hasana marriage
ಹಾಸನ : ಮಹೂರ್ತದ ವೇಳೆ ಹಸೆಮಣೆಯಿಂದ ವಧು ಹೊರ ನಡೆದಿರುವಂತಹ ಘಟನೆ ನಗರದ ಶ್ರೀಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ(ಮೇ.23) ನಡೆದಿದೆ.
ಹಾಸನದ ಬೂವನಹಳ್ಳಿಯ ಯುವತಿ ಪಲ್ಲವಿ ಮತ್ತು ಆಲೂರು ತಾಲೂಕಿನ ಈಶ್ವರಹಳ್ಳಿ ಕೊಡುಗೆ ಗ್ರಾಮದ ಯುವಕ, ಶಿಕ್ಷಕ ವೇಣುಗೋಪಾಲ್ ಮದುವೆ ಶುಕ್ರವಾರ ನಿಗದಿಯಾಗಿತ್ತು. ಅದರಂತೆ ಎಲ್ಲಾ ಕೈಂಕರ್ಯಗಳು ನೆರವೇರಿದ್ದವು. ತಾಳಿ ಕಟ್ಟುವ ಕೆಲ ಕ್ಷಣಗಳ ಮುನ್ನ ವಧುವಿಗೆ ದೂರವಾಣಿ ಕರೆಯೊಂದು ಬಂತು. ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ವಧು ಹಸೆಮಣೆ ಮೇಲಿಂದ ಎದ್ದು ಕೊಠಡಿ ಸೇರಿಕೊಂಡರು.
ಪೋಷಕರು ಮನವೊಲಿಸಿದರೂ ಯುವತಿ ಮದುವೆಗೆ ಒಪ್ಪಲಿಲ್ಲ. ವರನ ಕಡೆಯವರೂ ನಮಗೂ ಈ ಮದುವೆ ಬೇಡ ಎಂದು ಹೊರಟರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಅಹಿತಕರ ಬೆಳವಣಿಗೆ ತಡೆದಿದ್ದಾರೆ.
ಯುವತಿ ಪಲ್ಲವಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಪ್ರಿಯಕರನ ಕರೆ ಬಂದ ತಕ್ಷಣ ಮದುವೆ ಬೇಡ ಎಂದು ಪಲ್ಲವಿ ಹಸೆಮಣೆ ಬಿಟ್ಟು ಮೇಲೆದ್ದರು ಎನ್ನಲಾಗಿದೆ.
ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…
ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ…
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ…
ಬಿಆರ್‌ಟಿ ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲೊಂದು ಬಿಳಿಗಿರಿ ರಂಗನ ಬೆಟ್ಟ (ಬಿಆರ್‌ಟಿ) ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ…
ಮಹೇಶ ಎಲಕುಂಚವಾರ್ ಅವರ ಪ್ರಸಿದ್ಧ ಮರಾಠಿ ನಾಟಕವನ್ನು ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿದ್ದಾರೆ ಮರಾಠಿಯ ಮಹೇಶ ಎಲಕುಂಚವಾರ ಅವರ…
‘ಆಂದೋಲನ’ ತಂಡದಿಂದ ರಿಯಾಲಿಟಿ ಚೆಕ್ ಮೈಸೂರು: ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ, ದಾಹ ತಣಿಸಿಕೊಳ್ಳಲು ಜನರು…