನ್ನೋದನ್ನು ತೋರಿಸಿದ್ದಾರೆ. ಎಂದು ಆಂದೋಲನದೊಟ್ಟಿಗೆ ಮಾತನಾಡಿದ್ದಾರೆ.
ವಿಶ್ವ ಪರಿಸರ ದಿನದಂದು ಸಂವಿಧಾನ ಸಾಕ್ಷಿಯಾಗಿ ವಿನೇತ್ರಾ ಶ್ರೀ ಹಾಗೂ ವಿವೇಕ್ ಮೌರ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕುಟುಂಬಸ್ಥರು ಹಾಗೂ ಸ್ನೇಹಿತರು ಇವರಿಗೆ ಶುಭ ಹಾರೖೆಸಿದ್ದಾರೆ.